ಕಾರ್ಕಳ:ಪುರಸಭಾ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆ ಹರಿಸುವಂತೆ ವಿಪಕ್ಷ‌ ಸದಸ್ಯರಿಂದ ಸಚಿವರಿಗೆ ಮನವಿ-Times of karkala

 ಕಾರ್ಕಳ:ಇಂಧನ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸುನೀಲ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ  ಕಾರ್ಕಳ ಪುರಸಭೆ‌ಗೆ ಭೇಟಿ ನೀಡಿದರು.ಈ ಸಂಧರ್ಭ ವಿಪಕ್ಷ ಸದಸ್ಯರು ಪುರಸಭಾ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆ ಹರಿಸುವಂತೆ  ವಿಪಕ್ಷ‌ ಸದಸ್ಯರು ಸಚಿವ ಸುನೀಲ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.


ಮನವಿಯ ವಿಷಯಗಳು 

1) ಪ್ರಾಧಿಕಾರದ ಸಮಸ್ಯೆಯಿಂದ  ಮನೆ ಕಟ್ಟುವವರ ಕನಸು ನುಚ್ಚುನೂರಾಗಿದೆ.

2) ಒಳಚರಂಡಿಯ ಕಳಪೆ ಕಾಮಗಾರಿಯಿಂದಾಗಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.

3) ಮೆಸ್ಕಾಂಗೆ ಹಣ ಪಾವತಿಸದ ಕಾರಣ  ದಾರಿ ದೀಪಗಳು ಅಳವಡಿಸಲು ಅವಕಾಶವಿಲ್ಲವಾಗಿದೆ.

4) ಪುರಸಭೆಯಲ್ಲಿ ಸಿಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕ ಕೆಲಸಗಳಲ್ಲಿ ವಿಳಂಬವಾಗುತ್ತಿದೆ.

5) ಪುರಸಭೆಯ ಒಟ್ಟು ಅಭಿವೃದ್ಧಿಗೆ ತುರ್ತು ಅನುದಾನದ ಅಗತ್ಯವಿದೆ. 

 ಮೇಲ್ಕಂಡ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರಗಿಸಬೇಕೆಂದು ಮನವಿ ಸಲ್ಲಿಸಿದರು.ಈ ಸಂದರ್ಬದಲ್ಲಿ ವಿಪಕ್ಷ‌ ನಾಯಕರಾದ  ಆಶ್ಫಕ್ ಅಹ್ಮದ್, ಸದಸ್ಯರುಗಳಾದ ಶುಭದರಾವ್ , ವಿನ್ನಿಬೋಲ್ಡ್ ಮೆಂಡೋನ್ಸಾ, ರೆಹಮತ್ ಶೇಖ್, ಪ್ರತಿಮಾ ರಾಣೆ, ಪ್ರಭಾ ಕಿಶೋರ್, ಸೋಮನಾಥ ನಾಯ್ಕ್ ಉಪಸ್ಥಿತಿತರಿದ್ದರು.
 


ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget