ಶಿರ್ಲಾಲು ಗೋ ಕಳ್ಳತನ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಹಿಂಜಾವೇ ಕಾರ್ಯಕರ್ತರಿಂದ ದಿಢೀರ್ ಪ್ರತಿಭಟನೆ: ನೂರಾರು ಕಾರ್ಯಕರ್ತರಿಂದ ಭಜನೆ!-Times of karkala

ಶಿರ್ಲಾಲು ಗೋ ಕಳ್ಳತನ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಹಿಂಜಾವೇ ಕಾರ್ಯಕರ್ತರಿಂದ ದಿಢೀರ್ ಪ್ರತಿಭಟನೆ: 

ನೂರಾರು ಕಾರ್ಯಕರ್ತರಿಂದ ಭಜನೆ!


ಕಾರ್ಕಳ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಸರಣಿ ಗೋವು‌ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ,  ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮಂಗಳವಾರ ರಾತ್ರಿ ಆಹೋರಾತ್ರಿ ಭಜನೆ ನಡೆಸಿದ್ದಾರೆ.

 ಶಿರ್ಲಾಲು ಭಾಗದಲ್ಲಿ ದುಷ್ಕರ್ಮಿಗಳು ಕೊಟ್ಟಿಗೆಗೆ ನುಗ್ಗಿ ತಲವಾರು ಬೀಸಿ  ಸರಣಿ ಗೋವು ಕಳ್ಳತನದ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಕಳೆದ ಭಾನುವಾರ ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಶಿರ್ಲಾಲಿನಲ್ಲಿ ಹಿಂದೂ‌ ಜಾಗರಣ ವೇದಿಕೆಯ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. 


ವಿಪರ್ಯಾಸವೆಂದರೆ ಈ ಪ್ರತಿಭಟನೆ ನಡೆದ ಅರ್ಧಗಂಟೆಯಲ್ಲೇ ಮುನಿಯಾಲಿನಿಂದ ಶಿರ್ಲಾಲು ಕಡೆಗೆ ಮಾರುತಿ ಕಾರಿನಲ್ಲಿ ‌ಗೋವುಗಳನ್ನು ಕಾರ್ಯಕರ್ತರು ಬೆನ್ನಟ್ಟಿದ್ದರು. ಆದರೆ ಕಾರು ಮರಕ್ಕೆ ಡಿಕ್ಕಿ‌ ಹೊಡೆದ ಬಳಿಕ ಅರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಈ ಘಟನೆ ನಡೆದ ಬಳಿಕ ಕೆರಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾನುವಾರ ರಾತ್ರಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಅಜೆಕಾರು ಪೊಲೀಸ್ ಠಾಣೆಗೆ ಧಾವಿಸಿ ಪ್ರತಿಭಟನೆ ನಡೆಸಿದ್ದರು. \


ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದರು.  ಆದರೆ ಈ ಪ್ರಕರಣ ನಡೆದು ಎರಡು‌ ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಲು ವಿಫಲರಾದ ಹಿನ್ನೆಲೆಯಲ್ಲಿ ಕೆರಳಿದ ಹಿಂಜಾವೇಯ ನೂರಾರು ಕಾರ್ಯಕರ್ತರು ಮಂಗಳವಾರ ಪೊಲೀಸ್ ಠಾಣೆಯ ಮುಂಭಾಗದಲ್ಲಿ  ಸಂಜೆ 7 ಗಂಟೆಯಿಂದ ದಿಢೀರ್ ಪ್ರತಿಭಟನೆ ನಡೆಸಿದರು.


ಜಾಹೀರಾತು

 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget