ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಯುವತಿಯ ಅತ್ಯಾಚಾರ,ಸಂತ್ರಸ್ತೆಯ ನೆರವಿಗೆ ನಿಂತ ಬಜರಂಗದಳ-Times of karkala

 

ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಯುವತಿಯ ಅತ್ಯಾಚಾರ,ಸಂತ್ರಸ್ತೆಯ ನೆರವಿಗೆ ನಿಂತ ಬಜರಂಗದಳ-Times of karkala

ಯುವತಿಯನ್ನು ಅಪಹರಿಸಿ ಅತ್ಯಾಚಾರಗೈದ ಆರೋಪದಡಿ ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ  ನವಾಜ್ ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಮೂಲತಃ ಶಿವಮೊಗ್ಗದವನಾಗಿದ್ದು  ಬಂಗ್ಲೆಗುಡ್ಡೆಯಲ್ಲಿ ನೆಲೆಸಿದ್ದನು.

ಸಂತ್ರಸ್ತೆಯ ನೆರವಿಗೆ ನಿಂತ ಬಜರಂಗದಳ

ಆರೋಪಿಯು ಯುವತಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಯುವತಿಗೆ ಹಲ್ಲೆ ನಡೆಸಿದ್ದನು.ಅಲ್ಲದೆ ಕಳೆದ ಎರಡುವರ್ಷಗಳಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಘಟನೆ ನಡೆದರೂ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದ ಯುವತಿ ಹಾಗೂ ಮನೆಯವರಿಗೆ ಬಜರಂಗದಳದವರು ನೆರವಿಗೆ ಬಂದಿದ್ದಾರೆ.

ಘಟನೆಯ ನಂತರ ವಿಷಯ ತಿಳಿದ  ಸ್ಥಳೀಯ ಬಜರಂಗದಳದವರು ಸ್ಥಳಕ್ಕೆ ದೌಡಾಯಿಸಿದ್ದರು.ಬಳಿಕ ಬಜರಂಗದಳದ ಪ್ರಮುಖರು ಹಾಗೂ ಕಾರ್ಯಕರ್ತರು ಯುವತಿಯ ಮನೆಗೆ ಭೇಟಿ ನೀಡಿ ಯುವತಿಗೆ ಹಾಗೂ ಯುವತಿಯ ಮನೆಯವರಿಗೆ ಧೈರ್ಯ ತುಂಬಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿದ ಕೆಲವೇ ಸಮಯದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜಾಹೀರಾತು 


 
   

  


 
        Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget