ಕಾರ್ಕಳ:ಶಬರಿ ವಿ. ಶೆಟ್ಟಿಗೆ ಡಾಕ್ಟರೇಟ್ ಪದವಿ-Times of karkala

 ಕಾರ್ಕಳ:ಖಾಸಗಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿ೦ಗ್ ವಿಭಾಗದ ಸಹಾಯಕ ಪಾಧ್ಯಾಪಕಿಶಬರಿ ವಿ. ಶೆಟ್ಟಿ ಮಂಡಿಸಿದ `ಅನಾಲಿಸಿಸ್ ಆಫ್ ಅಗ್ರಿಕಲ್ಚರಲ್ ಡಿಸೀಜ್ಡ್ ಡೇಟಾ ಯೂಸಿಂಗ್ ಮಷೀನ್ ಲರ್ನಿಂಗ್ ಟೆಕ್ನಿಕ್ಸ್ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.



ತುಮಕೂರು ಸಿದ್ದಾರ್ಥ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿ೦ಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಸಿದ್ದಪ್ಪ ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಯಲದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಸುರೇಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಶಬರಿ ವಿ. ಶೆಟ್ಟಿ ಈ ಮಹಾಪ್ರಬಂಧ ಮ೦ಡಿಸಿದ್ದರು.

ಶಬರಿ ವಿ. ಶೆಟ್ಟಿಯವರು ನಿವೃತ ಮುಖ್ಯೋಪಾಧ್ಯಾಯ ಜನ್ಮನೆ ಚಂದ್ರ ಶೆಟ್ಟಿ ಮತ್ತು ಬಿಲ್ಲಾಡಿಮನೆ ಶಾಂತ ಸಿ. ಶೆಟ್ಟಿ ದಂಪತಿಯ ಪುತ್ರಿ ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಯಾಂತ್ರಿಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೊಳಹಳ್ಳಿ ಡಾ.ವಿದ್ಯಾಸಾಗರ ಶೆಟ್ಟಿಯವರ ಪತ್ನಿ.

ಜಾಹೀರಾತು 










Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget