ಕಾರ್ಕಳ:ಗೋ ಕಳವು ಹಾಗೂ ಗೋ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೆರೇಡ್-Times of karkala


ಕಾರ್ಕಳ:ಕಾರ್ಕಳ ಡಿವೈಎಸ್ಪಿ ವಿಭಾಗ ವ್ಯಾಪ್ತಿಯ ಗೋ ಕಳವು ಹಾಗೂ ಗೋ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ 100ಕ್ಕೂ ಮಿಕ್ಕಿ ಆರೋಪಿಗಳ ಪೆರೇಡ್ ಕಾರ್ಯವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಸಮ್ಮಖದಲ್ಲಿ ಕಾರ್ಕಳ ಪೊಲೀಸ್ ಠಾಣಾ ಪರಿಸರದಲ್ಲಿ ನಡೆಸಿದರು.

ಹೆಬ್ರಿ, ಅಜೆಕಾರು, ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಪಡುಬಿದ್ರಿ, ಕಾಪು, ಶಿರ್ವ ಠಾಣಾ ಸರಹದ್ದಿನ ವ್ಯಾಪ್ತಿಯೊಳಪಟ್ಟ ಆರೋಪಿತರು ಪೆರೇಡ್‌ನಲ್ಲಿ ಭಾಗಿಯಾಗಿದ್ದು, ಕಾನೂನು ಪರಿಪಾಲನೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಕ್ರಿಮಿನಲ್ ಕೃತ್ಯಗಳಿಂದ ಮುಕ್ತರಾಗಿ ಸಮಾಜದಲ್ಲಿ ಉತ್ತಮ ಬದುಕು ನಡೆಸಿದವರನ್ನು ಗುರುತಿಸಿಸುವ ಕಾರ್ಯವು ಪೊಲೀಸ್ ಇಲಾಖೆಯಿಂದ ನಡೆಯುತ್ತದೆ.

ಮತ್ತೇ ಮತ್ತೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯಾಗೊಂಡವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಸದ್ನಡತೆಯು ವ್ಯಕ್ತಿಯ ಬದುಕನ್ನೇ ಬದಲಾಯಿಸಬಲ್ಲದು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳುವಳಿಕೆ ಮೂಡಿಸಿದರು.

ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ನಗರ ಠಾಣಾಧಿಕಾರಿ ಮಧು, ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಅಜೆಕಾರು ಠಾಣಾಧಿಕಾರಿ ಸುದರ್ಶನ, ಹೆಬ್ರಿ ಠಾಣಾಧಿಕಾರಿ ಮಹೇಶ್, ಪಡುಬಿದ್ರಿ ಠಾಣಾಧಿಕಾರಿ ಜಯಣ್ಣ, ಕಾಪು ಠಾಣಾಧಿಕಾರಿ ತಿಮ್ಮೇಶ್, ಶಿರ್ವ ಠಾಣಾಧಕಾರಿ ಶ್ರೀಶೈಲ ಮೊದಲಾದವರು ಉಪಸ್ಥಿತರಿದ್ದರು.


ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget