ಇನ್ನಾ ಗ್ರಾಮ ಪಂಚಾಯತ್ ಕೆ.ಡಿ.ಪಿ ಸಭೆ-Times of karkala

ಇನ್ನಾ ಗ್ರಾಮ ಪಂಚಾಯತ್ ಕರ್ನಾಟಕ ಅಭಿವೃದ್ಧಿ ಕಾರ್ಯ ಕ್ರಮಗಳ ಕೆ.ಡಿ.ಪಿ  ಸಭೆಯು ದಿನಾಂಕ    08-10-2021 ಶುಕ್ರವಾರದಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಕುಶ ಆರ್ ಮೂಲ್ಯರವರ ಅಧ್ಯಕ್ಷತೆಯಲ್ಲಿ ಜರುಗಿತು.  



ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ  ಇಲಾಖೆ, ಆರೋಗ್ಯ , ಮಹಿಳಾ ಮತ್ತು ಮಕ್ಕಳಾ ಕಲ್ಯಾಣ, ಪಶು ವೈದ್ಯ  ಇಲಾಖೆ , ಗ್ರಂಥಾಲಯ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧಿಕಾರಿಗಳು ಹಾಜರಿದ್ದು, ಇಲಾಖೆಯ ಪ್ರಗತಿಯನ್ನು ಮಂಡಿಸಿದರು. 

ಗ್ರಾಮ ಪಂಚಾಯತ್ ಜಲಾನಯನ ಖಾತೆಯಲ್ಲಿ ಇರುವ  ಉಳಿಕೆ ಅನುದಾನ ಖರ್ಚಾದ ಬಗ್ಗೆ ಮತ್ತು ಕಿಂಡಿ ಅಣೆಕಟ್ಟುಗಳ  ನಿರ್ವಹಣೆ  ಬಗ್ಗೆ ಚರ್ಚಿಸಲಾಯಿತು. ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪಶುಚಿಕಿತ್ಸಾಲಯ  ಆಸ್ಪತ್ರೆ ತೆರೆಯಲು ಪ್ರಸ್ತಾವನೆ ಸಲ್ಲಿಕೆಗೆ ತೀರ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸರಿತ ಶೆಟ್ಟಿ, ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ,  ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಹಾಸ ಶೆಟ್ಟಿ , ಶ್ರೀಮತಿ ವಿಮಲ,  ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ  ಸತೀಶ್ ಪರವ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




ಕಾರ್ಕಳ :

ಜಾಹೀರಾತು 




















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget