ಬಜಗೋಳಿ:ಶತಮಾನದ ಇತಿಹಾಸವಿರುವ ಸಹಕಾರಿ ಸಂಘಗಳಿಗೆ ಗ್ರಾಹಕರೇ ಆಸ್ತಿ: ಎಂ.ಎನ್ ರಾಜೇಂದ್ರಕುಮಾರ್ ಮಾಳ ಕೆರ್ವಾಶೆ ಸಿಎ ಬ್ಯಾಂಕಿನ ಬಜಗೋಳಿ ಶಾಖೆಯ ನವೀಕೃತ ಕಟ್ಟಡ ಉದ್ಘಾಟನೆ-Times of karkala

 ಮಾಳ ಕೆರ್ವಾಶೆ ಸಿಎ ಬ್ಯಾಂಕಿನ ಬಜಗೋಳಿ ಶಾಖೆಯ ನವೀಕೃತ ಉದ್ಘಾಟನೆ

ಶತಮಾನದ ಇತಿಹಾಸವಿರುವ ಸಹಕಾರಿ ಸಂಘಗಳಿಗೆ ಗ್ರಾಹಕರೇ ಆಸ್ತಿ: ಎಂ.ಎನ್ ರಾಜೇಂದ್ರಕುಮಾರ್



ಕಾರ್ಕಳ: ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಬಜಗೋಳಿ ಶಾಖೆಯ ನವೀಕೃತ ಕಟ್ಟಡವನ್ನು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು.

ಅವರು ಭಾನುವಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಸಾಯಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ,ಬ್ರಿಟಿಷರ ಕಾಲದಿಂದ ಸಹಕಾರಿ ಕ್ಷೇತ್ರ ಬೆಳೆದುಬಂದಿದೆ.ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ,ಆದರೆ ಜನರೇ ಕಟ್ಟಿ ಬೆಳೆಸಿದ ಸಹಕಾರಿ ಸಂಘಗಳಿಗೆ ಗ್ರಾಹಕರೇ ಆಸ್ತಿ ಎಂದರು.ದೇವರ ಹೆಸರಿನಲ್ಲಿ ಅಧಿಕ ಬಡ್ಡಿಗೆ ಸಾಲ ಪಡೆಯದೇ ಜನರ ಹೆಸರಿನಲ್ಲಿ ದುಡ್ಡು ಪಡೆಯಿರಿ ಎಂದು ಗ್ರಾಹಕರಿಗೆ ಕಿವಿಮಾತು ಹೇಳಿದರು.

ಜಯಕರ ಶೆಟ್ಟಿ ಇಂದ್ರಾಳಿ ಬ್ಯಾಂಕಿನ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ,ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ,ಜನರು ಸಹಕಾರಿ ಸಂಘಗಳ ಮೇಲೆ ಇರಿಸಿದ ವಿಶ್ವಾಸದಿಂದ ಸಹಕಾರಿ ಸಂಘಗಳು ಬೆಳೆಯಲು ಕಾರಣವಾಗಿದೆ. ರಾಷ್ಟಿçÃಕೃತ ಬ್ಯಾಂಕುಗಳ ಪೈಪೋಟಿಯ ನಡುವೆಯೂ ಸಹಕಾರಿ ಕ್ಷೇತ್ರ ಅತ್ಯಂತ ಪ್ರಬಲವಾಗಿದೆ.ಸಹಕಾರಿ ಸಂಘಗಳು ಕೇವಲ ವ್ಯವಹಾರ ನಡೆಸದೇ ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.

ಈ ಸಂದರ್ಭದಲ್ಲಿ ಮಾಳ ಸಿಎ ಬ್ಯಾಂಕಿನ ಪರವಾಗಿ ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮುಂಡ್ಕೂರು ಸಿಎ ಬ್ಯಾಂಕಿನ ಅಧ್ಯಕ್ಷ ವಾದಿರಾಜ ಶೆಟ್ಟಿ,ಮುಡಾರು ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕರಾದ ಅರುಣ್ ಕುಮಾರ್ ಎಸ್ ವಿ ಹಾಗೂ ಬ್ಯಾಂಕಿನ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಮಾಳ ಸಿಎ ಬ್ಯಾಂಕಿನ ಅಧ್ಯಕ್ಷ ಅನಿಲ್ ಎಸ್ ಪೂಜಾರಿ ಸ್ವಾಗತಿಸಿ,ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ನವೀನ್ ಎಂ ಸುವರ್ಣ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget