ಬೆಳ್ಮಣ್:ಮಟ್ಕಾ ನಿರತ ವ್ಯಕ್ತಿಯ ಬಂಧನ-Times of karkala

 

ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಠಾಣೆ  ಪಿಎಸ್ಐ ತೇಜಸ್ವಿ ಹಾಗೂ ತಂಡದವರು ಬಂಧಿಸಿದ್ದಾರೆ.ಸುಂದರ ಸಾಲ್ಯಾನ್(65) ಬಂಧಿತ ಆರೋಪಿ.

ದಿನಾಂಕ ಆ.31 ರಂದು ಕಾರ್ಕಳ ತಾಲೂಕು  ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯಲ್ಲಿರುವ ಬಸ್ ನಿಲ್ದಾಣದ ಬಳಿ  ಆರೋಪಿ ಸುಂದರ ಸಾಲ್ಯಾನ್  1 ರೂ ಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಎನ್ನಲಾಗಿದೆ.ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ತೇಜಸ್ವಿ ಇವರು ಸಿಬ್ಬಂಧಿಯವರೊಂದಿಗೆ  ಸ್ಥಳಕ್ಕೆ  ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೊಪಿಯಿಂದ ನಗದು ರೂ 950/-, ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ ಪೆನ್‌ -01 ನ್ನು ವಶಕ್ಕೆ  ಪಡೆದುಕೊಳ್ಳಲಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 










Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget