"ನೈತಿಕ ಮೌಲ್ಯ ಮತ್ತು ಮಾನವೀಯ ಸಂಬಂಧಗಳನ್ನೊಳಗೊಂಡ ಶಿಕ್ಷಣವೇ ನಿಜವಾದ ಸಾಕ್ಷರತೆ"-ಮಿತ್ರಪ್ರಭ ಹೆಗ್ಡೆ-Times of karkala

 ನೈತಿಕ ಮೌಲ್ಯ ಮತ್ತು ಮಾನವೀಯ ಸಂಬಂಧಗಳನ್ನೊಳಗೊಂಡ ಶಿಕ್ಷಣವೇ ನಿಜವಾದ ಸಾಕ್ಷರತೆ ಎಂದು ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಮಿತ್ರಪ್ರಭ ಹೆಗ್ಡೆಯವರು ಹೇಳಿದರು. ಅವರು  ರೋಟರಿಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಹಮ್ಮಿಕೊಂಡ, ರೋಟರಿ ಸಂಸ್ಥೆಯ 'ಸಾಕ್ಷರತಾ ಮಾಸಾಚರಣೆ'ಯ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.



ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಕಬ್ಬಿನ ಅಧ್ಯಕ್ಷರಾದ ರೊ. ಪ್ರಕಾಶ್ ಪೈ ಯವರು  ಮುಖ್ಯಅತಿಥಿಗಳನ್ನು ಸ್ವಾಗತಿಸಿದರು. ರೊ. ಗೀತಾ ರಾವ್ ಮುಖ್ಯಅತಿಥಿಗಳನ್ನು ಸಭೆಗೆ ಪರಿಚಯಿಸಿದರು.

ಇದೇ ಸಂದರ್ಭದಲ್ಲಿ  ಶಿಕ್ಷಕರ ದಿನಾಚರಣೆ ಪ್ರಯುಕ್ತ  ನಡೆಸಿದ ಆನ್ಲೈನ್ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀ ನಾರಾಯಣ ಪೂಜಾರಿ, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಶಿರ್ಲಾಲು, ಇವರಿಗೆ ಬಹುಮಾನ ವಿತರಿಸಲಾಯಿತು.

ರೊ. ಸತೀಶ್ ಪ್ರಭು ಅವರು ರೋಟರಿ ಮಾಹಿತಿಯನ್ನು ಹಾಗೂ ರೊ. ಚಿರಾಗ್ ರಾವ್ ರವರು 'ಕ್ಲಾಸಿಫಿಕೇಶನ್ ಟಾಕ್' ನೀಡಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಆನ್ಸ್ ಕ್ಲಬ್ಬಿನ  ಸದಸ್ಯರು ಉಪಸ್ಥಿತರಿದ್ದು,ರೊ. ಗಣೇಶ್ ಬರ್ಲಾಯ ವಂದನಾರ್ಪಣೆ ಮಾಡಿದರು.

ಜಾಹೀರಾತು 


























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget