ಕಾರ್ಕಳ:ಪುರಾತನ ದೇವಸ್ಥಾನ ದ್ವಂಸ- ಬಿಜೆಪಿ ಬಣ್ಣ ಬಯಲು- ಸಚಿವರು ಮೌನ-Times or karkala

ಜನರ ಧಾರ್ಮಿಕ ನಂಬಿಕೆಗಳನ್ನೇ ತನ್ನ ರಾಜಕೀಯ ಬಂಡವಾಳವಾಗಿಸಿಕೊಂಡ ಬಿಜೆಪಿಯ ಅವಕಾಶವಾದಿ ರಾಜಕಾರಣದ ಬಣ್ಣ ಬಯಲಾಗಿದೆ, ದೇವಸ್ಥಾನವನ್ನು ಕೆಡವಿದವರನ್ನು ದೇವರೂ ಕ್ಷಮಿಸಲಾರ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ತಿಳಿಸಿದ್ದಾರೆ.

ಬಹುಸಂಖ್ಯಾತ ‌ಹಿಂದುಗಳ ಧಾರ್ಮಿಕ‌ ನಂಬಿಕೆಗಳಾದ ದೇವರು, ದೇವಸ್ಥಾನ, ಗೋವು ಮೊದಲಾದ ವಿಚಾರಗಳನ್ನೇ ತನ್ನ ರಾಜಕೀಯ‌ ಬಂಡವಾಳವಾಗಿಸಿ ಅಧಿಕಾರಕ್ಕೆ ಬಂದವರು ದೇವಸ್ಥಾನವನ್ನೇ ಕೆಡವುದರ ಮೂಲಕ ತನ್ನ ಅವಕಾಶವಾದಿ ರಾಜಕರಣವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಜನಪರ ಆಡಳಿವನ್ನು ನೀಡಿ ಜನರ ವಿಶ್ವಾಸವನ್ನು ಗೆಲ್ಲಲಾಗಲಿಲ್ಲ, ಕೊನೆ ‌ಪಕ್ಷ ಹಿಂದೂಗಳ ನಂಬಿಕೆಯ ಪ್ರತೀಕವಾದ ದೇವಸ್ಥಾನವನ್ನೂ ಉಳಿಸಲಿಲ್ಲ. ಯಾರಿಗೂ ಸಮಸ್ಯೆ ಇಲ್ಲದ  ಪುರಾತನ ದೇವಸ್ಥಾನ ಒಡೆಯುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರದಾದ್ಯಂತ ಗೋಕಳ್ಳರ  ಹಾವಳಿ ಮಿತಿ ಮೀರಿದೆ  ಬಡ ಕುಟುಂಬಕ್ಕೆ ಆಧಾರದವಾಗಿದ್ದ ಬೆಲೆಬಾಳುವ ದನಗಳನ್ನು ತಲವಾರು ತೋರಿಸಿ ಹಟ್ಟಿಯಿಂದಲೇ ಕದಿಯಲಾಗುತ್ತದೆ ಎಂದು ರೈತರು, ಸಂಘಟನೆಯವರು ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ, ಬೇರೆ ಪಕ್ಷ ‌ಆಡಳಿತ ನಡೆಸುವ ಸಂದರ್ಭ ರಸ್ತೆಯಲ್ಲಿ ಹೋರಳಾಡುತ್ತಿದ್ದವರು ನಾಪತ್ತೆಯಾಗಿದ್ದಾರೆ, ದೂರ ಅಫ್ಘಾನಿಸ್ತಾನದ ಬಗ್ಗೆ ಹೇಳಿಕೆಯನ್ನು ನೀಡುವ‌ ಸಚಿವರು ತಮ್ಮದೇ ಆಡಳಿತ ಅವಧಿಯಲ್ಲಿ ಇಷ್ಟೇಲ್ಲಾ ಆದರೂ ಮೌನವಹಿಸಿರುವುದು ದುಃಖದ ಸಂಗತಿಯಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು 


 
ಜಾಹೀರಾತು 


 

   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget