October 2021

 ಮಿಯ್ಯಾರು ಜೆರಾಲ್ಡ್ ಡಿಸಿಲ್ವ ಅವರಿಗೆ ಕರ್ಣಾಟ ಕಲಾ ಪೋಷಕ - ಸಂದೇಶ್ ಕೋಟ್ಯಾನ್ ಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ.ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ  ವತಿಯಿಂದ ನಡೆದ 21ನೇ ವರ್ಷದ ನವರಂಗೋತ್ಸವ ಅಖಿಲ ಭಾರತ ರಂಗೋತ್ಸವದ ಸಂಪನ್ನ ಸಂಭ್ರಮದಲ್ಲಿ ಶುಕ್ರವಾರ ಕಲಾ ಪೋಷಕರಾದ ರಂಗನಟ ಕಾರ್ಕಳ ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್ ಜೆ. ಡಿಸಿಲ್ವ  ಅವರಿಗೆ ಕರ್ಣಾಟ ಕಲಾ ಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂದೇಶ್ ಕೋಟ್ಯಾನ್, ಸುಕುಮಾರ್ ಮೋಹನ್, ಉಜಿರೆ ಅಶೋಕ್ ಭಟ್,ಪವನ್ ಕಿರಣ್ ಕೆರೆ, ಮಮತಾ ಪೂಜಾರಿ ಮತ್ತಿತರರು ಇದ್ದರು.

ಮುದ್ರಾಡಿ : ಅಖಿಲ ಭಾರತ ರಂಗೋತ್ಸವ ಸಂಪನ್ನ.

ಮಿಯ್ಯಾರು ಜೆರಾಲ್ಡ್ ಡಿಸಿಲ್ವ ಅವರಿಗೆ ಕರ್ಣಾಟ ಕಲಾ ಪೋಷಕ - ಸಂದೇಶ್ ಕೋಟ್ಯಾನ್ ಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ.

ಜಾತೀಯ ಸಂಕುಚಿತ ಭಾವನೆ ದೂರವಾಗಲಿ : ಉಜಿರೆ ಅಶೋಕ್ ಭಟ್.

ಮುದ್ರಾಡಿ ನಾಟ್ಕದೂರು : ನಮ್ಮಲ್ಲಿ ಜಾತೀಯತೆಯ ಸಂಕುಚಿತ ಭಾವನೆ ದೂರವಾಗಿ ಸೌಹಾರ್ದ ಬಾಂಧವ್ಯ ಬೆಳೆಯಬೇಕು. ಅದಕ್ಕಾಗಿ ನಮ್ಮ ಸಭೆಸಮಾರಂಭಕ್ಕೆ ಅನ್ಯ ಧರ್ಮೀಯರನ್ನು ನಾವು ಕರೆಸಬೇಕು ಆಗ ನಮ್ನ ಸಂಕುಚಿತ ಭಾವನೆ ದೂರ ವಾಗುತ್ತದೆ. ಸೌಹಾರ್ದಕ್ಕೆ ಸಮನ್ವಯತೆಯ ಕ್ರಾಂತಿಯನ್ನು ಮೂಡಿಸಿ ಮಿಯ್ಯಾರಿನ ಜೆರಾಲ್ಡ್ ಡಿ ಸಿಲ್ವ ಸಾಮಾಜಿಕ ಜಾಗೃತಿಯನ್ನು ಮಾಡಿದ್ದಾರೆ ಎಂದು ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಹೇಳಿದರು.

ಅವರು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ನಡೆದ ಅಖಿಲ ಭಾರತ ರಂಗೋತ್ಸವದ ಸಂಪನ್ನ ಸಂಭ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಕಲೆಯ ಊರು ಅಂದರೆ ನಾಟ್ಕದೂರು ಮುದ್ರಾಡಿ. ನಾಟ್ಕದೂರಿನಿಂದ ಹಿಂದೆ ಸರಿಯುತ್ತಿರುವ ನಾಟಕರಂಗ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಾ ಪೋಷಕರಾದ ರಂಗನಟ ಕಾರ್ಕಳ ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್ ಜೆ. ಡಿಸಿಲ್ವ ಮಾತನಾಡಿ   ಮುದ್ರಾಡಿಯಲ್ಲಿ ನಡೆಯುವ ಅನ್ನದಾನ ಧರ್ಮದಾನದ ಜೊತೆಗೆ ನಡೆಯುವ ಕಲಾ ಸೇವೆ ಅಪೂರ್ವವಾದುದು, ಕಲಾ ಸೇವೆಗೆ ನೀಡಿದ ಗೌರವವನ್ನು ಕಲಾ ಮಾತೆ ಮತ್ತು ಕಲಾವಿದರಿಗೆ ಸಮರ್ಪಿಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ರಂಗ ಕಲಾವಿದ ಕಾರ್ಕಳದ ಸಂದೇಶ್ ಕೋಟ್ಯಾನ್ ಅವರಿಗೆ  ಸಿಜಿಕೆ ರಂಗ ಪ್ರಶಸ್ತಿಯನ್ನು ನೀಡಲಾಯಿತು.

ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ಪ್ರಸಂಗಕರ್ತ ಪವನ್ ಕಿರಣ್ ಕೆರೆ, ಕಾರ್ಕಳ ಪುರಸಭಾ ಸದಸ್ಯೆ  ಮಮತಾ ಪೂಜಾರಿ, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ರಂಗ ನಿರ್ದೇಶಕ ಸುಕುಮಾರ್ ಮೋಹನ್, ಸಂಚಾಲಕಿ ಕಮಲಮ್ಮ‌ ಮೋಹನ್, ನಮ ತುಳುವೆರ್ ಕಲಾ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಪಿ.ವಿ.ಆನಂದ್ ಸಾಲಿಗ್ರಾಮ ನಿರೂಪಿಸಿದರು.


 ಕಾರ್ಕಳ: ಅನಾರೋಗ್ಯದಿಂದ ಬೇಸತ್ತು ವ್ಯಕ್ತಿ ನೇಣಿಗೆ ಶರಣುಅಸ್ತಮಾ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕುಡಿತದ ಚಟಕ್ಕೆ ಒಳಗಾಗಿ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿರುವ ಘಟನೆ ಕಡ್ತಲದ ಕಕ್ಕೆನಾಡು ದರ್ಕಾಸು ಮನೆಯಲ್ಲಿ ನಡೆಸಿದೆ.

ಸಂಜೀವ ಕುಲಾಲ್(76) ಘಟನೆಯಲ್ಲಿ ಬದುಕಿಗೆ ಅಂತ್ಯ ಹೇಳಿದವರು.ರೋಗ ಶಮನಕ್ಕೆ ಹಲವೆಡೆಗಳಲ್ಲಿ ಔಷಧಿ ಪಡೆದು ಗುಣಮುಖರಾಗದೇ ಹೋದಾಗ ಮದ್ಯ ಸೇವನೆಯ ಚಟಕ್ಕೆ ಒಳಗಾಗಿದ್ದರು. ಅಕ್ಟೋಬರ್ ೧೫ರ ಸಂಜೆ ವೇಳೆಗೆ ಮನೆಯಲ್ಲಿ ಇತರ್‍ಯಾರು ಇಲ್ಲದ ಸಮಯದಲ್ಲಿ ಮನೆಯ ಮುಂದೆ ಹಾಕಲಾಗಿದ್ದ ಚಪ್ಪರದ ಜಂತಿಗೆ ಚೂಡಿದಾರದ ಶಾಲನ್ನು ಕಟ್ಟಿ ಉರುಳು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಅಜೆಕಾರು ಠಾಣೆಯಲ್ಲಿ ಕೇಸು ದಾಖಲಾಗಿದೆ.

 


ಕಾರ್ಕಳ: ಎರಡು ಮಕ್ಕಳೊಂದಿಗೆ ವಿವಾಹಿತೆ ಮಹಿಳೆ ನಾಪತ್ತೆ

ಕಾರ್ಕಳ: ಇಬ್ಬರು‌ ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.ಬೋಳ ಪದವು ನಿವಾಸಿ ಸವಿತಾ ಪೂಜಾರಿ (36) ಅವರು,‌ ವಿಷ್ಣು (10) ಹಾಗೂ ಆಶ್ಮಿತಾ ಎಂಬ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ. ಇವರು ಗಂಡನನ್ನು ಬಿಟ್ಟು ತಾಯಿ ಮನೆಯಾದ ಬೋಳ ಪದವು ಎಂಬಲ್ಲಿ ವಾಸಿಸುತ್ತಿದ್ದರು. 

ಬೀಡಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಇವರು, ಅಕ್ಟೋಬರ್ 12ರಂದು ಸಂಜೆ 4.30ಕ್ಕೆ ಇಬ್ಬರು ಮಕ್ಕಳೊಂದಿಗೆ  ಮುಂಡ್ಕೂರಿನ ನಾನಿಲ್ತಾರಿನಲ್ಲಿರುವ ಅಜ್ಜಿ‌ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಬಳಿಕ ಅಲ್ಲಿಗೂ ಹೋಗದೆ ಮನೆಗೂ ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ. ಸವಿತಾ ಪೂಜಾರಿ ಒಂದು ವಾರದ ಹಿಂದೆ ತಮ್ಮನಿಗೆ ಪೋನ್ ಮಾಡಿ 'ನನಗೆ ಸತೀಶ್ ಎಂಬವರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದರಂತೆ. ಅದಕ್ಕೆ ತಮ್ಮ ಒಪ್ಪಿರಲಿಲ್ಲ. ಹೀಗಾಗಿ ಉಮೇಶ್ ಎಂಬಾತನೊಂದಿಗೆ ಸವಿತಾ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

ಮುದ್ರಾಡಿಯಲ್ಲಿ ಅಖಿಲ ಭಾರತ ನವರಂಗೋತ್ಸವ:ಕರ್ಣಾಟ ನಾಡ ಪೋಷಕ ಪ್ರಶಸ್ತಿ ಪ್ರದಾನ. 

ಕರಾವಳಿ ರಂಗಾಯಣವನ್ನು ಉಡುಪಿ ಜಿಲ್ಲೆಯಲ್ಲೇ ಸ್ಥಾಪಿಸಿ : ಗೋಪಾಲಕೃಷ್ಣ ನಾಯರಿ.

ನಾಟ್ಕದೂರು ಮುದ್ರಾಡಿ : ಕರಾವಳಿ ರಂಗಾಯಣವನ್ನು ಉಡುಪಿ ಜಿಲ್ಲೆಯಲ್ಲೇ ಸ್ಥಾಪಿಸಿ, ರಂಗಾಯಣಕ್ಕೆ ಉಡುಪಿ ಜಿಲ್ಲೆಯ ಮಣ್ಣು ಸೂಕ್ತವಾಗಿದೆ. ಆದುನಿಕ ರಂಗಭೂಮಿಯ ಕೆಲಸಗಳು ಉಡುಪಿ ಜಿಲ್ಲೆಯಲ್ಲೇ ವಿಶೇಷವಾಗಿ ನಡೆಯುತ್ತಿದೆ. ನಿರಂತರ ರಂಗಸೇವೆ ಮಾಡುತ್ತಿರುವ ರಂಗ ನಿರ್ದೇಶಕ ಸುಕುಮಾರ್‌ ಮೋಹನ್‌ ನೇತ್ರತ್ವದಲ್ಲಿ ರಂಗಾಯಣಕ್ಕಾಗಿ ಹೋರಾಟ ನಡೆಯಬೇಕಿದೆ ಎಂದು ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದರು.

ಅವರು ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನ ಬಿ.ವಿ.ಕಾರಂತ ಬಯಲು ರಂಗಸ್ಥಳದಲ್ಲಿ ಗುರುವಾರ ಆರಂಭಗೊಂಡ ಅಖಿಲ ಭಾರತ ನವರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

ಕಡಿಮೆ ಖರ್ಚಿನಲ್ಲಿ ರಂಗಭೂಮಿಯಲ್ಲಿ ಎಲ್ಲಾ ಸಾಧ್ಯತೆಯನ್ನು ಬಳಸಿಕೊಂಡು ರಂಗ ನಿರ್ದೇಶಕ ಸುಕುಮಾರ್‌ ಮೋಹನ್‌ ನೇತ್ರತ್ವದ ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆ ವಿಶೇಷ ಸಾಧನೆ ಮಾಡಿ ಭಾರತದ ರಂಗಭೂಮಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಗೋಪಾಲಕೃಷ್ಣ ನಾಯರಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಕಳದ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಈಗ ಕನ್ನಡ ಸಂಸ್ಕೃತಿ ಸಚಿವರಾಗಿದ್ದಾರೆ. ಅವರಿಂದಲೇ ಕರಾವಳಿಯ ರಂಗಾಯಣದ ಸ್ಥಾಪನೆಯ ಕೆಲಸ ಆಗಲಿ, ಅದು ಕಾರ್ಕಳ ಕ್ಷೇತ್ರದಲ್ಲೇ ಬೇಕಿದ್ದರೂ ಮಾಡಲಿ, ಒಟ್ಟಾರೆಯಾಗಿ ಉಡುಪಿ ಜಿಲ್ಲೇಯಲ್ಲೇ ರಂಗಾಯಣ ನಿರ್ಮಾಣವಾಗಲಿ ಎಂದು ಗೋಪಾಲಕೃಷ್ಣ ನಾಯರಿ ಆಶಿಸಿದರು. 


ಕರ್ಣಾಟ ನಾಡ ಪೋಷಕ ಪ್ರಶಸ್ತಿ ಸ್ವೀಕರಿಸಿದ ಬೆಂಗಳೂರಿನ ಉದ್ಯಮಿ ಸಮಾಜಸೇವಕರಾದ ಬೈಂದೂರಿನ ಡಾ. ಗೋವಿಂದ ಬಾಬು ಪೂಜಾರಿ ಮಾತನಾಡಿ ಕಲೆಗೆ ಬೆಲೆ ಕೊಟ್ಟು ಕಲೆಯನ್ನು ಉಳಿಸುವ ಸಂಸ್ಥೆಗಳಿಗೆ ನನ್ನಿಂದಾದ ಸಹಾಯ ಮಾಡುತ್ತೇನೆ, ಜೀವನದಲ್ಲಿ ಬಡವರ ಕಣ್ಣೀರು ಒರೆಸುವುದು ಅದು ನನ್ನ ಕರ್ತವ್ಯವಾಗಿದೆ, ಕೊರೋನದ ಬಿಡುವಿನ ಸಮಯವನ್ನು ಜನಸೇವೆ ಮೀಸಲಿಟ್ಟು ಜೀವನದ ಸಾರ್ಥಕತೆಯನ್ನು ಕಂಡಿದ್ದೇನೆ ಎಂದು ಕೃತಜ್ಷತೆ ಸಲ್ಲಿಸಿದರು. 


ಸಂಸ್ಕಾರ ಭಾರತೀಯ ಪ್ರಮುಖರಾದ ಬೆಂಗಳೂರಿನ ಫ.ರಾ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲೆಯ ಕೆಲಸ ಅದು ಪರಿಪೂರ್ಣ ಕೆಲಸ, ಅದು ದೇಶದ ಕೆಲಸ, ಅದು ಸಂಸ್ಕೃತಿಯ ಪ್ರತಿಷ್ಠಾಪನೆಯ ಕೆಲಸ. ಈ ಕೆಲಸವನ್ನು ನಿರಂರತವಾಗಿ ಮಾಡುತ್ತಿರುವ ನಮ ತುಳುವೆರ್‌ ಕಲಾ ಸಂಘಟನೆ ನಮ್ಮ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳುರು ಉದ್ಯಮಿ ಬೈಂದೂರಿನ ಡಾ. ಗೋವಿಂದ ಬಾಬು ಪೂಜಾರಿ, ವಿಜಯ ಶೆಟ್ಟಿ ಕಾರ್ಕಳ, ಪ್ರಮಲ್‌ ಕುಮಾರ್‌ ಕಾರ್ಕಳ, ಸ್ಟೋನ್‌ ಕ್ರಷರ್‌ ಫೆಡರೇಶನ್‌ ರಾಜ್ಯ ಘಟಕದ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ಮತ್ತು ಕಲಾವಿದ ಮೈಸೂರಿನ ಅನಿಲ್‌ ಹುಲಿಯಾ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ರಂಗ ನಿರ್ದೇಶಕರಾದ ಪರಶುರಾಮ ಹರಪ್ಪನಹಳ್ಳಿ. ಸಂಸ ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು. ನಮ ತುಳುವೆರ್‌ ಕಲಾ ಸಂಘಟನೆ ಅಧ್ಯಕ್ಷ ಸುಕುಮಾರ್‌ ಮೋಹನ್‌ ಸ್ವಾಗತಿಸಿ ಸಂಚಾಲಕ ಬೆಂಗಳೂರಿನ ಜಗದೀಶ್‌ ಜಾಲ ನಿರೂಪಿಸಿದರು. ರಾಯಚೂರಿನ ಮಾರುತಿ ಬಡಿಗೇರ್‌ ಅಭಿನಂದನ ಭಾಷಣ ಮಾಡಿದರು. ಬಳಿಕ ಗುರುರಾಜ್‌ ಮಾರ್ಪಳ್ಳಿ ಮಾರ್ಗದರ್ಶನದಲ್ಲಿ ನಾಟ್ಕ ಮುದ್ರಾಡಿ ತಂಡದಿಂದ ಅವ್ವ ನನ್ನ ಅವ್ವ ನಾಟಕ ಪ್ರದರ್ಶನಗೊಂಡಿತು. ಲೋ ಬಿಪಿ ಸಮಸ್ಯೆಯಿಂದ ಯುವತಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮದಲ್ಲಿ ನಡೆದಿದೆ.ಪರನೀರು ಪಾದೆ ನಿವಾಸಿ ಕುಮಾರಿ ದೀಕ್ಷಿತಾ (24) ಮೃತಪಟ್ಟವರು.

ಇವರು  ಲೋ ಬಿ ಪಿ ಹಾಗೂ ವಾಂತಿಯಿಂದ ಅಸೌಖ್ಯದಲ್ಲಿದ್ದು ನಿಟ್ಟೆ ಹಾಗೂ ಬೆಳ್ಮಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ದಿನಾಂಕ 14 ರಂದು ರಾತ್ರಿ 11:00 ಗಂಟೆಗೆ ಅಸೌಖ್ಯದಲ್ಲಿರುವವರನ್ನು ಮನೆಯಲ್ಲಿ ಆರೈಕೆ ಮಾಡಿ ನಂತರ ಚಿಕಿತ್ಸೆಗಾಗಿ ದಿನಾಂಕ 15 ರಂದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಢು ಬರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಾಹೀರಾತು 
ಕಾರ್ಕಳ: ಪಿರ್ಯಾದಿದಾರರಾದ ಶಬರೀಶ  (23), ತಂದೆ:ಜಗದೀಶ್ , ವಾಸ: ಕೈರಬೆಟ್ಟು  ಪರನೀರು ಪಾದೆ ಕಲ್ಯಾ ಗ್ರಾಮ  ಮತ್ತು ಅಂಚೆ , ಕಾರ್ಕಳ  ಇವರ ಅಕ್ಕ ಕುಮಾರಿ ದೀಕ್ಷಿತಾ (24) ಲೋ ಬಿ ಪಿ ಹಾಗೂ ವಾಂತಿಯಿಂದ ಅಸೌಖ್ಯದಲ್ಲಿದ್ದು ಈ ಬಗ್ಗೆ ನಿಟ್ಟೆ ಹಾಗೂ ಬೆಳ್ಮಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 14/10/2021 ರಂದು ರಾತ್ರಿ 11:00 ಗಂಟೆಗೆ ಅಸೌಖ್ಯದಲ್ಲಿರುವವರನ್ನು ಮನೆಯಲ್ಲಿ ಆರೈಕೆ ಮಾಡಿ ನಂತರ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಢು ಬಂದಿದ್ದು, ದಿನಾಂಕ 5/10/2021 ರಂದು 01:40 ಗಂಟೆಗೆ  ದಾರಿಯಲ್ಲಿ ಮೃತಪಟ್ಟಿದ್ದು, ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 35/2021 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ:ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ಏಕಾಏಕಿ ಬೆಂಕಿ: 4 ಮನೆಗಳಿಗೆ ಹಾನಿ

 

ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು  4 ಮನೆಗಳ ವೈರಿಂಗ್ ಸುಟ್ಟು ಹೋಗಿ ಟಿವಿ, ಫ್ಯಾನ್, ಬಲ್ಬ್ ಗಳು ಹಾನಿಯಾಗಿದೆ.ತೆಳ್ಳಾರಿನ ಬೆದ್ರಪಲ್ಕೆ ಪರಿಸರದಲ್ಲಿ ಯಾರ್ಡ್ ನಲ್ಲಿನ ಯಂತ್ರಗಳ ಸಮಸ್ಯೆಯಿಂದಾಗಿ ಈ ಅನಾಹುತ ಸಂಭವಿಸಿದೆ.

ಘಟನೆಯಲ್ಲಿ ಪರಿಸರದ ಮೋಹಿನಿ ಗೌಡ, ಗೋವಿಂದ ನಾಯ್ಕ, ಶಶಿಧರ ಶೆಟ್ಟಿ ಹಾಗೂ ಲಲಿತ ನಾಯ್ಕ ರವರ ವಿದ್ಯುತ್ ಸಬಂಧಿತ ಪರಿಕರ ಗಳಿಗೆ ಹಾನಿಯಾಗಿರುತ್ತದೆ. ಘಟನೆ ಸಂಭವಿಸಿದ ಮನೆಗಳಿಗೆ ದುರ್ಗ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಸದಸ್ಯೆ ಯರಾದ ದೇವಕಿ, ಪ್ರಮೀಳಾ ಆಚಾರ್ಯ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

"ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲುಗಳು ಅಥವಾ ಬೆಂಕಿ ಕಾಣಿಸಿಕೊಂಡಾಗ ವಿದ್ಯುತ್ ಲೈನ್ ಗಳು ಟ್ರಿಪ್ ಆಗಬೇಕಾಗುವುದು ಅತೀ ಅಗತ್ಯ ಹಾಗೂ ಇದು ಸಾಮಾನ್ಯ ಪ್ರಕ್ರಿಯೆ.ಆದರೆ ತೆಳ್ಳಾರಿನಲ್ಲಿ ಈ ಹಿಂದೆಯೂ ಇದೇ ರೀತಿ ಆದಾಗ ಲೈನ್ ಗಳು ಟ್ರಿಪ್ ಆಗದೇ ಇರುವ ಕಾರಣದಿಂದ ವಿದ್ಯುತ್ ಕಡಿತಗೊಳ್ಳದೇ ಸಣ್ಣ ಪುಟ್ಟ ನಷ್ಟಗಳು ಸಂಭವಿಸಿದೆ.ಆದರೆ ಜೀವ ಹಾನಿ ಯಾದಲ್ಲಿ ಯಾರು ಹೊಣೆ ಎಂಬುದು ಇಲ್ಲಿ ಪ್ರಶ್ನೆ.ವಿದ್ಯುತ್ ಯಾರ್ಡ್ ಗಳಲ್ಲಿನ ಯಂತ್ರಗಳಲ್ಲಿರುವ ತಾಂತ್ರಿಕ ತೊಂದರೆಯಿಂದ ಅಥವಾ ಬ್ರೇಕರ್ ನ ಸಮಸ್ಯೆಯಿಂದಾಗಿ ಇಂಥಹ ಘಟನೆಗಳು ಸಂಭವಿಸುತ್ತದೆ" ಎಂಬುದು ಸ್ಥಳೀಯರು ಅಭಿಪ್ರಾಯ ವ್ಯಕಪಡಿಸಿದ್ದಾರೆ.

ಘಟನೆಯ ಬಗ್ಗೆ ಗ್ರಾಮ ಪಂಚಾಯತ್ ನಿಂದ ಇಂಧನ ಸಚಿವರಿಗೆ ಹಾಗೂ ಇಲಾಖೆಗೆ ಲಿಖಿತ ಪತ್ರ ಬರೆದು ಆಗಿರುವ ಸಮಸ್ಯೆ ಹಾಗೂ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯಕ್ ರವರು ತಿಳಿಸಿರುತ್ತಾರೆ.ಜಾಹೀರಾತು 
MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget