ಕಾರ್ಕಳ:ನಂಬರ್‌ ಪ್ಲೇಟ್‌ ಇಲ್ಲದ ಬೈಕನ್ನು ತಪಾಸಣೆಗೆಂದು ನಿಲ್ಲಿಸಿದರೂ ನಿಲ್ಲಿಸದೆ ದರ್ಪ ತೋರಿಸಿದ ಬೈಕ್ ಸವಾರನ ಮೇಲೆ ಕೇಸು ದಾಖಲಿಸಿದ ಪಿಎಸ್ಐ-Times of karkala

 

ನಂಬರ್‌ ಪ್ಲೇಟ್‌ ಇಲ್ಲದ ಬೈಕನ್ನು ತಪಾಸಣೆಗೆಂದು  ನಿಲ್ಲಿಸಿದರೂ ನಿಲ್ಲಿಸದೆ ದರ್ಪ ತೋರಿಸಿದ ಬೈಕ್ ಸವಾರನ ಮೇಲೆ ಕಾರ್ಕಳ  ನಗರ ಪೊಲೀಸ್‌ ಠಾಣೆ ಪಿಎಸ್‌ಐ  ಮಧು  ಬಿ ಇ   ಠಾಣೆ ಕೇಸು ದಾಖಲಿಸಿಕೊಂಡಿದ್ದಾರೆ.  

ಕಾರ್ಕಳ ತಾಲೂಕು  ಕುಕ್ಕುಂದೂರು  ಗ್ರಾಮದ   ಜೋಡುರಸ್ತೆ  ಬೋಳ  ರಾಘವೇಂದ್ರ  ಕಾಮತ್‌   ವೃತ್ತದ  ಬಳಿ   ಕಾರ್ಕಳ  ನಗರ ಪೊಲೀಸ್‌  ಠಾಣೆ ಪಿಎಸೈ ಮಧು  ಬಿ ಹಾಗೂ ಸಿಬ್ಬಂದಿಗಳಾದ ಎಎಸ್‌ಐ   ದಿನಕರ ಮತ್ತು ಗಿರಿಧರ  ಪೈಯವರ  ವಾಹನ ತಪಾಸಣೆ  ಮಾಡುತ್ತಿದ್ದರು

ಈ  ಸಮಯದಲ್ಲಿ ಕಾರ್ಕಳ  ಬಂಗ್ಲೆಗುಡ್ಡೆ ಜಂಕ್ಷನ್‌ ಕಡೆಯಿಂದ  ಉಡುಪಿ ಕಡೆಗೆ  ಬೈಕ್ ಸವಾರನೊಬ್ಬ  ಹೆಲ್ಮೇಟ್‌   ಧರಿಸದೇ  ಸಹ ಸವಾರನನ್ನು ಕುಳ್ಳಿರಿಸಿಕೊಂಡು  ಅತೀ ವೇಗ  ಮತ್ತು ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ದೂರದಲ್ಲಿಯೇ ನೋಡಿ ಮೋಟಾರ್‌  ಸೈಕಲ್‌ ಸವಾರನಿಗೆ  ಕೈ ಸನ್ನೆ ಮಾಡಿ ಮೋಟಾರ್‌ ಸೈಕಲನ್ನು ಬದಿಗೆ ನಿಲ್ಲಿಸುವಂತೆ   ಸೂಚನೆ ನೀಡಿದ್ದರು.\

ಆದರೆ ಸೂಚನೆಯನ್ನು ಮೋಟಾರ್‌ ಸೈಕಲ್‌ ಸವಾರನು ಪಾಲಿಸದೇ ಅದೇ  ವೇಗದಲ್ಲಿ ಪಿಎಸ್ಐ  ಹಾಗೂ ಸಿಬ್ಬಂದಿಯವರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಾಗುವಂತೆ ಸವಾರಿಮಾಡಿಕೊಂಡು ಉಡುಪಿ ಕಡೆಗೆ ಬೈಕನ್ನು ಸವಾರಿ ಮಾಡಿಕೊಂಡು ಹೋಗಿದ್ದು ಈ ಸಮಯದಲ್ಲಿ ಮೋಟಾರ್‌ ಸೈಕಲಿಗೆ ಮುಂದುಗಡೆ ಮತ್ತು ಹಿಂದುಗಡೆ ನಂಬರ್‌ ಪ್ಲೇಟ್‌  ಇರುವುದಿಲ್ಲ.ಮೋಟಾರ್‌  ಸೈಕಲ್‌ ಕಪ್ಪು ಬಣ್ಣದ ಯಮಹ  ಕಂಪೆನಿ ತಯಾರಿಕೆಯ ಮೋಟಾರ್‌  ಸೈಕಲ್‌  ಆಗಿರುತ್ತದೆ. 

ಮೋಟಾರ್‌  ಸೈಕಲ್‌  ಸವಾರನು ನೀಲಿ ಬಣ್ಣದ ಜಿನ್ಸ್‌ ಪ್ಯಾಂಟ್‌, ಕಪ್ಪು  ಬಣ್ಣದ ಬಿಳಿ ಹೂವಿನ ಚಿತ್ರ  ಇರುವ ತುಂಬು  ತೋಳಿನ ಶರ್ಟ್‌, ಸಹಸವಾರನು ಕಪ್ಪು ಬಣ್ಣದ ಪ್ಯಾಂಟ್‌ ಕಪ್ಪು ಬಣ್ಣದ ತುಂಬು ತೋಳಿನ ಎದೆಯ  ಭಾಗದಲ್ಲಿ  ಎರಡು ಬಿಳಿ ಗೆರೆಗಳಿರುವ ರೌಂಡ್  ನೆಕ್‌ ಬನಿಯಾನ್‌  ಧರಿಸಿದ್ದರು ಎನ್ನಲಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 
















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget