ನಾಳೆ(ಅ.24) ಮಾಳ ಕೆರ್ವಾಶೆ ಸಿಎ ಬ್ಯಾಂಕಿನ ಬಜಗೋಳಿ ಶಾಖೆಯ ನವೀಕೃತ ಕಟ್ಟಡ ಉದ್ಘಾಟನೆ-Times of karkala


 ನಾಳೆ ಮಾಳ ಕೆರ್ವಾಶೆ ಸಿಎ ಬ್ಯಾಂಕಿನ ಬಜಗೋಳಿ ಶಾಖೆಯ ನವೀಕೃತ ಕಟ್ಟಡ ಉದ್ಘಾಟನೆ

ಕಾರ್ಕಳ: ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಬಜಗೋಳಿ ಶಾಖೆಯ ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ತುಡರ್ ಕಾಂಪ್ಲೆಕ್ಸ್ನ ಸಾಯಿ ಸಭಾಭವನದಲ್ಲಿ ಅ 24ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್‌ಕುಮಾರ್ ನವೀಕೃತ ಕಟ್ಟಡವನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾದ ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ.

ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್‌ಸಿಡಿಸಿಸಿ ನಿರ್ದೇಶಕರಾದ ವಾದಿರಾಜ ಶೆಟ್ಟಿ, ಮುಡಾರು ಪಂಚಾಯಿತಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್‌ಕುಮಾರ್ ಭಾಗವಹಿಸಲಿದ್ದಾರೆ.








Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget