ಕಾರ್ಕಳ: ಶ್ರೀ ರಾಮಕೃಷ್ಣ ಮಿಷನ್ ವತಿಯಿಂದ ತ್ಯಾಜ್ಯ ವಿಲೇವಾರಿ ಕುರಿತ ಮಾಹಿತಿ ಕಾರ್ಯಗಾರ-Times of karkala

 ಕಾರ್ಕಳ: ಪುರಸಭೆಯ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛ ಕಾರ್ಕಳ ಸುಂದರ ಕಾರ್ಕಳ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಶ್ರೀರಾಮಕೃಷ್ಣ ಮಿಷನ್ ಸಹಕಾರ ನೀಡುವುದಾಗಿ ಮಂಗಳೂರು ರಾಮಕೃಷ್ಣ ಮಿಶನ್‌ನ ಶ್ರೀ ಏಕಗಮ್ಯ ಸ್ವಾಮೀಜಿ ಹೇಳಿದರು.


ಕಾರ್ಕಳ ಪುರಸಭೆಯ ಸಭಾಂಗಣದಲ್ಲಿ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಶ್ರೀ ರಾಮಕೃಷ್ಣ ಮಿಷನ್ ಇವರಿಂದ ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛ ಪರಿಸರ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದು ತ್ಯಾಜ್ಯವನ್ನೇ ಆದಾಯ ಮೂಲವನ್ನಾಗಿರಿಸಿ ಪರಿವರ್ತಿಸಿರುವುದು 5 ವರ್ಷದ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿದೆ" ಎಂದರು.

"ತ್ಯಾಜ್ಯ ನಿರ್ವಹಣೆಯ ಕುರಿತಂತೆ ರಿಸೋರ್ಸ್‌ಮೆನೇಜ್‌ಮೆಂಟ್ ಸ್ಟಾರ್ಟ್‌ಆಪ್ ಮಾಡಿ ತ್ಯಾಜ್ಯವನ್ನೇ ಸಂಪನ್ಮೂಲವನ್ನಾಗಿ ಪರಿವರ್ತಿವಲ್ಲಿ ಯಶಸ್ವಿಯಾಗಿದೆ. ಇಂತಹ ಕಾರ್ಯಕ್ರವನ್ನು ಗ್ರಾಮೀಣ ಮಟ್ಟದಲ್ಲಿ ಮೊಟ್ಟ ಮೊದಲಬಾರಿಗೆ ಉಪ್ಪಿನಂಗಡಿಯಲ್ಲಿ ನಿರ್ವಹಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಕಾರ್ಕಳದಲ್ಲಿ ಆ ಕಾರ್ಯನಡೆಸುವಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ" ಎಂದಿದ್ದಾರೆ.

ಕಸ-ತ್ಯಾಜ್ಯದ ಬಗ್ಗೆ ತಾತ್ಸಾರ ಮನೋಭಾವನೆಯಿಂದ ಸಮಸ್ಸೆ ಬಿಗಡಾಯಿಸಿದೆ. ವರ್ಮಿ ಕಂಪೋಸ್ಟ್, ಹರ್ನಿ ಕಂಪೋಸ್ಟ್, ಪಾಟ್ ಕಂಪೋಸ್ಟ್ ಮೊದಲಾದವರುಗಳಿವೆ. ಕಸ-ತ್ಯಾಜ್ಯ ನಿರ್ವಹಣೆಗೆ ಡಂಪಿಂಗ್‌ಯಾರ್ಡ್ ಅಗತ್ಯ ಇಲ್ಲ. ಅದನ್ನೇ ಅಗತ್ಯ ವೆಂದು ಪರಿಗಣಿಸಲ್ಪಟ್ಟರೆ ಮುಂದೆ ದೊಡ್ಡ ದೊಡ್ಡ ಅನಾಹುತಗಳಿಗೆ ಎಡೆಯಾಗಬಹುದು. ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕೆಂದರು.

ಸ್ವಚ್ಛ ಕಾರ್ಕಳ, ಸುಂದರ ಕಾರ್ಕಳಕ್ಕೆ ಪೂರಕವಾಗಿ ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಯಂತ್ರೋಪಕರಣಗಳನ್ನು ದೂರವಿಟ್ಟು ,ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡಿದಾಗ ನಿರುದ್ಯೋಗ ಸಮಸ್ಸೆಗೆ ಮುಕ್ತಿ ದೊರಕುತ್ತದೆ. ಇದೀಗ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯದಲ್ಲಿ 30ರಷ್ಟು ಮಂದಿ ದುಡಿಯುತ್ತಿದ್ದರೆ, ಅದೇ ವೆಚ್ಚದಲ್ಲಿ 60ರಷ್ಟು ಮಂದಿಗೆ ಉದ್ಯೋಗ ಜೊತೆ ವೇತನವನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಐಟಿ ಉದ್ಯೋಗದಷ್ಟೇ ಸಂಬಳವು ಈ ಕಾಯಕದಲ್ಲಿ ತೊಡಗಿಸಿದವರಿಗೂ ಲಭಿಸಿದಾಗ ಸಂವೃದ್ಧಿ ಭಾರತದ ಕಲ್ಪನೆ ನನಸಾಗಬಹುದು. ಈ ಕಲ್ಪನೆ ಸಚಿವ ವಿ.ಸುನೀಲ್‌ಕುಮಾರ್ ಸಹಮತ ವ್ಯಕ್ತಪಡಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀರಾಮಕೃಷ್ಣ ಮಿಷನ್‌ನ ದಿಲ್‌ರಾಜ್ ಆಳ್ವ, ಸಚಿನ್ ಶೆಟ್ಟಿ ನಲ್ಲೂರು, ಸಮಾಜ ಸೇವಕಿ ರಮಿತಾ ಶೈಲೇಂದ್ರ, ಪುರಸಭಾ ಅಧ್ಯಕ್ಷೆ ಸುಮ, ಉಪಾಧ್ಯಕ್ಷೆ ಪಲ್ಲವಿರಾವ್, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮೊಲಾದವರು ಉಪಸ್ಥಿತರಿದ್ದರು.

ಜಾಹೀರಾತು 


 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget