ಯರ್ಲಪಾಡಿ:ದನದ ಕಾಲಿಗೆ ಕತ್ತಿಯಿಂದ ಕಡಿದ ಮಹಿಳೆ-Times of karkala

ಯರ್ಲಪಾಡಿ:ತನ್ನ ಗದ್ದೆಗೆ ದನ ಬಂದಿತೆಂದು ದನದ ಕಾಲನ್ನೇ ಮಹಿಳೆಯೋರ್ವರು ಕಡಿದ ಘಟನೆ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದಲ್ಲಿ ಸಂಭವಿಸಿದೆ.


ಯರ್ಲಪಾಡಿಯ ಸಂತೋಷ್ ಕುಮಾರ್ ಹೆಗ್ಡೆ ಎಂಬುವವರು  ಮೇಯಲೆಂದು  ಬೈಲು ಗದ್ದೆಗೆ ಬಿಟ್ಟಿದ್ದರು.ಹಾಗೆ ಮೇವಿಗಾಗಿ ಬಿಟ್ಟ ದನವೊಂದು ಅಮಣ್ಣಿ ಹೆಗ್ಡೆ ಎಂಬುವವರ  ಗದ್ದೆಗೆ ಹೋಗಿದೆ.

ಇದರಿಂದ ಆಕ್ರೋಶ ಗೊಂಡ ಅಮಣಿ ಹೆಗ್ಡೆ ದನದ ಕಾಲಿಗೆ ಕತ್ತಿಯಿಂದ ಕಡಿದಿದ್ದಾರೆ.ಅಲ್ಲದೆ ಅಮಣ್ಣಿ ಹೆಗ್ಡೆಯವರ ಮೂವರು ಮಕ್ಕಳು ದೂರುದಾರರಾದ ಸಂತೋಷ್ ಹೆಗ್ಡೆಯವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ್ ಕುಮಾರ್ ಹೆಗ್ಡೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


 


  • ಕಾರ್ಕಳ: ಪಿರ್ಯಾದಿದಾರರಾದ ಸಂತೋಷ್ ಕುಮಾರ್ ಹೆಗ್ಡೆ (51), ತಂದೆ: ಶೇಷಪ್ಪ ಹೆಗ್ಡೆ, ವಾಸ; ಯರ್ಲಪಾಡಿ ಗ್ರಾಮ ಕಾರ್ಕಳ ತಾಲೂಕು ಇವರು ದನಗಳನ್ನು ಸಾಕುತ್ತಿದ್ದು ಮೇವಿಗಾಗಿ ಪಿರ್ಯಾದಿದಾರರ ಪಟ್ಟಾ ಜಾಗ ಬೈಲು ಗದ್ದೆಗೆ ಬಿಡುತ್ತಿದ್ದು, ಹಾಗೆ ಮೇವಿಗಾಗಿ ಬಿಟ್ಟ ದನವೊಂದು  ದಿನಾಂಕ 21/10/2021 ರಂದು ಮಧ್ಯಾಹ್ನ 14:30 ಗಂಟೆಗೆ ದಾಸು ಹೆಗ್ಡೆಯವರ ಪತ್ನಿ ಅಮಣ್ಣಿ ಹೆಗ್ಡೆ ಎಂಬುವವರು ದನ ತನ್ನ ಗದ್ದೆಗೆ ಹೋಗಿರುತ್ತದೆ ಎಂಬ ದ್ವೇಷದಿಂದ ದನದ ಕಾಲಿಗೆ ಕತ್ತಿಯಿಂದ ಕಡಿದಿರುತ್ತಾರೆ. ಅಲ್ಲದೇ ಅಮಣಿ ಹೆಗ್ಡೆರವರ 1 ನೇ ಮಗ ಸಂತೋಷ ಪಿರ್ಯಾದಿದಾರರನ್ನು  ವಾಹನ ಅಪಘಾತ ಮಾಡಿ ಕೊಲ್ಲುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಮತ್ತು ಅಮಣಿ ಹೆಗ್ಡೆರವರ 2 ನೇ ಮಗನಾದ  ಸಂದೇಶ ಹೆಗ್ಡೆ ಕರೆಮಾಡಿ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾನೆ ಹಾಗೂ ಅಮಣಿ ಹೆಗ್ಡೆರವರ 3 ನೇ ಮಗ ಸುದರ್ಶನ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2021 ಕಲಂ: 429, 504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget