ಬೈಲೂರು:ವಿದ್ಯಾಸೇತು ಯೋಜನೆಯಡಿಯಲ್ಲಿ ಉಚಿತ ಪುಸ್ತಕ ವಿತರಣೆ-Times of karkala

ಕರೋನಾ ಸಂಕಷ್ಟದಿಂದಾಗಿ ಮನೆಯಲ್ಲಿ ಉಳಿದಂತಹ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆ ಕರ್ನಾಟಕ ಇವರ ಜಂಟಿ ಆಶ್ರಯದಲ್ಲಿ,ರೋಟರಿ ಸಂಸ್ಥೆ ಕಾರ್ಕಳ  ಪ್ರಾಯೋಜಕತ್ವದಲ್ಲಿ   ವಿದ್ಯಾರ್ಥಿಗಳಿಗೆ ವಿದ್ಯಾಸೇತು ಎಂಬ ಯೋಜನೆಯಡಿಯಲ್ಲಿ ಉಚಿತ ಪುಸ್ತಕವನ್ನು ಬೈಲೂರು ಹೈಸ್ಕೂಲಿನಲ್ಲಿ ಹಸ್ತಾಂತರಿಸಲಾಯಿತು.


ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಗವರ್ನರ್ ರೊಟೇರಿಯನ್ ಡಾಕ್ಟರ್ ಭರತೇಶ್ ಅದಿರಾಜ್  ಭಾಗವಹಿಸಿ ಮಾತನಾಡುತ್ತಾ "ವಿದ್ಯಾಸೇತು ,ಜ್ಞಾನ ದೀವಿಗೆ ಹೀಗೆ ಹಲವಾರು ಯೋಜನೆಗಳ ಮೂಲಕ ವಿದ್ಯಾಭ್ಯಾಸಕ್ಕೆ ರೋಟರಿ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಇರುವುದು ನಿಜವಾಗಿಯೂ ಹೆಮ್ಮೆಯ ವಿಷಯ" ಎಂದು ಈ ಸಂದರ್ಭದಲ್ಲಿ ಹೇಳಿದರು .

ಈ ಸಂದರ್ಭದಲ್ಲಿಎಸ್ಸೆಸ್ಸೆಲ್ಸಿ  ಕನ್ನಡ ಮಾಧ್ಯಮದ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು .ರೊಟೇರಿಯನ್ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿ ವಿದ್ಯಾ ಸೇತು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಬೈಲೂರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ   ನಾಗರಾಜ   ಸ್ವಾಗತಿಸಿ ಪ್ರಸ್ತಾವನೆಗೈದರು .

ಈ ಸಂದರ್ಭದಲ್ಲಿ ಸರಕಾರಿ ಪ್ರೌಡಶಾಲೆ ಪಳ್ಳಿ  ಹಾಗೂ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆ    ವಿದ್ಯಾಸೇತು ಕಾರ್ಯಕ್ರಮವನ್ನು ಮುಂದುವರಿಸಲಾಯಿತು .ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಪಳ್ಳಿಯ ಉಪ ಪ್ರಾಂಶುಪಾಲರಾದ ಜಯಶ್ರೀ ಎಂ ಆರ್ , ಮುಖ್ಯೋಪಾಧ್ಯಾಯರಾದ ಆನಂದ ಶೆಟ್ಟಿ ,ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ  ಸಂಜೀವ ,  ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ,ಸಮುದಾಯ ಸೇವಾ ನಿರ್ದೇಶಕರಾದ ಶೈಲೇಂದ್ರ ರಾವ್ , ರೊಟೇರಿಯನ್ ಬಾಲಕೃಷ್ಣ ದೇವಾಡಿಗ ಮುಂತಾದವರುವೇದಿಕೆಯಲ್ಲಿ  ಉಪಸ್ಥಿತರಿದ್ದರು .

ಜಾಹೀರಾತು 


























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget