ಕಾರ್ಕಳ: ವಾಹನಗಳ ದುರಸ್ತಿ, ಪೈಟಿಂಗ್ ಸಂದರ್ಭದಲ್ಲಿ ಅನುಮಾನ ಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ-Times of karkala

ಕಾರ್ಕಳ: ವಾಹನಗಳ ದುರಸ್ತಿ, ಪೈಟಿಂಗ್ ಸಂದರ್ಭದಲ್ಲಿ ಅನುಮಾನ ಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ





ಕಾರ್ಕಳ :ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ವ್ಯಾಪ್ತಿಯ ಗ್ಯಾರೇಜ್ ಮಾಲಕರ ಸಭೆ ಹಾಗೂ ಜಾನುವಾರು ಕಳ್ಳರ ಪೆರೇಡ್ ಕಾರ್ಕಳ ಪೊಲೀಸ್ ಠಾಣೆಯ ಪರಿಸರದಲ್ಲಿ ನಡೆಯಿತು.

ವಾಹನಗಳ ನಂಬ್ರ ಪ್ಲೇಟ್ ಬದಲಾವಣೆ, ಅಪಘಾತಕ್ಕೊಳಗಾದ ವಾಹನಗಳ ದುರಸ್ತಿ, ವಾಹನಗಳ ಪೈಟಿಂಗ್ ಸಂದರ್ಭದಲ್ಲಿ ಅನುಮಾನ ಬಂದಾಗ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ತಿಳಿಸದರು. ಅದಕ್ಕೆ ಗ್ಯಾರೇಜ್ ಮಾಲಕರು ಸಕರಾತ್ಮಕ ಸ್ಪಂದನೆ ನೀಡಿದರು. 

ಜಾನುವಾರು ಕಳವು ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದವರ ಪೆರೇಡ್ ಕಾರ್ಯವು ಇದೇ ಸಂದರ್ಭದಲ್ಲಿ ನಡೆಯಿತು.

ಕೃತ್ಯಕ್ಕೆ ತಿಲಾಂಜಲಿ ನೀಡಬೇಕು. ಕಾನೂನು ಉಲ್ಲಂಘನೆ ನಡೆಸಿದಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಿವುದೆಂದು ಇದೇ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಕಟ್ಟೆಚ್ಚರ ನೀಡಿದರು. 

ನಗರ ಠಾಣಾಧಿಕಾರಿ ಮಧು ಬಿ. ಇ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು 































 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget