ಕಾಳಿಕಾಂಬ ಜ್ಯೋತಿ ರಂಗಮಂಟಪದಲ್ಲಿ ಶಾಂತಿ‌ ನೃತ್ಯ ನಿಕೇತನ ಭರತನಾಟ್ಯ ತರಗತಿಯ ಉದ್ಘಾಟನೆ-Times of karkala

 ಭರತನಾಟ್ಯ ತರಗತಿಯ ಉದ್ಘಾಟನೆ



ನೃತ್ಯ ಎನ್ನುವುದು ಒಂದು ಸಾಧನೆ, ಸಿದ್ಧಿಸಿದರೆ ಮಾತ್ರ ಅದು ಸಾಧ್ಯವಾಗುವುದು, ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮದ ಜೊತೆಗೆ ಪೋಷಕರ ಪ್ರೋತ್ಸಾಹದ ಅಗತ್ಯವಿದೆ. ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ ಕರ್ನಾಟಕ‌ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ತಿಳಿಸಿದರು.

ಅವರು ಕಾಳಿಕಾಂಬ ಜ್ಯೋತಿ ರಂಗಮಂಟಪದಲ್ಲಿ  ಶಾಂತಿ‌ ನೃತ್ಯ ನಿಕೇತನ ಭರತನಾಟ್ಯ ತರಗತಿಯ ಉದ್ಘಾಟನೆಯನ್ನು ದೀಪ ಬೆಳಗಿಸಿ ಮಕ್ಕಳಿಗೆ ಹೆಚ್ಚೆ ಹಾಕಿಸುವುದರ ಮೂಲಕ ಉದ್ಘಾಟಿಸಿ‌ ಮಾತನಾಡಿದರು.

ಮುಖ್ಯ ಅತಿಥಿಯಾಗಿ‌‌ ಭಾಗವಹಿಸಿದ ವಿದುಷಿ ಶ್ರಿಮತಿ ಶ್ರಿಲತಾ ನಾಗರಾಜ್, ಪುರಸಭಾ ಸದಸ್ಯ‌ ಶುಭದರಾವ್ ಸಂದರ್ಭೋಚಿತ ಮಾತುಗಳನ್ನಾಡಿದರು. 

ಈ ಸಂದರ್ಭ ಜ್ಯೋತಿ ಯುವಕಮಂಡಲದ ವಜ್ರಮಹೋತ್ಸವ ‌ಸಮಿತಿಯ ಅದ್ಯಕ್ಷರಾದ ಶಿವದೇವಾಡಿಗ, ಶ್ರೀಮತಿ ಪ್ರೇಮ‌ ಜೆ ಶಾಂತಿ ಮೊದಲಾದವರು  ಉಪಸ್ಥಿತಿತರಿದ್ದರು. ನೃತ್ಯ ತರಗತಿಯ ಗುರುಗಳಾದ ವಿದುಷಿ ಸುಶ್ಮಿತಾ‌‌‌ ಎಸ್‌ ಎನ್ ಸ್ವಾಗತಿಸಿದರು, ಶುಭಕರ್ ಅಂಚನ್ ಕಾರ್ಯಕ್ರಮವನ್ನು ನಿರೂಪಿಸಿ‌ ಸುದೀಂದ್ರ ಶಾಂತಿ ಧನ್ಯವಾದವಿತ್ತರು.

ಜಾಹೀರಾತು 




















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget