"ಅನಧಿಕೃತ ಕಸಾಯಿಖಾನೆಗಳು ಹೆಚಾಗಿದ್ದು ಸಿಟಿರವಿ,ಸುನೀಲ್ ಕುಮಾರ್ ಕಾಲದಲ್ಲಿ!ನಿಮ್ಮದು ಎಂತಹಾ ಗೋ ಪ್ರೇಮ?"-ಕಾಂಗ್ರೆಸ್ ನಾಯಕ ಸುಧೀರ್ ಮರೋಳಿ ಪ್ರಶ್ನೆ-Times of karkala

 

"ಅನಧಿಕೃತ ಕಸಾಯಿಖಾನೆಗಳು ಹೆಚಾಗಿದ್ದು ಸಿಟಿರವಿ,ಸುನೀಲ್ ಕುಮಾರ್ ಕಾಲದಲ್ಲಿ!ನಿಮ್ಮದು ಎಂತಹಾ ಗೋ ಪ್ರೇಮ?"-ಕಾಂಗ್ರೆಸ್ ನಾಯಕ ಸುಧೀರ್ ಮರೋಳಿ ಪ್ರಶ್ನೆ 

  
ಚಿಕ್ಕಮಗಳೂರಿನಲ್ಲಿ ಅನಧಿಕೃತ ಖಸಾಯಿಖಾನೆಗಳು ಹೆಚ್ಚಾಗಿದ್ದು ಸುನೀಲ್ ಕುಮಾರ್ ಸಿಟಿರವಿ ಕಾಲಘಟ್ಟದಲ್ಲಿ ಎಂದು ಕಾಂಗ್ರೆಸ್ ನಾಯಕ ಸುಧೀರ್ ಮರೋಳಿ ಆಕ್ರೋಶ ವ್ಯಕ್ತಪಡಿಸಿದರು.ಅವರು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್, ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ  ಕಾರ್ಕಳದಲ್ಲಿ ನಡೆದ ಬೃಹತ್ ಪಂಜಿನ ಮೆರವಣಿಗೆ ಹಾಗೂ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ಅವರು ಬಿಜೆಪಿ ಸರ್ಕಾರವು ಹಿಂದು ಧರ್ಮ, ದೇವರು ಎನ್ನುತ್ತಾ ಅಧಿಕಾರಕ್ಕೆ ಬಂದು ಇಂದು ಧರ್ಮ ವಿರೋಧಿ ಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ಸುನೀಲ್ ಕುಮಾರ್ ಮತ್ತು ಸಿಟಿ ರವಿಯವರು ಅಧಿಕಾರಕ್ಕೆ ಬಂದ ನಂತರ ಎರಡೂ ಜಿಲ್ಲೆಗಳಲ್ಲಿ ಕಸಾಯಿ ಖಾನೆಗಳ ಸಂಖ್ಯೆ ಹೆಚ್ಚಾಗಿದೆ, ನಿಮ್ಮದು ಎಂತಹಾ ಗೋ ಪ್ರೇಮ ಎಂದು ಪ್ರಶ್ನೆ ಮಾಡಿದರು. 

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಪೋಲಿಸ್ ಕೇಸುಗಳು, ಪೋಲಿಸ್ ದೌರ್ಜನ್ಯಗಳ ಮೂಲಕ ಕಿರುಕುಳ ನೀಡುವ ಸಚಿವ ಸುನೀಲ್ ಕುಮಾರ್ ಅವರ ಷಡ್ಯಂತ್ರವನ್ನು ಎದುರಿಸುವ ತಾಖತ್ ಮತ್ತು ದೈರ್ಯ ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.   ಬೈಂದೂರಿನ ಬಿಜೆಪಿ ಸ್ಥಾನೀಯ ಸಮಿತಿಯ ಕಾರ್ಯಕರ್ತ ಉದಯ ಗಾಣಿಗ ಕೊಲೆ ಪ್ರಕರಣ, ಹೆಬ್ರಿಯ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಹೊನ್ನಾವರದ ಪರೇಶ್ ಮೇಸ್ತನ ಕೊಲೆ ಪ್ರಕರಣಗಳಿಗೆ ನ್ಯಾಯ ಒದಗಿಸದ ಸುನೀಲ್ ಕುಮಾರ್ ಎಂತಹ ಹಿಂದುತ್ವವಾದಿ ಎಂದು ಪ್ರಶ್ನೆ ಮಾಡಿದರು. 

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಶುಭದ್ ರಾವ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾಂಗ್ರೇಸ್  ಆಡಳಿತದಲ್ಲಿ  ದೇವಸ್ಥಾನಗಳ ಜೀರ್ಣೋದ್ಧಾರವಾಗಿದೆ.ಬಿಜೆಪಿ ದೇವಸ್ಥಾನ ಹೊಡೆದು ಪಾಪ ಮಾಡಿದೆ.ದೇವಸ್ಥಾನ ಒಡೆದವರನ್ನು ದೇವರು ರಕ್ಷಿಸಲಾರ.ಬಹುಸಂಖ್ಯಾತ ಹಿಂದೂಗಳ ದಾರ್ಮಿಕ ವಿಷಯಗಳಾದ ದೇವರು, ದೇವಸ್ಥಾನ, ಮೊದಲಾದ  ವಿಷಯಗಳನ್ನು ಬಳಸಿ  ಅದಿಕಾರಕ್ಕೆ ಬಂದ ಬಿಜೆಪಿ ನೈಜ್ಯ ಬಣ್ಣ ಬಯಲಾಗಿದೆ ದೇವಸ್ಥಾನ ‌ಹೊಡೆಯುವ ಪಾಪ ಬಿಜೆಪಿ ಸರಕಾರ ಮಾಡಿದೆ ಎಂದರು. ಹಿಂದೆ ಕಾಂಗ್ರೆಸ್ ಸರ್ಕಾರವಿರುವಾಗ ಗೋಕಳ್ಳತನದ ಕುರಿತು ಪ್ರತಿಭಟನೆ ಮಾಡಿ ಕಾಂಗ್ರೆಸ್ ನಾಯಕರ ವಿರುದ್ದ ಅವ್ಯಾಚ್ಚ ಪದಗಳಿಂದ ನಿಂದನೆ ಮಾಡುತ್ತಿದ್ದ ಸುನೀಲ್ ಕುಮಾರ್ ಅವರು ಇಂದು ಕಾರ್ಕಳದಲ್ಲಿ ಅವ್ಯಾಹತವಾಗಿ ಗೋಕಳ್ಳತನವಾಗುತ್ತಿದ್ದರೂ ಮೌನವಾಗಿದ್ದಾರೆ ಹಾಗಾಗಿ  ಗೋಕಳ್ಳರಿಗೆ ಸುನೀಲ್ ಕುಮಾರವರ ಬೆಂಬಲವಿದೆ ಎಂದು ಪ್ರಶ್ನಿಸಿದರು.

ಪ್ರತಿಭಟನಾ ಸಭೆಯಲ್ಲಿ  ಕಾಂಗ್ರೆಸ್ ಮುಖಂಡ ಸುರೇಂದ್ರ ಶೆಟ್ಟಿ , ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್, ಉಡುಪಿ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿ ಜೋತಿಷ್ ಹೆಚ್.ಎಮ್,  ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್, ಕಿಸಾನ್ ಘಟಕದ ಉದಯ ಶೆಟ್ಟಿ, ಪ್ರಭಾಕರ ಕೋಟ್ಯಾನ್, ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶ ಮೂಲ್ಯ, ಮಾಜಿ ಜಿ.ಪಂ ಸದಸ್ಯರಾದ ಸುಪ್ರೀತ್ ಶೆಟ್ಟಿ, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಬೆಳ್ಮಣ್, ಈದು ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ,  ಹಾಗೂ ಎಲ್ಲಾ ಬ್ಲಾಕ್ ಮುಖಂಡರುಗಳು,    ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ದಿನೇಶ್‌ ಹೇರೂರು, ಕೆಪಿಸಿಸಿ ಕೋಆರ್ಡಿನೇಟರ್ ಹರೀಶ್ ಕಿಣಿ, ಯತೀಶ್ ಕರ್ಕೇರ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೀಜ್ ಹುಸೈನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ಬಜಗೋಳಿ, ಪ್ರದೀಪ್ ಶೆಟ್ಟಿ ಬಜಗೋಳಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಸುರಯ್ಯ ಅಂಜುಮ್, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾದ್ಯಕ್ಷರಾದ ಹಮೀದ್ ಹುಸೈನ್, ಕಾರ್ಕಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಪೂಜಾರಿ ಇನ್ನಾ ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಕಳದ ಅನಂತ ಶಯನ ದೇವಸ್ಥಾನದಿಂದ ಹೊರಟ ಪಂಜಿನ ಮರೆವಣಿಗೆಯು ಕಾರ್ಕಳ ಬಸ್ಟ್ಯಾಂಡ್ ತನಕ ಸಾಗಿ ಬಂತು.

ಜಾಹೀರಾತು  
   

  


 
        

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget