ಕಾರ್ಕಳ:ಜಾತಿ ನಿಂದನೆ,ಹಲ್ಲೆ ನಡೆಸಿ ಕೊಲೆ ಬೆದರಿಕೆ:ದೂರು ದಾಖಲು-Times of karkala

ಕಾರ್ಕಳ:ಜಾತಿ ನಿಂದನೆ,ಹಲ್ಲೆ ನಡೆಸಿ ಕೊಲೆ ಬೆದರಿಕೆ:ದೂರು ದಾಖಲು 

ಯರ್ಲಪಾಡಿ ನಿವಾಸಿ ಅಕ್ಷತ್‌ ಹೆಗ್ಡೆ ಎಂಬುವವರಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ನಿತೀಶ್‌ ಕರ್ಕೇರ ಎಂಬುವವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅಕ್ಷತ್‌ ಹೆಗ್ಡೆ ದೂರು ನೀಡಿದವರು.

ಕಾರ್ಕಳ ನಗರ ಪೊಲೀಸ್ ಠಾಣೆ
ಅಕ್ಷತ್‌ ರವರು ಆ.31 ರಂದು ರಾತ್ರಿ 8:00 ಗಂಟೆಯ ಹೊತ್ತಿಗೆ ತನ್ನ ಸ್ನೇಹಿತ ಸಂದರ್ಶನ ಹೆಗ್ಡೆಯ ಜೊತೆ  ಗೊವಿಂದೂರು ಮಾವಿನಕಟ್ಟೆಯ ಬಳಿ ಕುಳಿತುಕೊಂಡು ಮಾತನಾಡುತ್ತಿರುವಾಗ ನಿತೀಶ್‌ ಕರ್ಕೇರರವರು  ಸಂದರ್ಶನ ಹೆಗ್ಡೆಯ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಅಕ್ಷತ್‌ ಹೆಗ್ಡೆ ರವರ  ತಂದೆ ತಾಯಿಗೆ  ಕೀಳುಮಟ್ಟದಲ್ಲಿ  ಬೈಯ್ಯುತ್ತಾ, ಕೊಲೆ ಬೆದರಿಕೆ ಹಾಕಿರುದ್ದಾರೆ.ಅಲ್ಲದೆ  ಅಕ್ಷತ್‌ ಹೆಗ್ಡೆ ರವರ ಜಾತಿ ಹೆಗ್ಗಡೆ ಸಮುದಾಯದ ಬಗ್ಗೆ ಕೆಟ್ಟದಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾನೆ.

ಅಲ್ಲದೇ ನಿನ್ನೆ (ಸೆ.01 ರಂದು) ಬೆಳಿಗ್ಗೆ 8:00 ಗಂಟೆಯ ಹೊತ್ತಿಗೆ ಅಕ್ಷತ್‌ ಹೆಗ್ಡೆ ರವರು  ಕೆಲಸಕ್ಕೆ ಗೊವಿಂದೂರು ಶಾಲೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಿತೀಶ್‌ ಕರ್ಕೆರನು ಮೋಟಾರ್‌ ಸೈಕಲಿನಲ್ಲಿ ಬಂದು ಮೋಟಾರ್‌ ಸೈಕಲನ್ನು ಅಡ್ಡವಾಗಿ ಇಟ್ಟು ಇವರ ಕೆನ್ನೆಗೆ ಹಾಗೂ ಮೈಗೆ ಮಾರಾಣಾಂತಿಕ ಹಲ್ಲೆ  ನಡೆಸಿರುತ್ತಾರೆ ಮತ್ತು ನಿನ್ನನ್ನು ಸದ್ಯದಲ್ಲೇ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 










Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget