ತುಳು ಲಿಪಿಯಲ್ಲಿ ಫ್ರೆಂಡ್ಸ್ ತುಳುವೆರ್ ಗ್ರೂಪ್ ಕುವೈಟ್ ನ ನಾಮಫಲಕ ಅನಾವರಣ-Times of karkala

ಸಮಾಜದ ಅಶಕ್ತರಿಗೆ ತಮ್ಮಿಂದಾದ ಸಹಾಯವನ್ನು ಮಾಡಬೇಕೆಂಬ ಉದ್ದೇಶದಿಂದ ಸ್ಥಾಪನೆಗೊಂಡ ಫ್ರೆಂಡ್ಸ್ ತುಳುವೆರ್ ಗ್ರೂಪ್ ಕುವೈಟ್ ಇದರ ನಾಮಫಲಕ ತುಳುಲಿಪಿಯಲ್ಲಿ ಅನಾವರಣ ಗೊಂಡಿದೆ.

ಫ್ರೆಂಡ್ಸ್ ತುಳುವೆರ್ ಗ್ರೂಪ್ ಕುವೈಟ್

ಈ ಸಂದರ್ಭ ಸ್ಥಾಪಕಾಧ್ಯಕ್ಷ ಧೀರಜ್ ಸಾಲಿಯಾನ್ ಕಾರ್ಕಳ ಇವರು "ತುಳು" ಎಂದರೆ ಭಾಷೆಯಲ್ಲ ಅದೊಂದು ಭಾವನೆ ತುಳುವರು.ಯಾವತ್ತು ಇನ್ನೊಂದು ಭಾಷೆಯನ್ನು ವಿರೋಧಿಸುವುದಿಲ್ಲ.ಎಲ್ಲಾ ಭಾಷೆಗಳಲ್ಲಿ ತನ್ನತನ ನೋಡುವ  ಹಾಗೂ ಎಲ್ಲರನ್ನೂ ಪ್ರೀತಿಸುವ ನಮ್ಮ ತುಳುನಾಡಿನಲ್ಲಿ ಪ್ರಪ್ರಥಮ ಬಾರಿಗೆ ನಾಡಿನಾದ್ಯಂತ ತುಳು ಭಾಷೆಯ ಲಿಪಿಯನ್ನು ಕಲಿಯುವ ಅಭಿಯಾನ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ.ಈ ನಿಟ್ಟಿನಲ್ಲಿ ನಮ್ಮದು ಒಂದು ಅಳಿಲು ಸೇವೆ ಇರಲಿ ಎಂಬ ಭಾವನೆಯನ್ನು ಇಟ್ಟುಕೊಂಡು ಬಹಳ ಸಂತೋಷದಿಂದ ಫ್ರೆಂಡ್ಸ್ ತುಳುವೆರ್ ಗ್ರೂಪ್ ಕುವೈಟ್ ಇದರ ಲೋಗೋ ದಲ್ಲಿ ತುಳುಲಿಪಿಯನ್ನು ಸೇರಿಸಲು ಉದ್ದೇಶಿಸಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಕ್ಷಯ್ ಪೇಜಾವರ ರವರ ಸಹಕಾರದಿಂದ ನಾಮಫಲಕ ರಚನೆಯಾಗಿದ್ದು ಅಧ್ಯಕ್ಷ ರಾದ  ವಿಶ್ವಾಸ್ ಕರ್ಕೇರ ಮತ್ತು ಸರ್ವ ಸದ್ಯಸರು ಧನ್ಯವಾದ ಸಲ್ಲಿಸಿದ್ದಾರೆ.

ಜಾಹೀರಾತು 


 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget