ಸಾಣೂರು:ವಿಶ್ವ ಯುವ ಕೌಶಲ್ಯ ದಿನಾಚರಣೆ,ಮಾಹಿತಿ ಕಾರ್ಯಾಗಾರ-Times of karkala


  




ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ  ಮಂಡಲ (ರಿ.) ಸಾಣೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ, ಕರ್ನಾಟಕ  ಸಂಘ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ
ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ ಮಾಹಿತಿ ಕಾರ್ಯಾಗಾರ  ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿ ನಡೆಯಿತು ಕಾರ್ಯಾಗಾರವನ್ನು ಸಾಣೂರು ಗ್ರಾಮ ಪಂಚಾಯತ್ ಸದಸ್ಯರಾದ ಯುವರಾಜ್ ಜೈನ್ ಉದ್ಘಾಟಿಸಿದರು. 

ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಚೇತಾ ಕಾಮತ್ ವಹಿಸಿದ್ದರು ವೇದಿಕೆಯಲ್ಲಿ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಕುಮಾರ್,ಶಂಕರ್ ಶೆಟ್ಟಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.

ಮಂಡಲದ ಮಾಜಿ ಅಧ್ಯಕ್ಷರುಗಳಾದ  ದೇವಾನಂದ್ ಶೆಟ್ಟಿ, ಪ್ರಕಾಶ್ ಮಡಿವಾಳ, ಸದಸ್ಯರಾದ ಅನಿಲ್ ಕೋಟ್ಯಾನ್ ಸೀತಾರಾಮ್ ಕಾಲೇಜಿನ ಉಪನ್ಯಾಸಕರು ನೆಹರು ಯುವ ಕೇಂದ್ರದ ವರ್ಷಿತಾ ಕಾರ್ಯಾಗಾರದಲ್ಲಿ ಭಾಗವಹಿದ್ದರು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಸ್ವಾಗತಿಸಿ ಕೋಶಾಧಿಕಾರಿ ರಾಜೇಶ್ ಪೂಜಾರಿ ಧನ್ಯವಾದಗೈದರು 

ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಸ್ವಉದ್ಯೋಗ  ವಿಷಯದಲ್ಲಿ  ಉಡುಪಿ ಸಮೂಹ ಸಂಸ್ಥೆ ಮಣಿಪಾಲ ಉಪನ್ಯಾಸಕರಾದ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಇವರು ಮಾಹಿತಿ ನೀಡಿದರು 

ಪಿ ಯು ಸಿ ನಂತರ ಮುಂದೆನು? ವಿದ್ಯಾರ್ಥಿಗಳ ಆಯ್ಕೆ ಈ ವಿಚಾರದಲ್ಲಿ 
ಕಾರ್ಕಳ ಭುವನೇಂದ್ರ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ   ಪ್ರೊ| ಚಂದ್ರಕಾಂತ ಗೋರೆ ಇವರು ಕಾರ್ಕಳ ಇವರು ಕಾರ್ಯಾಗಾರ ನಡೆಸಿಕೊಟ್ಟರು.
ಜಾಹೀರಾತು 






























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget