ಕೌಡೂರು:ಹಟ್ಟಿಗೆ ನುಗ್ಗಿದನ ಕಳ್ಳತನ: ಬೆಳ್ಳಂಬೆಳಗ್ಗೆ ಗೋಕಳ್ಳರ ಪತ್ತೆಹಚ್ಚಿದ ಪೊಲೀಸರು-Times of karkala

  

ಕರಾವಳಿಯಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ.ಮನೆಗೆ ನುಗ್ಗಿ, ರಾತ್ರಿ ರಸ್ತೆ ಬದಿ ಮಲಗುವ ದನಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಹಾಕಿ ಅಪಹರಿಸಿ ಹತ್ಯೆ ಮಾಡುತ್ತಿದ್ದು, ನಿರಂತರವಾಗಿ ದನ ಕಳ್ಳತನ ಮಾಡುತ್ತಿದ್ದಾರೆ.

ಹಿಂದೂ ಸಂಘಟನೆಗಳ ಸತತ ಹೋರಾಟದ ಸಲುವಾಗಿ ಸದ್ಯ ಕಾರ್ಕಳ ಪೊಲೀಸರು ಗೋಕಳ್ಳರ ಬೆನ್ನು ಬಿದ್ದಿದ್ದು ಇಂದು ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇಂದು (ದಿನಾಂಕ 26/09/2021 ರಂದು) ಬೆಳಿಗ್ಗೆ  07:30 ಗಂಟೆಗೆ ಕೌಡೂರು ಗ್ರಾಮದ ಪಳ್ಳಿಕ್ರಾಸ್‌ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಪಿಕಪ್‌ ಗೂಡ್ಸ್‌ ವಾಹನವನ್ನು ಅದರ ಚಾಲಕನು ರಂಗನಪಲ್ಕೆ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಎರಡು ಗಂಡು ಕರುಗಳ ಕಾಲಿಗೆ ಹಗ್ಗವನ್ನು ಕಟ್ಟಿ ಹಿಂಸಾತ್ಮಾಕ ರೀತಿಯಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಕಸಾಯಿಖಾನೆಗೆ ಮಾರುವ ಸಲುವಾಗಿ ಗೋವುಗಳನ್ನು  ಸಾಗಾಟ ಮಾಡುತ್ತಿದ್ದುದ್ದನ್ನು ಕಂಡು ಪಿಕಪ್‌ ವಾಹನದಲ್ಲಿದ್ದ ಮಹಾಬಲ ಪೂಜಾರಿಯವರಲ್ಲಿ ವಿಚಾರಿಸಿದಾಗ ಕೌಡೂರು ಮಾಣಿಕು ಮೇರಿ ಎಂಬಲ್ಲಿ ಹಟ್ಟಿಯಲ್ಲಿದ್ದ ಗಂಡು ಕರುವನ್ನು ಮೂರು ಜನರು ಸೇರಿ ಕಳವು ಮಾಡಿ ತಂದಿರುವುದಾಗಿ ತಿಳಿಸಿರುತ್ತಾರೆ.

ಪಿಕಪ್‌ ವಾಹನದ ಚಾಲಕ ರವೀಂದ್ರ, ಪಿಕಪ್‌ ವಾಹನದಲ್ಲಿದ್ದ ಹಮೀದ್‌ ಸಾಹೇಬ್‌, ಮಹಾಬಲ ಪೂಜಾರಿಯವರ ವಿರುದ್ದ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 119/2021, US: 5, 12 The Karnataka Prevention of slaughter and preservation of cattle ordinance Act 2020, US 380 ಐಪಿಸಿಯಂತೆ ಪ್ರಕರಣ ಪ್ರಕರಣ ದಾಖಲಾಗಿದೆ.

ಜಾಹೀರಾತು 


 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget