ಕಾಂತಾವರ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಸ್ಕರ್ ಫೆರ್ನಾಂಡಿಸ್ ರವರಿಗೆ ಶ್ರದ್ಧಾಂಜಲಿ ಹಾಗೂ ಕಾರ್ಯಕರ್ತರ ಸಭೆ-Times of karkala

 ಕಾಂತಾವರ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಸ್ಕರ್ ಫೆರ್ನಾಂಡಿಸ್ ರವರಿಗೆ ಶ್ರದ್ಧಾಂಜಲಿ ಹಾಗೂ ಕಾರ್ಯಕರ್ತರ ಸಭೆಕಾಂತಾವರ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಸಂದೀಪ್ ಅಡ್ಯಂತಾಯರವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಸಮಿತಿಯ  ಕಾರ್ಯಕರ್ತರ ಸಭೆಯು ನಡೆಯಿತು. 

ನಾರಾಯಣ ಗುರುಗಳು ಸಮಾಧಿಹೊಂದಿದ ದಿನವನ್ನು ಗುರುಗಳಿಗೆ ದೀಪ ಬೆಳಗಿಸುವ ಮೂಲಕ ಗೌರವ ನಮನ ಸಲ್ಲಿಸಿ ಅವರನ್ನು ಸ್ಮರಿಸಲಾಯಿತು.
 
ನಾರಾಯಣಗುರುಗಳ ಸಂದೇಶ ಮತ್ತು 1924/1925 ರಲ್ಲಿ ಕೇರಳದ ವೈಕಂನಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬೆಂಬಲದಲ್ಲಿ ನಡೆದ ಸತ್ಯಾಗ್ರಹದಲ್ಲಿ ಮಹಾತ್ಮ ಗಾಂಧಿಜಿಯವರೊಂದಿಗೆ ಗುರುಗಳ ಸಹಭಾಗಿತ್ವವನ್ನು  ಕಾರ್ಕಳ ಬ್ಲಾಕ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾದ ಸುಶಾಂತ್ ಸುಧಾಕರ್ ರವರು ಸಭಿಕರೊಂದಿಗೆ ಹಂಚಿಕೊಂಡರು. 

ನಂತರ ಮಾಜಿ ಕೇಂದ್ರ ಸಚಿವ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. 

ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರೊಂದಿಗೆ ಮುಕ್ತವಾಗಿ ಚರ್ಚಿಸಲಾಯಿತು ಗ್ರಾಮೀಣ ಸಮಿತಿಗೆ  ಪದಾಧಿಕಾರಿಗಳನ್ನು ನೇಮಿಸಲಾಯಿತು ಹಿಂದುಳಿದ ವರ್ಗದ ಸಮಿತಿಯ ಅಧ್ಯಕ್ಷರಾದ ಕುಶ ಮೂಲ್ಯರವರ ಪಂಚಾಯತ್ ನಿಂದ ಸಿಗುವ ಸವಲತ್ತುಗಳ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು.

ನಾವೆಲ್ಲರೂ ಒಂದಾಗಿ ಸೇರಿ ಪಕ್ಷವನ್ನು ಸಂಘಟಿಸುವ ಮೂಲಕ ಮುಂದೆ  ಬರಲಿರುವ ಚುನಾವಣೆಯನ್ನು ಎದುರಿಸೋಣ ಆ ನಿಟ್ಟಿನಲ್ಲಿ ಹೇಗೆ ಸಂಘಟಿತರಾಗೋಣ ಹಾಗೆಯೇ ಬಿಜೆಪಿ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡೋಣ  ಎಂದು ಗ್ರಾಮೀಣ ಸಮಿತಿ ಅಧ್ಯಕ್ಷರಾದ ಸಂದೀಪ್ ಅಡ್ಯಂತಾಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ರಾಜ್ಯ ಕಿಸಾನ್ ಕಾಂಗ್ರೆಸ್ಸಿನ ಕಾರ್ಯದರ್ಶಿಯಾದ ಉದಯ ವಿ ಶೆಟ್ಟಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಅನಿತಾ ಫ್ರಾನ್ಸಿಸ್ ಹೇಳಿದರು. 

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಕುಶಲ ಅಡ್ಯಂತಾಯ ವಡ್ಡೊಟ್ಟು ಸಂಜೀವ ಪೂಜಾರಿ ಅಮಿತ್ ಪೂಜಾರಿ ಜಯಕರ ಪೂಜಾರಿ ಸದಾಶಿವ ಪೂಜಾರಿ ಬೋಜ ಪೂಜಾರಿ ಮುಂಡಿಗುಡ್ಡೆ ಟಿ ಕೆ ಜಾರ್ಜ್, ಐವನ್ ಕಾಂತಾವರ, ಗ್ರೇಸಿ,  ಸಂತೋಷ ಕುಲಾಲ್ ,  ದಿನೇಶ್ ಬಾರಾಡಿ, ಸುಪ್ರೀತ್, ಹಿರಿಯ ಕಾಂಗ್ರೆಸ್ಸಿಗ ಮಾಜಿ ಪಂಚಾಯತ್  ಸದಸ್ಯ ರಾಮಶೆಟ್ಟಿ ಬೇಲಾಡಿ, ಹಿರಿಯ ಕಾಂಗ್ರೆಸ್ಸಿಗರಾದ ಪರ್ನೊಡಿ ಸಂಜೀವ ಪೂಜಾರಿ ಪರ್ನೊಡಿ,  ಪೂವ ದೇವಾಡಿಗ ವಸಂತಿ ದೇವಾಡಿಗ,  ಮಾಜಿ ಪಂಚಾಯತ್ ಉಪಾಧ್ಯಕ್ಷೆ ಪುಷ್ಪ ಮೂಲ್ಯ , ಸರಿತಾ ನಾಯ್ಕ್  ವಡ್ಡೊಟ್ಟು  ಪೂರ್ಣಿಮಾ ಪೂಜಾರಿ ಭಾಗ್ಯಲಕ್ಷ್ಮಿ ದೇವಾಡಿಗ ದಯಾನಂದ ದೇವಾಡಿಗ ಹರೀಶ್ ದೇವಾಡಿಗ ಅಶ್ವತ್ ಸಾಮಾಜಿಕ ಜಾಲತಾಣದ ಸಂಚಾಲಕರಾದ ಸತೀಶ್ ಕಾರ್ಕಳ ಉಪಸ್ಥಿತರಿದ್ದರು. ಕಾರ್ಕಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರದೀಪ್ ಬೇಲಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು 


 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget