ಲಾಕ್ಡೌನ್ ಸಂದರ್ಭದಲ್ಲಿ ಸಂಬಳವೇ ಇಲ್ಲದಂತಹ ಶಿಕ್ಷಕರಿಗೆ ದಿನಸಿ ಕಿಟ್ ಕೊಡುವ ಮೂಲಕ ಶಿಕ್ಷಕ ದಿನಾಚರಣೆ-Times of karkala

 

ಕಾರ್ಕಳದ ಯೂತ್ ಫಾರ್ ಸೇವಾ ತಂಡವು ಲಾಕ್ಡೌನ್ ಸಂದರ್ಭದಲ್ಲಿ ಸಂಬಳವೇ ಇಲ್ಲದಂತಹ ಶಿಕ್ಷಕರಿಗೆ ದಿನಸಿ ಕಿಟ್ ಕೊಡುವ ಮೂಲಕ ಮಾದರಿ ಕಾರ್ಯಕ್ರಮವು ರಾಮಪ್ಪ ಶಾಲೆ ಆನೆಕೆರೆಯಲ್ಲಿ ನಡೆಯಿತು.

ಲಾಕ್ಡೌನ್ ಸಂದರ್ಭದಲ್ಲಿ ಅನುದಾನಿತ ಶಾಲೆಗಳ ಕಷ್ಟವನ್ನು ಎಳೆ ಎಳೆಯಾಗಿ ಹೇಳುತ್ತಾ ಹಲವಾರು ಶಿಕ್ಷಕರಿಗೆ ಸಂಬಳವೇ ಇಲ್ಲದಂತ ಸಮಯದಲ್ಲಿ ಹೀಗೊಂದು ವಿಭಿನ್ನ ಶಿಕ್ಷಕರ ದಿನಾಚರಣೆಯನ್ನು ಆಚರಿಸಬಹುದು ಎಂದು ಈ ತಂಡವು ನಮಗೆ ತೋರಿಸಿಕೊಟ್ಟಿದೆ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಾಮಪ್ಪ ಶಾಲೆಯ ಮುಖ್ಯೋಪಾಧ್ಯಾಯರು ಆಗಿರುವ ಹರೀಶ್ ಶೆಟ್ಟಿಯವರು ತಿಳಿಸಿದರು. 

ಮುಖ್ಯ ಅತಿಥಿಯಾಗಿ ಆಗಮಿಸಿರುವ ಉದ್ಯಮಿ ಶ್ರೀಮತಿ ಗೀತಾ ಪೈಯವರು ಶಿಕ್ಷಕರಿಗೆ ಒಂದು ತಿಂಗಳ ಸಂಬಳದ ವ್ಯವಸ್ಥೆಯನ್ನು ಮಾಡಿದ್ದಲ್ಲದೆ, ಹೊಸದಾಗಿ ಪ್ರಾರಂಭವಾದ ಶಾಲೆಗೆ ಬಂದಂತಹ ಮಕ್ಕಳಿಗೆ ಶುಭಕೋರಿದರು. ಶಾಲು ಸನ್ಮಾನಗಳನ್ನು ಹೊದಿಸಿ ಮಾಡುವ ಶಿಕ್ಷಕರ ದಿನಾಚರಣೆಯ ಬದಲು ವಿಭಿನ್ನವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು ಯೂತ್ ಫಾರ್ ಸೇವಾ ತಂಡದ ಸದಸ್ಯೆ ಶ್ರೀಮತಿ ರಮಿತಾ ಶೈಲೆಂದ್ರ ರಾವ್ ತಿಳಿಸಿದರು. 

ವೇದಿಕೆಯಲ್ಲಿ ವಾರ್ಡ್ ಕೌನ್ಸಿಲರ್ ಆಗಿರುವ ಶ್ರೀಮತಿ ಮೀನಾಕ್ಷಿ ಗಂಗಾಧರ್, ಯೂತ್ ಫಾರ್ ಸೇವಾ ತಂಡದ ಸದಸ್ಯ ರಾಘವೇಂದ್ರ ಪ್ರಭು ಶ್ರೀಮತಿ ಚಂದ್ರಿಕಾ ಅವರು ಅಲಂಕರಿಸಿದ್ದರು. ಕಾರ್ಯಕ್ರಮದಲ್ಲಿ ಆರು- ಏಳನೇ ತರಗತಿಯ ಮುದ್ದು ಮಕ್ಕಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು, ಶಾಲೆಯ ಶಿಕ್ಷಕಿ ಶ್ರೀಮತಿ ಶಿಲ್ಪಾ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದವನ್ನು ಸಲ್ಲಿಸಿದರು.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget