ಎಲ್.ಐ. ಸಿ ಆಪ್ ಇಂಡಿಯಾ – ಗೋಲ್ಡನ್ ಜುಬಿಲಿ ಫೌಂಡೇಶನ್ ವತಿಯಿಂದ ವಿಜೇತ ವಿಶೇಷ ಶಾಲೆಗೆ ಶಾಲಾ ವಾಹನ ಹಸ್ತಾಂತರ-Times of karkala

ಎಲ್.ಐ. ಸಿ ಆಪ್ ಇಂಡಿಯಾ – ಗೋಲ್ಡನ್ ಜುಬಿಲಿ ಫೌಂಡೇಶನ್ ವತಿಯಿಂದ ವಿಜೇತ ವಿಶೇಷ ಶಾಲೆಗೆ 382 ಸೀಟರ್ ಸೌಲಭ್ಯದ 20 ಲಕ್ಷ ಮೌಲ್ಯದ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮವನ್ನು ಸೀನಿಯರ್ ಡಿವಿಜನಲ್ ಮ್ಯಾನೇಜರ್ ಶ್ರೀಮತಿ ಬಿಂದು ರೋಬರ್ಟ್ ಅವರು ದೀಪ ಪ್ರಜ್ವಲಿಸಿ,ಶಾಲಾ ವಾಹನ ಕೀ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ನೆರವೇರಿಸಿದರು.

ಶ್ರೀಮತಿ ಹರ್ಷಿತಾ ಕಿರಣ್ಕಾರ್ಯಕ್ರಮ ನಿರೂಪಿಸಿ, ಡಾ. ಕಾಂತಿ ಹರೀಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಎಪಿಎಂಸಿ ಅಧ್ಯಕ್ಷರು ಹಾಗೂ ಶಾಲಾ ಅಧ್ಯಕ್ಷರಾದ ಶ್ರೀ ರತ್ನಾಕರ್ ಅಮೀನ್ ಅವರು ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅಥಿಗಳಾಗಿ ಶ್ರೀ ಎನ್. ರಮೇಶ್ ಭಟ್ ಮಾರ್ಕೆಟಿಂಗ್ ಮ್ಯಾನೇಜರ್, ಶ್ರೀ ಮೊಯ್ದಿನ್ ಪಿ.ಕೆ.ಚೀಫ್ ಮ್ಯಾನೇಜರ್, ಶ್ರೀ ಕೆ.ಸದಾಶಿವ ಮ್ಯಾನೇಜರ್ ಸೇಲ್ಸ್, ಶ್ರೀ ಎ. ಮೋಹನ್ ದಾಸ್, ಮ್ಯಾನೇಜರ್ ಇ ಡಿ ಎಂ ಎಸ್,ಶ್ರೀ ಯಜ್ಞೆಶ್ ಸಿ ಎಚ್,ಅಸಿಸ್ಟೆಂಟ್ ಬ್ರ್ಯಾನ್ಚ್ ಮ್ಯಾನೇಜರ್ ಸೇಲ್ಸ್, ಉಪಸ್ಥಿತರಿದ್ದರು.


ವಿಜೇತ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ , ಶಾಲಾ ಕಾರ್ಯದರ್ಶಿ ಶ್ರೀ ಹರೀಶ್, ಕೋಶಾಧಿಕಾರಿ ಶ್ರೀ ಸಿಯಾ ಸಂತೋಷ್ ನಾಯಕ್, ಟ್ರಸ್ಟಿ ಶ್ರೀ ಕಿರಣ್ ಶೆಟ್ಟಿ, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀ ಕೆ. ರಾಧಾಕೃಷ್ಣ ಶೆಟ್ಟಿ, ಜನಪ್ರಿಯ ರೈಸ್ ಮಿಲ್ ಮಾಲಕರಾದ ಶ್ರೀ ಮಂಜುನಾಥ ಪೂಜಾರಿ, ಕ.ರಾ.ವಿಶೇಷ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಅಗ್ನೇಸ್ ಕುಂದರ್, ಶಾಲಾ ಹಿತೈಷಿಗಳಾದ ಶ್ರೀ ರತ್ನಾಕರ್ ಶೆಟ್ಟಿ ಎಣ್ಣೆಹೊಳೆ, ಮಕ್ಕಳು ,ಹೆತ್ತವರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.




 

ಜಾಹೀರಾತು 

















ಜಾಹೀರಾತು 

















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget