"ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಯ ಪ್ರಯೋಜನವನ್ನು ಕಟ್ಟಕಡೆಯ ವ್ಯಕ್ತಿಯು ಪಡೆಯುತ್ತಿದ್ದಾರೆ":ಕಾರ್ಕಳಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ-Times of karkala

 

"ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಯ ಪ್ರಯೋಜನವನ್ನು ಕಟ್ಟಕಡೆಯ ವ್ಯಕ್ತಿಯು ಪಡೆಯುತ್ತಿದ್ದಾರೆ"- ಕಾರ್ಕಳಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ


ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಸರ್ವರನ್ನು ಸಮಾನ ದೃಷ್ಠಿಕೋನದಲ್ಲಿಟ್ಟು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಕಟ್ಟಕಡೆಯ ವ್ಯಕ್ತಿಯು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ಬಿಜೆಪಿಯತ್ತ ದಲಿತ ಸಮುದಾಯ ಆಕರ್ಷಿತರಾಗಲು ಪ್ರೇರಣೆಯಾಗಿದೆ" ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಹೇಳಿದರು.

ಸಚಿವ ವಿ. ಸುನೀಲ್‌ಕುಮಾರ್‌ ಅವರ ವಿಕಾಸ ಸೇವಾ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಕ್ಷ ಕಾರ್ಕಳ ಮಂಡಲ ಎಸ್. ಸಿ. ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಎಸ್‌ಸಿ ಮೋರ್ಚಾದ ಅಧ್ಯಕ್ಷ ಎನ್.ಬಿ.ಬಾಬು ಭಾರತ ಮಾತೆಗೆ ಪುಷ್ಪಾರ್ಚನೆ ಗೈದರು.ಸೇವೆ ಹಾಗೂ ಸಮರ್ಪಣೆ ಪ್ರತಿಜ್ಞೆ ವೀದಿ ಭೋದಿಸಲಾಯಿತು.

ನೂತನ ಶಕ್ತಿಕೇಂದ್ರಗಳ ಎಸ್. ಸಿ.ಮೋರ್ಚಾದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಕ ಮಾಡಲಾಯಿತು.ಎಸ್.ಸಿ. ಮೋರ್ಚಾ ತಾಲೂಕಿನ ಉಸ್ತುವಾರಿಯಾಗಿ ಶ್ರೀನಿವಾಸ್ ಕಾರ್ಲ ಅವರನ್ನು ಕ್ಷೇತಾಧ್ಯಕ್ಷ ಮಹಾವೀರ್ ಹೆಗ್ಡೆ ಘೋಷಿಸಿದರು,

ಎಸ್. ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ಎಸ್. ಸಿ. ಮೋರ್ಚಾದ ಅಧ್ಯಕ್ಷ ಗೋಪಾಲ ಕಳಂಜೆ, ಜಿಲ್ಲಾ ಎಸ್. ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸದಾನಂದ ಉಪಸ್ಥಿತರಿದ್ದರು.ಕೃಷ್ಣ ಪಳ್ಳಿ ವರದಿ ಮಂಡಿಸಿದರು. ಪ್ರಸನ್ನಕಾರ್ಲ ವಂದಾನಾರ್ಪಣೆಗೈದರು. ಸತೀಶ್ ನಿರೂಪಿಸಿದರು.

ಜಾಹೀರಾತು 


 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget