ನಿಟ್ಟೆ:ಇಂಜಿನಿಯರ್ಸ್ ದಿನಾಚರಣೆ-Times of karkala

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಸೆ.೧೫ ರಂದು ಇಂಜಿನಿಯರ್ಸ್ ದಿನವನ್ನು ಸರ್. ಎಂ. ವಿಶ್ವೇಶ್ವರಯ್ಯ ಬ್ಲಾಕ್ ನಲ್ಲಿ ಆಚರಿಸಿತು.

 ನಿಟ್ಟೆ:ಇಂಜಿನಿಯರ್ಸ್ ದಿನಾಚರಣೆ


ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ನಿರಂಜನ್ ಎನ್ ಚಿಪ್ಲಂಕರ್ ಸರ್. ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

'ವಿಶ್ವೇಶ್ವರಯ್ಯನವರ ಆದರ್ಶ ಗುಣಗಳು ವಿದ್ಯಾರ್ಥಿಗಳನ್ನು ಹಾಗೂ ಪ್ರಾಧ್ಯಾಪಕರನ್ನು ಹುರಿದುಂಬಿಸುವಂತೆ ಮಾಡಲಿ' ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ. ರಮೇಶ್ ಮಿತ್ತಂಥಾಯ ಈ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು.

ವಿಭಾಗದ ಸಹಪ್ರಾಧ್ಯಾಪಕ  ಡಾ. ಶ್ರೀರಾಮ್ ಮರಾಠೆ ಸರ್. ಎಂ. ವಿಶ್ವೇಶ್ವರಯ್ಯ ಅವರ ಜೀವನದ ಕೆಲವು ಮಹತ್ವದ ಘಟನೆಗಳನ್ನು ತಿಳಿಸಿ ಅವು ನಮ್ಮ ಜೀವನಕ್ಕೆ ಹೇಗೆ ಆದರ್ಶಪ್ರಾಯವಾಗಲಿದೆ ಎಂದು ತಿಳಿಸಿದರು.

ನಿಟ್ಟೆ ಕ್ಯಾಂಪಸ್ ರೆಜಿಸ್ಟ್ರಾರ್ ಯೋಗೀಶ್ ಹೆಗ್ಡೆ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಭಟ್ ಸ್ವಾಗತಿಸಿದರು, ಸಹಪ್ರಾಧ್ಯಾಪಾಕ ಸಬ್ಯತ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಧೃತಿ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು 


























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget