ಕಾರ್ಕಳ:ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ಏಕಾಏಕಿ ಬೆಂಕಿ: 4 ಮನೆಗಳಿಗೆ ಹಾನಿ-Times of karkala

ಕಾರ್ಕಳ:ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ಏಕಾಏಕಿ ಬೆಂಕಿ: 4 ಮನೆಗಳಿಗೆ ಹಾನಿ

 

ವಿದ್ಯುತ್ ಟ್ರಾನ್ಸ್ಫಾರ್ಮರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು  4 ಮನೆಗಳ ವೈರಿಂಗ್ ಸುಟ್ಟು ಹೋಗಿ ಟಿವಿ, ಫ್ಯಾನ್, ಬಲ್ಬ್ ಗಳು ಹಾನಿಯಾಗಿದೆ.ತೆಳ್ಳಾರಿನ ಬೆದ್ರಪಲ್ಕೆ ಪರಿಸರದಲ್ಲಿ ಯಾರ್ಡ್ ನಲ್ಲಿನ ಯಂತ್ರಗಳ ಸಮಸ್ಯೆಯಿಂದಾಗಿ ಈ ಅನಾಹುತ ಸಂಭವಿಸಿದೆ.

ಘಟನೆಯಲ್ಲಿ ಪರಿಸರದ ಮೋಹಿನಿ ಗೌಡ, ಗೋವಿಂದ ನಾಯ್ಕ, ಶಶಿಧರ ಶೆಟ್ಟಿ ಹಾಗೂ ಲಲಿತ ನಾಯ್ಕ ರವರ ವಿದ್ಯುತ್ ಸಬಂಧಿತ ಪರಿಕರ ಗಳಿಗೆ ಹಾನಿಯಾಗಿರುತ್ತದೆ. ಘಟನೆ ಸಂಭವಿಸಿದ ಮನೆಗಳಿಗೆ ದುರ್ಗ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಸದಸ್ಯೆ ಯರಾದ ದೇವಕಿ, ಪ್ರಮೀಳಾ ಆಚಾರ್ಯ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

"ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲುಗಳು ಅಥವಾ ಬೆಂಕಿ ಕಾಣಿಸಿಕೊಂಡಾಗ ವಿದ್ಯುತ್ ಲೈನ್ ಗಳು ಟ್ರಿಪ್ ಆಗಬೇಕಾಗುವುದು ಅತೀ ಅಗತ್ಯ ಹಾಗೂ ಇದು ಸಾಮಾನ್ಯ ಪ್ರಕ್ರಿಯೆ.ಆದರೆ ತೆಳ್ಳಾರಿನಲ್ಲಿ ಈ ಹಿಂದೆಯೂ ಇದೇ ರೀತಿ ಆದಾಗ ಲೈನ್ ಗಳು ಟ್ರಿಪ್ ಆಗದೇ ಇರುವ ಕಾರಣದಿಂದ ವಿದ್ಯುತ್ ಕಡಿತಗೊಳ್ಳದೇ ಸಣ್ಣ ಪುಟ್ಟ ನಷ್ಟಗಳು ಸಂಭವಿಸಿದೆ.ಆದರೆ ಜೀವ ಹಾನಿ ಯಾದಲ್ಲಿ ಯಾರು ಹೊಣೆ ಎಂಬುದು ಇಲ್ಲಿ ಪ್ರಶ್ನೆ.ವಿದ್ಯುತ್ ಯಾರ್ಡ್ ಗಳಲ್ಲಿನ ಯಂತ್ರಗಳಲ್ಲಿರುವ ತಾಂತ್ರಿಕ ತೊಂದರೆಯಿಂದ ಅಥವಾ ಬ್ರೇಕರ್ ನ ಸಮಸ್ಯೆಯಿಂದಾಗಿ ಇಂಥಹ ಘಟನೆಗಳು ಸಂಭವಿಸುತ್ತದೆ" ಎಂಬುದು ಸ್ಥಳೀಯರು ಅಭಿಪ್ರಾಯ ವ್ಯಕಪಡಿಸಿದ್ದಾರೆ.

ಘಟನೆಯ ಬಗ್ಗೆ ಗ್ರಾಮ ಪಂಚಾಯತ್ ನಿಂದ ಇಂಧನ ಸಚಿವರಿಗೆ ಹಾಗೂ ಇಲಾಖೆಗೆ ಲಿಖಿತ ಪತ್ರ ಬರೆದು ಆಗಿರುವ ಸಮಸ್ಯೆ ಹಾಗೂ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯಕ್ ರವರು ತಿಳಿಸಿರುತ್ತಾರೆ.







ಜಾಹೀರಾತು 




















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget