ಜ್ಞಾನಸುಧಾ : ಆರ್ಕಿಟೆಕ್ಚರ್ ವಿಭಾಗದಲ್ಲಿ ಶ್ರೀಹರಿ ಪಡಿಗಾರ್‌ಗೆ ರಾಷ್ಟ್ರಮಟ್ಟದಲ್ಲಿ 15ನೇ ರ‍್ಯಾಂಕ್-Times of karkala

ಜ್ಞಾನಸುಧಾ : ಆರ್ಕಿಟೆಕ್ಚರ್ ವಿಭಾಗದಲ್ಲಿ  ಶ್ರೀಹರಿ ಪಡಿಗಾರ್‌ಗೆ ರಾಷ್ಟ್ರಮಟ್ಟದಲ್ಲಿ 15ನೇ ರ‍್ಯಾಂಕ್ 

ದೇಶದ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಟಾಪರ್‌ಗಳನ್ನು ಮೀರಿಸಿದ ಸಾಧನೆ.

ಗಣಿತನಗರ : ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀಹರಿ ಪಡಿಗಾರ್ ರಾಷ್ಟ್ರಮಟ್ಟದ  ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇಮೈನ್) ಆರ್ಕಿಟೆಕ್ಚರ್ ವಿಭಾಗದಲ್ಲಿ 99.98 % ಪರ್ಸಂಟೈಲ್‌ನೊoದಿಗೆ 15ನೇ ರ‍್ಯಾಂಕ್ ಪಡೆದು, ದೇಶದ ೩೦ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಟಾಪರ್‌ಗಳನ್ನು ಮೀರಿಸಿದ ಅಮೋಘ ಸಾಧನೆ ಮಾಡಿದ್ದಾರೆ. ದೇಶದ 60015 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು. ಈತ ಜೆಇಇ ಮೈನ್ 4ನೇ ಫೇಸ್‌ನ ಪ್ರವೇಶ ಪರೀಕ್ಷೆಯಲ್ಲಿಯೂ 99.14 ಪರ್ಸೆಂಟೈಲ್ ಗಳಿಸುವುದುರ ಜೊತೆಗೆ, ಕರ್ನಾಟಕ ಸಿಇಟಿಯಲ್ಲಿಯೂ 570ನೇ ರ‍್ಯಾಂಕ್ ಗಳಿಸಿದ ಸಾಧಕ ವಿದ್ಯಾರ್ಥಿಯಾಗಿದ್ದಾರೆ. 


ಇವರ ಈ ಸಾಧನೆಯನ್ನು ಅಜೆಕಾರ್ ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಕಾರ್ಕಳ :

ಜಾಹೀರಾತು   

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget