"ಬಿಳಿಬೆಂಡೆ ಕಾರ್ಲ ಕಜೆ ಕೇವಲ ಬಿಜೆಪಿಯ ಪ್ರಚಾರದ ದೃಷ್ಠಿಕೋನವಲ್ಲ. ರೈತರ ಸಲಹೆ ಸ್ವೀಕರಿಸಿ ದೂರಾದೃಷ್ಠಿಯನ್ನು ಇಟ್ಟುಕೊಂಡು ಬ್ರಾಂಡ್‌ನ್ನು ಸಿದ್ಧಪಡಿಸಲಾಗಿದೆ"-ಸಚಿವ ವಿ.ಸುನೀಲ್‌ಕುಮಾರ್-Times of karkala

 


ಕಾರ್ಕಳ: ಕಾರ್ಕಳದಲ್ಲಿ ನಿನೂತನ ಕಾರ್ಯಕ್ರಮ ಹಮ್ಮಿಕೊಂಡಾಗ ಜನತೆಯಿಂದ ಸಕಾರತ್ಮಕ ಸ್ಪಂದನೆ ಸಿಕ್ಕಿತು. ಅದರ ಪರಿಣಾಮವಾಗಿ 20 ಸಾವಿರ ಮನೆಗಳಿಗೆ ಬಿಳಿ ಬೆಂಡೆಯ ಬೀಜವನ್ನು ವಿತರಿಸುವ ಕಾರ್ಯವು ಯಶಸ್ವಿ ನಡೆದಿತ್ತು. ಬಿಳಿ ಬೆಂಡೆಯ ಕೃಷಿ ಮಾಡಿ ಅದರಿಂದ ವಿವಿಧ ತರದಲ್ಲಿ ಖಾದ್ಯ ತಯಾರಿಸಿ ಬ್ರಾಂಡ್‌ಗೆ ಉತ್ತೇಜಿಸಿದ ಮಹಿಳಾ ಮೋರ್ಚಾದ ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್‌ಕುಮಾರ್ ಹೇಳಿದರು.   
ಕಾರ್ಕಳದ ವಿಕಾಸ ಕಚೇರಿಯ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಆಯೋಜಿಸಿದ ಕಾರ್ಲ ಬ್ರಾಂಡ್ ಬಿಳಿ ಬೆಂಡೆ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬಿಳಿಬೆಂಡೆ ಕಾರ್ಲ ಕಜೆ ಕೇವಲ ಬಿಜೆಪಿಯ ಪ್ರಚಾರದ ದೃಷ್ಠಿಕೋನವಲ್ಲ. ರೈತರ ಸಲಹೆ ಸ್ವೀಕರಿಸಿ ದೂರಾದೃಷ್ಠಿಯನ್ನು ಇಟ್ಟುಕೊಂಡು ಬ್ರಾಂಡ್‌ನ್ನು ಸಿದ್ಧಪಡಿಸಲಾಗಿದೆ. ಬಿಳಿಬೆಂಡೆ ಬ್ರಾಂಡ್ ಮಾರುಕಟ್ಟೆ ಪ್ರವೇಶವಾಗಬೇಕು. ಬಿಳಿ ಬೆಂಡೆ ಮೇಳವು ವಿವಿಧ ಸಂಘ ಸಂಸ್ಥೆಗಳ ಮೂಲಕ ನಡೆದಾಗ ಮಾತ್ರ ಕೃಷಿ ಕಾಯಕಕ್ಕೆ ಹಾಗೂ ರೈತಾಪಿ ವರ್ಗಕ್ಕೆ ಅಸಕ್ತಿ, ಪ್ರೋತ್ಸಾಹ ದೊರಕಲು ಸಾಧ್ಯವಿದೆ ಎಂದರು. 

ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ,ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಉಪಸ್ಥಿತರಿದ್ದರು. 

ಬಿಜೆಪಿ ಮಹಿಳಾ ಮೋರ್ಚಾದ ತಾಲೂಕು ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ  ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮಲ್ಲಿಕಾ ರಾವ್ ನಿರೂಪಿಸಿದರು. ನಿಟ್ಟೆ ಶಕ್ತಿ ಕೇಂದ್ರದ ಅಧ್ಯಕ್ಷೆ ಮಾನಸ ಧನ್ಯವಾದವಿತ್ತರು. 



ಜಾಹೀರಾತು 




















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget