ಮಾಳ ಮಂಜುಶ್ರೀ ಭಜನಾ ಮಂಡಳಿ ಪ್ರಗತಿ ನಗರದಲ್ಲಿ ಯೋಗ ತರಗತಿಗೆ ಚಾಲನೆ-Times of karkala

ಮಾಳ ಮಂಜುಶ್ರೀ ಭಜನಾ ಮಂಡಳಿ ಪ್ರಗತಿ ನಗರದಲ್ಲಿ ಯೋಗ ತರಗತಿಗೆ ಚಾಲನೆ-Times of karkala

ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕೆಂಬ ಉದ್ದೇಶದಿಂದ ಯೋಗವನ್ನು ಕರಗತಮಾಡಿಕೊಂಡು ಹಲವಾರು ಜನರಿಗೆ ಮಾರ್ಗದರ್ಶನ ಕಾಲ್ ಆಗಬೇಕೆಂಬ ಉದ್ದೇಶದಿಂದ ಹಸಿರು ತಪ್ಪಲಿನ ಮಾಳದಲ್ಲಿ  ಯೋಗ ತರಗತಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪ್ರಮೀಳಾ ಡಿ ಶೆಟ್ಟಿ ಅವರು ಅಲಂಕರಿಸಿದರು. ಕಾರ್ಯಕ್ರಮದ ಉದ್ಘಾಟನೆ ಶ್ರೀಮತಿ ರಮಿತಾ ಶೈಲೇಂದ್ರ ಅವರು ದೀಪ ಉದ್ಘಾಟಿಸುವ ಮೂಲಕ ಚಾಲನೆಯನ್ನು ನೀಡಿ ಮಹಿಳೆ ನಾಲ್ಕುಗೋಡೆಯ ಬಂಧಿಯಾಗದೆ ತನಗೆ ತಿಳಿದಿರುವ ವಿದ್ಯೆ ಬಂದು ನಾಲ್ಕು ಜನರಿಗೆ ತಿಳಿಸುವ ಮಾತೆ ಯಾಗಬೇಕು, ನಿರಂತರ ಯೋಗದಿಂದ ಆರೋಗ್ಯವಂತರಾಗಿ ಇರಬಹುದು ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. 


ಇನ್ಫೋಸಿಸ್ ನಲ್ಲಿ ಕಾರ್ಯವನ್ನು ನಿರ್ವಹಿಸಿಕೊಂಡು ಹಲವಾರು ಯೋಗ ಅರ್ಜಿಗಳಿಗೆ ಯೋಗವನ್ನು ಕಲಿಸುವ  ಕೃಷ್ಣ ದಾಸ್ ಅವರು ಯೋಗದಿಂದ ಶತಾಯುಷಿ ಆಗಬಹುದು, ಎಂದು ಯೋಗವನ್ನು ಹೇಳಿ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ನಲ್ಲೂರು ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು ಅವರು, ಯೋಗ ಶಿಕ್ಷಕಿ ಜಯಂತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಸ್ವಾಗತ ಶೇಖರ್ ಶೆಟ್ಟಿ, ನಿರೂಪಣೆ ಅವಿನಾಶ್ ಕುಲಾಲ್ ಅವರು ನೆರವೇರಿಸಿದರು.

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget