ಕಲ್ಯಾ:ಲೋ ಬಿಪಿಯಿಂದ ಮೃತಪಟ್ಟ ಯುವತಿ-Times of karkala


 ಲೋ ಬಿಪಿ ಸಮಸ್ಯೆಯಿಂದ ಯುವತಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮದಲ್ಲಿ ನಡೆದಿದೆ.ಪರನೀರು ಪಾದೆ ನಿವಾಸಿ ಕುಮಾರಿ ದೀಕ್ಷಿತಾ (24) ಮೃತಪಟ್ಟವರು.

ಇವರು  ಲೋ ಬಿ ಪಿ ಹಾಗೂ ವಾಂತಿಯಿಂದ ಅಸೌಖ್ಯದಲ್ಲಿದ್ದು ನಿಟ್ಟೆ ಹಾಗೂ ಬೆಳ್ಮಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ದಿನಾಂಕ 14 ರಂದು ರಾತ್ರಿ 11:00 ಗಂಟೆಗೆ ಅಸೌಖ್ಯದಲ್ಲಿರುವವರನ್ನು ಮನೆಯಲ್ಲಿ ಆರೈಕೆ ಮಾಡಿ ನಂತರ ಚಿಕಿತ್ಸೆಗಾಗಿ ದಿನಾಂಕ 15 ರಂದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಢು ಬರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







ಜಾಹೀರಾತು 




















ಕಾರ್ಕಳ: ಪಿರ್ಯಾದಿದಾರರಾದ ಶಬರೀಶ  (23), ತಂದೆ:ಜಗದೀಶ್ , ವಾಸ: ಕೈರಬೆಟ್ಟು  ಪರನೀರು ಪಾದೆ ಕಲ್ಯಾ ಗ್ರಾಮ  ಮತ್ತು ಅಂಚೆ , ಕಾರ್ಕಳ  ಇವರ ಅಕ್ಕ ಕುಮಾರಿ ದೀಕ್ಷಿತಾ (24) ಲೋ ಬಿ ಪಿ ಹಾಗೂ ವಾಂತಿಯಿಂದ ಅಸೌಖ್ಯದಲ್ಲಿದ್ದು ಈ ಬಗ್ಗೆ ನಿಟ್ಟೆ ಹಾಗೂ ಬೆಳ್ಮಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 14/10/2021 ರಂದು ರಾತ್ರಿ 11:00 ಗಂಟೆಗೆ ಅಸೌಖ್ಯದಲ್ಲಿರುವವರನ್ನು ಮನೆಯಲ್ಲಿ ಆರೈಕೆ ಮಾಡಿ ನಂತರ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಢು ಬಂದಿದ್ದು, ದಿನಾಂಕ 5/10/2021 ರಂದು 01:40 ಗಂಟೆಗೆ  ದಾರಿಯಲ್ಲಿ ಮೃತಪಟ್ಟಿದ್ದು, ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 35/2021 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget