"ಖಾಸಗಿ ಶಿಕ್ಷಕರನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಿಸಿ"-ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷರಾದ ನಾಗೇಶ್ ಸಿ,ಎನ್ ರವರು ಒತ್ತಾಯ-Times of karkala

 

ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಬೋಧಕ, ಬೋಧಕೇತರನ್ನು  ಅಸಂಘಟಿತ ಕಾರ್ಮಿಕರು ಎಂದು ಘೋಷಿಸಿ, ಸರ್ಕಾರವು ಅವರನ್ನು ರಕ್ಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷರಾದ ನಾಗೇಶ್ ಸಿ,ಎನ್ ರವರು ಒತ್ತಾಯಿಸಿದರು.  

ಸುಮಾರು ಒಂದುವರೆ ವರ್ಷದ ನಂತರ ಶಾಲಾ ಕಾಲೇಜುಗಳು ಪ್ರಾರಂಭ ವಾಗುತ್ತಿವೆ. ಆದರೂ ಕೂಡ ಯಾವ ಶಾಲಾ ಕಾಲೇಜುಗಳಲ್ಲಿ   ಪೂರ್ಣಪ್ರಮಾಣದ ಸಿಬ್ಬಂದಿಗಳನ್ನು ನೇಮಕ  ಮಾಡಿಕೊಂಡಿಲ್ಲ ,  ಖಾಸಗಿ ಸಂಸ್ಥೆಗಳು ಕೇವಲ ಶುಲ್ಕದ ಹಿಂದೆ ಬಿದ್ದಿವೆ ಎಂದರು .  

ಹಲವಾರು ವರ್ಷಗಳಿಂದ ಸಂಸ್ಥೆಗಳಿಗೆ  ದುಡಿದರು ಇಂದು ನಿರುದ್ಯೋಗಿಗಳಾಗಿದ್ದಾರೆ.  ಸರ್ಕಾರದಿಂದ ಪ್ರತಿವರ್ಷ  ಶಿಕ್ಷಕರ ಅರ್ಹತೆ ಪರೀಕ್ಷೆ ನಡೆಸಿದರು ಯಾವುದೇ ನೇಮಕಾತಿ ಆದೇಶ ಹೊರಡಿಸದಿರುವುದು ಕೂಡ ಒಂದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. 

ಸರ್ಕಾರವು ಸರ್ಕಾರಿ ಶಿಕ್ಷಕರನ್ನು  ಗುರುತಿಸಿ ಉತ್ತಮ ಶಿಕ್ಷಕ  ಪ್ರಶಸ್ತಿಯನ್ನು ನೀಡುತ್ತದೆ. ಆದರೆ ಅದೆ ಸರ್ಕಾರಿ ಶಾಲೆಗಳಲ್ಲಿ ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡೆಗಣಿಸುತ್ತದೆ. ಅವರಿಗೆ ವೇತನವೂ ಇಲ್ಲ ಇತ್ತ ಪುರಸ್ಕಾರವು ಇಲ್ಲ . ಇದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ದೂರಿದರು.  ಶಿಕ್ಷಕರೆಂದರೆ ಎಲ್ಲಾ ವರ್ಗದಿಂದ ಗುರುತಿಸಿ ಎಲ್ಲಾ ಮಾದರಿಯ ಶಿಕ್ಷಕರಿಗು ಕೂಡ ಸನ್ಮಾನಿಸಬೇಕು. ಕೇವಲ ಸರ್ಕಾರಿ ಶಿಕ್ಷಕರನ್ನು ಗುರುತಿಸಿ ಗೌರವಿಸಿದರೆ ,ಖಾಸಗಿ ಹಾಗು ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಇದು ಅನ್ಯಾಯವಾಗುವುದಿಲ್ಲವೆ. ಎಂದು ಹೇಳಿದರು. ಶಿಕ್ಷಕ ಶಿಕ್ಷಕರಲ್ಲಿ ತಾರತಮ್ಯ ಮಾಡಿ ಶಿಕ್ಷಕರ ದಿನಾಚರಣೆ  ಆಚರಣೆ ಮಾಡಿದರೆ ಅದಕ್ಕೇನು ಅರ್ಥವಿದೆ ಎಂದರು. ಶಾಲೆಗಳನ್ನು ನಡೆಸಲು ಖಾಸಗಿ ಶಾಲೆ ಖಾಸಗಿ ಶಿಕ್ಷಕರು ಬೇಕು , ಆದರೆ ಅವರಿಗೆ ಕಷ್ಟನಷ್ಟ ವಾದರೆ ಯಾರೂ ಇಲ್ಲ . ಸರಿಯಾದ ವೇತನವಿಲ್ಲ ಸೇವಾ ಭದ್ರತೆ ಅಂತು  ಮೊದಲೇ ಇಲ್ಲ , ಸರ್ಕಾರವು ಮೊದಲು ಇವುಗಳನ್ನು ಸರಿಪಡಿಸಿ , ಶಿಕ್ಷಕರ ದಿನಾಚರಣೆಗೆ  ಒಂದು ಸರಿಯಾದ ಅರ್ಥ ಕಲ್ಪಿಸಲಿ ಎಂದರು.

ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget