ಸಾಣೂರು:ಪೆಟ್ರೋಲ್ ಪಂಪ್ ನಲ್ಲಿ ಕಳ್ಳತನ:ಆರೋಪಿ ಬಂಧನ -Times of karkala

 

ಕಾರ್ಕಳ ಸಾಣೂರು ಪೆಟ್ರೋಲ್ ಪಂಪ್ ನ ಬೀಗ ಮುರಿದು ಕಳ್ಳತನ ಮಾಡಿದ ಆರೋಪಿ ಮೂಡಬಿದ್ರೆ ಬೆಳುವಾಯಿಯ ಮುಡಾಯಿಕಾಡು ಸಂತೊಷ್ ಇವನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕಳ್ಳತನ ನಡೆದಿದ್ದ ವೇಳೆ ಪಂಪ್ ನ ಸಿಸಿ ಕ್ಯಾಮಾರದಲ್ಲಿ ಸೆರೆಯಾದ ದ್ರಶ್ತಾವಳಿಯ ಆದಾರದಲ್ಲಿ ಆರೋಪಿಯ ಬಂಧನವಾಗಿದೆ. ಮಂಗಳವಾರ ಸಂತೋಷ್ ಬೆಳುವಾಯಿ ಕಡೆಯಿಂದ ಕಾರ್ಕಳ ಕಡೆಗೆ ಬೈಕ್ ನಲ್ಕಿ ನಲ್ಲಿ ಬರುತ್ತಿದ್ದ ವೇಳೆ ಕಾರ್ಕಳ ಪೊಲೀಸರು ಆರೋಪಿಯನ್ನು ಸಾಣೂರು ಚೆಕ್ಕ್ ಪೋಸ್ಟ್ ಬಳಿ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು ಕಳ್ಳತನ ಮಾಡಿರುವ ಬಗ್ಗೆ ಆತ ಒಪ್ಪಿಕೊಂಡಿರುತ್ತಾನೆ. 


ಕಾರ್ಕಳ ಅನಂತಶಯನದಲ್ಲಿರುವ ಸ್ಟೇಟ್ ಬ್ಯಾಂಕ್ ಎಟಿಎಂ ಒಡೆದು ಕಳವಿಗೆ ಪ್ರಯತ್ನಿಸಿದ್ದಾಗಿ ಅದೇ ದಿನ ಸಾಣೂರು ಸಿದ್ಧಿವಿನಾಯಕ ಪೆಟ್ರೋಲ್ ಪಂಪ್ ನ ಬೀಗ ಮುರಿದು ಕಳ್ಳತನ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. 

ಕೊಡ್ಯಡ್ಕ ಪೆಟ್ರೋಲ್ ಪಂಪ್ ನ ಬೀಗ ಒಡೆದು ಕಳ್ಳತನ ಕ್ಕೆ ಪ್ರಯತ್ನಿಸಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿರುತ್ತಾನೆ.


ಈತ ಮಂಗಳೂರು,ಮೂಡಬಿದ್ರಿ,ಕಾರ್ಕಳ ಮಾರ್ಗದಲ್ಲಿ ಬಸ್ಸಿನಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ. ಈತನ ಮೇಲೆ ಮಂಗಳೂರು ಉರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ, ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಹಾಗು ಮನೆಗೆ ಬೆಂಕಿ ಹಾಕಿದ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.


ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ರವರ ಆದೇಶದಂತೆ, ಕಾರ್ಕಳ ವ್ರತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ ಐ ಮಧು ಬಿ ಇ ಹಾಗು ಸಿಬ್ಬದಿಯವರು ಕಾರ್ಯಾಚರಣೆ ನಡೆಸಿದ್ದರು.


ಕಾರ್ಕಳ :

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget