ಕಾರ್ಕಳ:ಜೋಡುರಸ್ತೆ ಕಾರ್ಕಳದ ವ್ಯವಹಾರ ಕೇಂದ್ರವಾಗಿ ಮಾರ್ಪಡಲಿದೆ-ಎಂ.ಕೆ. ವಿಜಯಕುಮಾರ್ ಜೋಡುರಸ್ತೆ ಪೂರ್ಣಿಮಾ ಲೈಫ್ ಸ್ಟೈಲ್ ಮಾಲ್‌ನ ಒಳಾಂಗಣ ವಿಸ್ಯಾಸಕ್ಕೆ ಚಾಲನೆ-Times of karkala

ಕಾರ್ಕಳ: ವ್ಯಾಪಾರ ಸಂಕೀರ್ಣಗಳು, ಬ್ಯಾಂಕ್‌ಗಳು, ವಸತಿ ಸಮುಚ್ಚಯಗಳು ಸೇರಿದಂತೆ ಇನ್ನಿತರ ಉದ್ಯಮ ವ್ಯವಹಾರಗಳು ಜೋಡುರಸ್ತೆಯ ಪರಿಸರದಲ್ಲಿ ಹೆಚ್ಚು ಹೆಚ್ಚಾಗಿ ಆರಂಭಗೊಳ್ಳುತ್ತಿರುವುದರಿಂದ ಮೂಲಕ ಆ ಪ್ರದೇಶವು ತಾಲೂಕಿನ ವ್ಯವಹಾರ ಕೇಂದ್ರವಾಗಿ ಮಾರ್ಪಡಲಿದೆ. ತನ್ಮೂಲಕ ಸ್ವ ಉದ್ಯೋಗ ಹಾಗೂ ಇತರರಿಗೆ ಉದ್ಯೋಗ ವಿಫುಲ ಅವಕಾಶ ದೊರಕಲಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ, ಹಿರಿಯ ವಕೀಲ ಎಂ.ಕೆ ವಿಜಯಕುಮಾರ್ ಹೇಳಿದರು.

ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಲೈಫ್ ಸ್ಟೈಲ್ ಮಾಲ್‌ನ ಒಳಾಂಗಣ ವಿಸ್ಯಾಸಕ್ಕೆ ಚಾಲನಾ ಕಾರ್ಯಕ್ರಮದ ಬಳಿಕ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಾಪುರ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಾರು ರವೀಂದ್ರ ಪ್ರಭು ಮಾತನಾಡಿ, "ಊರುಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವಾಗಿರುವ ಜೋಡುರಸ್ತೆಯು ಬ್ಯಾಂಕಿಂಗ್ ವ್ಯವಹಾರ ಪ್ರಸಿದ್ಧಿ ಹೊಂದಿದೆ. ಜಿಲ್ಲೆಯ ಜನತೆಯನ್ನು ಸೆಳೆಯುವಂತಹ ಕೇಂದ್ರವಾಗಿ ಜೋಡುರಸ್ತೆ ಮಾರ್ಪಡಬೇಕು. ಇನ್ನು ಹಲವಾರು ವ್ಯವಹಾರ ಕ್ಷೇತ್ರಗಳು ಈ ವಲಯದಲ್ಲಿ ಆರಂಭಗೊಳ್ಳಲಿ" ಎಂದರು.

ವಕೀಲ ಶೇಖರ್ ಮಡಿವಾಳ, ಕುಂದಾಪುರ ಸಹನಾ ಗ್ರೂಪ್‌ನ ಅಧ್ಯಕ್ಷ ಸುರೇಂದ್ರ ಶೆಟ್ಟಿ ಮಾತನಾಡಿ ಕಾರ್ಕಳದ ಉದ್ಯಮಿಗಳು ಕಾರ್ಕಳ ತಾಲೂಕಿನಲ್ಲಿಯೇ ಹಲವು ಉದ್ಯಮಗಳನ್ನು ಸ್ಥಾಪನೆಗೆ ಮುಂದಾಗುವ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸುವಂತಾಗಲಿ. ವಿವಿಧ ಕ್ಷೇತ್ರಗಳ ಉದ್ಯಮಗಳ ಪ್ರಾರಂಭಗೊಳ್ಳಬೇಕೆಂದು ಶುಭಾಂಶನೆಗೈದರು.

ಪೂರ್ಣಿಮಾ ಸಮೂಹ ಸಂಸ್ಥೆಯ ಪಾಲುದಾರ ಮಾಲಿಕ ರವಿಪ್ರಕಾಶ್ ಪ್ರಭು ಮಾತನಾಡಿ, ಸಂತೃಪ್ತ ಗ್ರಾಹಕರೇ ಶಾಶ್ವತ ಆಸ್ತಿ, ಗ್ರಾಹಕರ ಆಶೀರ್ವಾದವೇ ನಮಗೆ ಶ್ರೀ ರಕ್ಷೆ ಎಂಬ ಧ್ಯೇಯೋವಾಕ್ಯದಲ್ಲಿ ಆರಂಭಗೊಂಡ ಪೂರ್ಣಿಮಾ ಸಮೂಹ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದೆ. ಜೊತೆಗೆ ಸಾಮಾಜಿಕ ಚಟುವಿಟಿಕೆಯಲ್ಲಿ ತೊಡಗಿಸಿದೆ ಎಂದರು.

ತಹಶೀಲ್ದಾರ್ ಪ್ರಕಾಶ್ ಎಸ್. ಮನವಳಿ, ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ ಉದಯ ಎಸ್.ಕೋಟ್ಯಾನ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಸುವೃತ್ ಕುಮಾರ್, ಉದ್ಯಮಿ ನಿತ್ಯಾನಂದ ಪೈ, ಸಚ್ಚಿನ್ ಕೋಟ್ಯಾನ್, ಚೆನೈ ಅಮರ್ ಆರ್ಕ್‌ಟೆಕ್ ಎಂಡ್ ಡಿಸೈನಿಂಗ್‌ನ ಸತೀಶ್ ಪಿಳೈ, ಮಾರುತಿ ಡಿಸೈನಿಂಗ್‌ನ ಆರ್. ಬಾಲಕೃಷ್ಣ, ಗೋವಿಂದರಾಜ್, ಪೂರ್ಣಿಮಾ ಸಂಸ್ಥೆಯ ಉಮಾನಾಥ ಪ್ರಭು, ಹರಿಪ್ರಸಾದ್ ಪ್ರಭು, ಕಿರಣ ರವಿಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget