ಹಾರ ತುರಾಯಿ ಬದಲಿಗೆ ಪುಸ್ತಕ ನೀಡಿ ಎಂದ ಸಚಿವರು ಗ್ರಂಥಾಲಯ ಸೇರಲು ಸಿದ್ಧವಾಗಿದೆ ಸಾವಿರಾರು ಪುಸ್ತಕಗಳು ಅಭಿನಂದನಾ ಸಮಾರಂಭದಲ್ಲಿ ಸಿಕ್ಕ ಪುಸ್ತಕಗಳ ಪ್ರದರ್ಶನ ಹಾಗೂ ಗ್ರಂಥಾಲಯಕ್ಕೆ ಸಮರ್ಪಣಾ ಕಾರ್ಯಕ್ರಮ-Times of karkala

 ಹಾರ ತುರಾಯಿ ಬದಲಿಗೆ ಪುಸ್ತಕ ನೀಡಿ ಎಂದ ಸಚಿವರು


ಗ್ರಂಥಾಲಯ ಸೇರಲು ಸಿದ್ಧವಾಗಿದೆ ಸಾವಿರಾರು ಪುಸ್ತಕಗಳು


ಅಭಿನಂದನಾ ಸಮಾರಂಭದಲ್ಲಿ ಸಿಕ್ಕ ಪುಸ್ತಕಗಳ ಪ್ರದರ್ಶನ ಹಾಗೂ ಗ್ರಂಥಾಲಯಕ್ಕೆ ಸಮರ್ಪಣಾ ಕಾರ್ಯಕ್ರಮ

ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸಾಹಿತ್ಯ ಲೋಕದಲ್ಲೊಂದು ನವ ಕ್ರಾಂತಿ ಮಾಡಿದ್ದಾರೆ. ತಾವು ಸಚಿವರಾದ ಬಳಿಕ ಅಭಿನಂದಿಸಲು ಬಂದ ಅಭಿಮಾನಿಗಳಲ್ಲಿ ಹಾರ, ತುರಾಯಿ ತರಬೇಡಿ ಪುಸ್ತಕಗಳನ್ನು ಕೊಡಿ ಅದನ್ನು ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದಿದ್ದರು. ಇದೀಗ ಇವರಿಗೆ ಸಾವಿರಾರು ಪುಸ್ತಕಗಳು ಅಭಿನಂದನಾ ರೂಪದಲ್ಲಿ ಸಿಕ್ಕಿದೆ.

ಈ ಹಿಂದೆ ಸುನಿಲ್ ಕುಮಾರ್ ಅವರು ಸಚಿವರಾದ ಬಳಿಕ ದಯವಿಟ್ಟು ಹಾರ ತುರಾಯಿ ತರಬೇಡಿ ಅಭಿನಂದಿಸಲೇ ಬೇಕೆಂದಿದ್ದರೆ ಪುಸ್ತಕಗಳನ್ನು ಕೊಡಿ ಅದನ್ನು ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದಿದ್ದರು. ಅದರಂತೆ ಅವರು ಹೋದಲ್ಲಿ ಎಲ್ಲಾ ಕಡೆ ಅವರಿಗೆ ಪುಸ್ತಕ ನೀಡಿ ಅಭಿನಂದಿಸಿದ್ದಾರೆ. ಇದೀಗ ಅವರ ಬಳಿ ಸಾವಿರಾರು ಪುಸ್ತಕಗಳು ಬಂದು ಸೇರಿದೆ. 

ಸಚಿವರು ಈ ಪುಸ್ತಕಗಳನ್ನು ಇದೀಗ ಪ್ರದರ್ಶನಕ್ಕೆ ಇಟ್ಟು ಬಳಿಕ ಗ್ರಂಥಾಲಯಕ್ಕೆ ಹಸ್ತಾಂತರ ಮಾಡುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 9ರಂದು ವಿಕಾಸ, ಶಾಸಕರ ಕಛೇರಿ, ಕಾರ್ಕಳದಲ್ಲಿ ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ಕೊಡಲು ಮುಂದಾಗಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿದ್ದು, ಹಾರ ತುರಾಯಿ ಹಾಕದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ಹಾಕವುದು ಬೇಡ. ಅನಗತ್ಯವಾಗಿ ಖರ್ಚು ವೆಚ್ಚ ಮಾಡುವುದು ಬೇಡ ಎಂದು ಸೂಚನೆ ಹೊರಡಿಸಿದ್ದರು.

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget