"ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಆಸ್ಕರ್‌ ನಾಡಿಗೆ ನೀಡಿದ ಕೊಡುಗೆ"-ಮಂಜುನಾಥ ಪೂಜಾರಿ ಹೆಬ್ರಿ ಬ್ಲಾಕ್‌ಕಾಂಗ್ರೆಸ್‌ನಿಂದ ಜನನಾಯಕ ಆಸ್ಕರ್‌ಫರ್ನಾಂಡಿಸ್‌ ಅವರಿಗೆ ಶೃದ್ಧಾಂಜಲಿ-Times of karkala

 

ಹೆಬ್ರಿ : ಅಂದು ಉಡುಪಿಯಿಂದ ದೆಹಲಿಗೆ ಹೊರಟ ಉತ್ಸಾಹಿ ಯುವ ಆಸ್ಕರ್‌ಫರ್ನಾಂಡಿಸ್‌ಇಂದು ರಾಷ್ಟ್ರೀಯ ನಾಯಕನಾಗಿ ಬೆಳೆದ ಪರಿ ಅದ್ಭುತ. ಅವರು ನಾಡಿಗೆ ಹಲವಾರು ಶಾಶ್ವತ ಕೊಡುಗೆ ನೀಡಿದ್ದಾರೆ. ಹೆಬ್ರಿ ಗೋಪಾಲ ಭಂಡಾರಿ, ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್‌ವಿಶೇಷ ಮನವಿಯ ಹಿನ್ನಲೆಯಲ್ಲಿ ವೀರಪ್ಪ ಮೊಯಿಲಿಯವರ ಜೊತೆ ಸೇರಿ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಆಸ್ಕರ್‌ನಾಡಿಗೆ ನೀಡಿದ ಬಹುದೊಡ್ಡ ಶಾಶ್ವತ ಕೊಡುಗೆ ಎಂದು ಹೆಬ್ರಿ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಭಾನುವಾರ ಹೆಬ್ರಿ ಬ್ಲಾಕ್‌ಕಾಂಗ್ರೆಸ್‌ವತಿಯಿಂದ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಭಾನುವಾರ ಇತ್ತೀಚೆಗೆ ನಿಧನರಾದ ಜನನಾಯಕ ಆಸ್ಕರ್‌ಫರ್ನಾಂಡಿಸ್‌ಅವರಿಗೆ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಆಸ್ಕರ್‌ಫರ್ನಾಂಡಿಸ್‌ಯಾವೂದೇ ಹುದ್ದೆಗಳ ಹಿಂದೆ ಹೋದವರಲ್ಲ. ಅಂದು ಕಾರ್ಮಿಕನಾಗಿದ್ದ ಆಸ್ಕರ್‌ತನಗೆ ದೊರೆತ ಕೇಂದ್ರ ಕಾರ್ಮಿಕ ಖಾತೆಗೆ ನ್ಯಾಯ ನೀಡಿ ಬಡವರ ಸೇವೆ ಮಾಡಿದ್ದರು. ಅಂದು ಮಂಗಳೂರಿನ ಶ್ರೀನಿವಾಸ ಮಲ್ಯರು ನೆಹರು ಅವರಿಗೆ ಅತೀ ಆಪ್ತರಾಗಿ ಜಿಲ್ಲೆಗೆ ಹಲವು ಶಾಶ್ವತ ಕೊಡುಗೆ ನೀಡಿದರು. ಬಳಿಕ ಆಸ್ಕರ್‌ಇಂದಿರಾ ಗಾಂಧಿ, ರಾಜೀವ ಗಾಂಧಿ ಸಹಿತ ಗಾಂಧಿ ಕುಟುಂಬಕ್ಕೆ ಅತೀ ಆಪ್ತರಾಗಿ ಜನನಾಯಕರಾಗಿ ಬೆಳೆದರು ಎಂದು ಮಂಜುನಾಥ ಪೂಜಾರಿ ಹೇಳಿದರು.

ಅಜಾತಶತ್ರು ಆಗಿದ್ದ ಆಸ್ಕರ್‌ಫರ್ನಾಂಡಿಸ್‌ಎಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದರು. ತನ್ನ ಎಳವೆಯ ವಯಸ್ಸಿನಲ್ಲೇ ಅಂದು ಅತ್ಯಂತ ಗ್ರಾಮೀಣ ಪ್ರದೇಶವಾದ ಉಡುಪಿಯಿಂದ ಕಾಂಗ್ರೆಸ್‌ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇರಿ ರಾಷ್ಟ್ರೀಯ ನಾಯಕರಾಗಿ ಇಂದಿರಾ ಗಾಂಧಿ ಕುಟುಂಬದ ಅತ್ಯಾಪ್ತರಾಗಿದ್ದು ನಾಡಿಗೆ ಅಪಾರ ಕೊಡುಗೆ ನೀಡಿದ ಆಸ್ಕರ್‌ ಫೇರ್ನಾಂಡಿಸ್ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಆಗಲು ವೀರಪ್ಪ ಮೊಯಿಲಿಯವರ ಜೊತೆಗೆ ನಿಂತು ಪ್ರಮುಖ ಪಾತ್ರವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ ನಮ್ಮೂರಿಗೆ ಆಸ್ಕರ್‌ ನೀಡಿದ ಶಾಶ್ವತ  ಕೊಡುಗೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾದ ಹೆಬ್ರಿಯ ನೀರೆ ಕೃಷ್ಣ ಶೆಟ್ಟ ಹೇಳಿದ್ದಾರೆ.

ಕಾರ್ಕಳದ ಮಾಜಿ ಶಾಸಕ ದಿ. ಹೆಬ್ರಿ ಗೋಪಾಲ ಭಂಡಾರಿ ತೀರ್ಥಹಳ್ಳಿಯ ಶಾಸಕರಾಗಿದ್ದ ಕಿಮ್ಮನೆ ರತ್ನಾಕರ್‌ ಅವರ ವಿಶೇಷ ಮನವಿಯ ಮೇರೆಗೆ ಅಂದಿನ ಕೇಂದ್ರದ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾಗಿದ್ದ ಆಸ್ಕರ್‌  ಫೇರ್ನಾಂಡಿಸ್ ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಎಂ.ವೀರಪ್ಪ ಮೊಯಿಲಿಯವರ ವಿಶೇಷ ಮುತುವರ್ಜಿಯಿಂದಾಗಿ ಇಂದು ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ೧೬೯ ಎ ಆಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ಸ್ಮರಿಸಿದರು.

ಹೆದ್ದಾರಿಯಿಂದಾಗಿ ಹೆಬ್ರಿ ಉಡುಪಿಯ ರಸ್ತೆಯಂಚಿನ ಜಮೀನಿಗೆ ಈಗ ಚಿನ್ನದ ಬೆಲೆಯಾಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳುತ್ತಾರೆ. ಅಂದು ಮಾಜಿ ಇಂದಿರಾ ಗಾಂಧಿಯವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಉಸ್ತುವಾರಿಯಾಗಿದ್ದ ವೀರಪ್ಪ ಮೊಯಿಲಿಯವರು ಆಸ್ಕರ್‌ ಫೇರ್ನಾಂಡಿಸ್ ಅವರನ್ನು ಚುನಾವಣೆಯಲ್ಲಿ ತೊಗಿಸಿಕೊಂಡ ಪರಿಯನ್ನು ಕಂಡು ಅಂದು ಯುವ ಕಾಂಗ್ರೆಸ್‌ ಗೆ ಪ್ರಾಥಮಿಕ ಸದಸ್ಯನಾಗಿ ಸೇರಿಸಿದ್ದರು. ಮತ್ತೇಂದೂ ಹಿಂದೇ ನೋಡದ ಆಸ್ಕರ್‌ ಎಲ್ಲರ ಅಚ್ಚುಮೆಚ್ಚಿನ ಪ್ರಭಾವಿ ಜನನಾಯಕರಾಗಿ ಬೆಳೆದರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ನುಡಿನಮನ ಸಲ್ಲಿಸಿದರು.

ಮುಖಂಡ ರಾಘವ ದೇವಾಡಿಗ, ಎಚ್‌. ರಾಜೇಶ ಭಂಡಾರಿ, ಶ್ವೇತ ಕುಮಾರ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಂಜನಿ ಹೆಬ್ಬಾರ್‌ಕಬ್ಬಿನಾಲೆ, ಹೆಬ್ರಿ ಬ್ಲಾಕ್‌ಕಾರ್ಯದರ್ಶಿ ಎಚ್.‌ ಜನಾರ್ಧನ್‌, ಸಂತೋಷ್‌ಕುಮಾರ್‌, ಯುವ ಕಾಂಗ್ರೆಸ್‌ಅಧ್ಯಕ್ಷ ಹುತ್ತುರ್ಕೆ ದಿನೇಶ ಶೆಟ್ಟಿ, ವಿವಿಧ ಘಟಕಗಳ ಪ್ರಮುಖರಾದ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಶಿವರಾಮ ಪೂಜಾರಿ, ಆಸ್ಟಿನ್‌ರಾಡ್ರಿಗಸ್‌, ರವಿ ಪೂಜಾರಿ, ಶಶಿಕಲಾ ಡಿ.ಪೂಜಾರಿ, ಜಯಲಕ್ಷ್ಮೀ, ಕಾಂಗ್ರೆಸ್‌ವಿವಿಧ ಘಟಕಗಳ ಪ್ರಮುಖರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಜಾಹೀರಾತು 

 
   

  


 
        
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget