ಬೋಳ ವ್ಯವಸಾಯ ಸಂಘದಲ್ಲಿ ಅವ್ಯವಹಾರ ಮಾಡಿದವರಿಂದ ಸಂಘದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ:ಸಂಘದಿಂದ ಕ್ರಮದ ಎಚ್ಚರಿಕೆ-Times of karkala


 ಕಾರ್ಕಳ: ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸುಮಾರು 1 ಕೋಟಿ ರೂಪಾಯಿ ಮಿಕ್ಕಿ ಅವ್ಯವಹಾರ ಮಾಡಿದವರು ಇಂದು ಸಂಘದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದು ಅಂತಹವರ ವಿರುದ್ಧ ಸಂಘವು ಸೂಕ್ತ ಕಾನೂನು ಕ್ರಮ ಜರಗಿಸುವುದಾಗಿ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದ್ದಾರೆ.

ಅವರು ಬೋಳ ಸಹಕಾರಿ ಸಂಘದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, 1991ರಿಂದ 2011ರವರೆಗೆ ಕಾರ್ಯದರ್ಶಿಯಾಗಿದ್ದ ದಿ.ಸದಾನಂದ ಶೆಟ್ಟಿಯವರು 20 ವರ್ಷಗಳ ಸೇವಾವಧಿಯಲ್ಲಿ ಸುಮಾರು  1.09 ಕೋ.ರೂ ಅವ್ಯವಹಾರ ನಡೆಸಿರುವುದು ಸಹಕಾರಿ ಸಂಘದ ಲೆಕ್ಕಪರಿಶೋಧಕರ ವರದಿಯಲ್ಲಿ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ,ಸಹಕಾರಿ ಕಾಯ್ದೆ ಕಲಂ 64ರಂತೆ ಸಹಕಾರಿ ಸಂಘಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ದಾವೆ ಹೂಡಲಾಗಿತ್ತು.  ನ್ಯಾಯಾಲಯವು ಅವ್ಯವಹಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡು ಸುಧೀರ್ಘ ತನಿಖೆ ನಡೆಸಿ ಅಂತಿಮವಾಗಿ ದಿ.ಸದಾನಂದ ಶೆಟ್ಟಿಯವರು ಅವ್ಯವಹಾರ ಎಸಗಿರುವುದು ಸಾಬೀತಾಗಿದೆ ಈ ಹಿನ್ನೆಲೆಯಲ್ಲಿ ಅವರ ಪತ್ನಿ ಪ್ರಮೀಳಾ ಹಾಗೂ ಮಕ್ಕಳು ಸಂಘಕ್ಕೆ 1,08,99,622 ರೂಗಳನ್ನು ಶೇ 14ರ ಬಡ್ಡಿ ಸಹಿತ ಪಾವತಿಸಬೇಕೆಂದು ಆದೇಶಿಸಿತ್ತು.

ಆದರೆ ಪ್ರಮೀಳಾ ಅವರು ಸಹಕಾರಿ ಸಂಘಗಳ ನಿಬಂಧಕರ ನ್ಯಾಯಾಲಯದ ಆದೇಶಕ್ಕ  ತಡೆಯಾಜ್ಞೆ ನೀಡುವಂತೆ ಎರಡು ಬಾರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಕಾರ್ಕಳ ನ್ಯಾಯಾಲಯದ ಮೂಲಕ ದಿ.ಸದಾನಂದ ಶೆಟ್ಟಿಯವರ ಆಸ್ತಿ ಹಾಗೂ ಚಿನ್ನಾಭರಣಗಳ ಹರಾಜಿನ ಮೂಲಕ 77,07,015 ರೂ ವಸೂಲಿ ಮಾಡಲಾಗಿದ್ದು, ಸಂಘವು ಮಾನವೀಯ ನೆಲೆಯಲ್ಲಿ ಶೇ 14ರ ಬಡ್ಡಿ ಮನ್ನಾ ಮಾಡಿದ್ದು ಹಾಗೂ ನ್ಯಾಯಾಲಯದ ಕಾನೂನು ಹೋರಾಟದ ಖರ್ಚಿನಲ್ಲಿ ಶೇ 50ರಷ್ಟನ್ನು ಮನ್ನಾ ಮಾಡಿದೆ. ಪ್ರಸ್ತುತ ಪ್ರಮೀಳಾ ಶೆಟ್ಟಿಯವರಿಂದ 26,36,418 ರೂ ಮೊಬಲಗು ವಸೂಲಿಗೆ ಬಾಕಿ ಇರುತ್ತದೆ ಎಂದು ಅವರು ಪತ್ರಕರ್ತರಿಗೆ ವಿವರಿಸಿದರು.

ದಿ.ಸದಾನಂದ ಶೆಟ್ಟಿಯವರು 20 ವರ್ಷಗಳಿಂದ ಸುಳ್ಳು ದಾಖಲೆ ಸೃಷ್ಟಿಸಿ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಸಾಲ ಪಡೆದು ಹಣ ದುರ್ಬಳಕೆ ಮಾಡಿದ್ದರು ಮಾತ್ರವಲ್ಲದೇ ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ ಲೆಕ್ಕ ಪರಿಶೋಧಕರ ಮೇಲೆ ಪ್ರಭಾವ ಬೀರಿ ಅವ್ಯವಹಾರ ಬಹಿರಂಗವಾಗದಂತೆ ನೋಡಿಕೊಂಡಿದ್ದರು. ಜನರು ಕಟ್ಟಿ ಬೆಳೆಸಿದ ಸಂಘವನ್ನು ದಿವಾಳಿ ಅಂಚಿಗೆ ತಂದಿಟ್ಟು ಜನರು ಸಂಘದ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದ್ದರು. 

ಜನರ ಹಣವನ್ನು ನುಂಗಿದವರು ಇಂದು ಸಂಘದ ಹೆಸರನ್ನು ಕೆಡಿಸುವ ಪ್ರಯತ್ನ ನಡೆಸುತ್ತಿದ್ದು ಇದು ಯಶಸ್ವಿಯಾಗುವುದಿಲ್ಲ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸದಾಶಿವ ಶೆಟ್ಟಿ ಎಚ್ಚರಿಸಿದ್ದಾರೆ.

ಈ‌ ಸಂದರ್ಭದಲ್ಲಿ ಸಂಘದ ನಿರ್ದೇಶಕರು ಹಾಗೂ ಕಾರ್ಯದರ್ಶಿ ಹಾಜರಿದ್ದರು.

ಜಾಹೀರಾತು 


 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget