"ಬಿಜೆಪಿಯ ನಕಲಿ ಹಿಂದುತ್ವದ ನಾಟಕ ಜನತೆಯ ಮುಂದೆ ಬಟಾ ಬಯಲಾಗಿದೆ"-ಪ್ರಕಾಶ್ ಪೂಜಾರಿ-Times of karkala

ಬಿಜೆಪಿ ಭಾಷಣದಲ್ಲಿ ಹಿಂದುತ್ವದ ಕುರಿತು ಮಾತನಾಡಿ ಇದೀಗ ದೇವಸ್ಥಾನಗಳನ್ನು ಧ್ವ೦ಸ ಮಾಡುತ್ತಿರುವುದು ಬಿಜೆಪಿಯ ನಕಲಿ ಹಿಂದುತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಅಲ್ಲದೆ ಬಿಜೆಪಿಯ ನಾಟಕ ಜನತೆಯ  ಮುಂದೆ ಬಟಾ ಬಯಲಾಗಿದೆ  ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪೂಜಾರಿ ಹೇಳಿದ್ದಾರೆ.

ಇದೀಗ ಸುಪ್ರೀಂ ಕೋರ್ಟ್ ಆದೇಶದ ನೆಪ ಹೇಳಿ ಪ್ರಕರಣಕ್ಕೆ ತೇಪೆಹಚ್ಚುವ ಕೆಲಸ ಮಾಡುತ್ತಿರುವುದು ನಾಚಿಕೆ ಕೇಡಿನ ವಿಚಾರ,ಪ್ರತ್ಯಕ್ಷವಾಗಿ ದೇವಾಲಯಗಳ ಧ್ವಂಸಕ್ಕೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಆರೋಪ ಮಾಡಿದ್ದಾರೆ.

ಸರಕಾರ ಕೂಡಲೇ ದೇವಸ್ಥಾನಗಳನ್ನು ಒಡೆದು ಹಾಕುವ ಕೆಲಸ ನಿಲ್ಲಿಸಬೇಕು. ಕೋರ್ಟ್ ಆದೇಶದ ವ್ಯಾಪ್ತಿಯಡಿಯಲ್ಲಿ ಬರುವ ದೇವಸ್ಥಾನಗಳನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ಥಳಾಂತರಿಸಬೇಕು. ಈಗಾಗಲೇ ಒಡೆದು ಹಾಕಿರುವ ದೇವಸ್ಥಾನಗಳ ಪುನರ್‌‌ನಿರ್ಮಾಣಕ್ಕೆ ಸ್ಥಳ ಒದಗಿಸಿ ಆರ್ಥಿಕ ನೆರವು ಒದಗಿಸಬೇಕು ಎಂದು ಅವರು ಹೇಳಿದ್ದಾರೆ.

ಜಾಹೀರಾತು 


























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget