ಮಿಯ್ಯಾರು ಜೆರಾಲ್ಡ್ ಡಿಸಿಲ್ವ ಅವರಿಗೆ ಕರ್ಣಾಟ ಕಲಾ ಪೋಷಕ - ಸಂದೇಶ್ ಕೋಟ್ಯಾನ್ ಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ-Times of karkala

 ಮಿಯ್ಯಾರು ಜೆರಾಲ್ಡ್ ಡಿಸಿಲ್ವ ಅವರಿಗೆ ಕರ್ಣಾಟ ಕಲಾ ಪೋಷಕ - ಸಂದೇಶ್ ಕೋಟ್ಯಾನ್ ಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ.ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ  ವತಿಯಿಂದ ನಡೆದ 21ನೇ ವರ್ಷದ ನವರಂಗೋತ್ಸವ ಅಖಿಲ ಭಾರತ ರಂಗೋತ್ಸವದ ಸಂಪನ್ನ ಸಂಭ್ರಮದಲ್ಲಿ ಶುಕ್ರವಾರ ಕಲಾ ಪೋಷಕರಾದ ರಂಗನಟ ಕಾರ್ಕಳ ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್ ಜೆ. ಡಿಸಿಲ್ವ  ಅವರಿಗೆ ಕರ್ಣಾಟ ಕಲಾ ಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂದೇಶ್ ಕೋಟ್ಯಾನ್, ಸುಕುಮಾರ್ ಮೋಹನ್, ಉಜಿರೆ ಅಶೋಕ್ ಭಟ್,ಪವನ್ ಕಿರಣ್ ಕೆರೆ, ಮಮತಾ ಪೂಜಾರಿ ಮತ್ತಿತರರು ಇದ್ದರು.

ಮುದ್ರಾಡಿ : ಅಖಿಲ ಭಾರತ ರಂಗೋತ್ಸವ ಸಂಪನ್ನ.

ಮಿಯ್ಯಾರು ಜೆರಾಲ್ಡ್ ಡಿಸಿಲ್ವ ಅವರಿಗೆ ಕರ್ಣಾಟ ಕಲಾ ಪೋಷಕ - ಸಂದೇಶ್ ಕೋಟ್ಯಾನ್ ಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ.

ಜಾತೀಯ ಸಂಕುಚಿತ ಭಾವನೆ ದೂರವಾಗಲಿ : ಉಜಿರೆ ಅಶೋಕ್ ಭಟ್.

ಮುದ್ರಾಡಿ ನಾಟ್ಕದೂರು : ನಮ್ಮಲ್ಲಿ ಜಾತೀಯತೆಯ ಸಂಕುಚಿತ ಭಾವನೆ ದೂರವಾಗಿ ಸೌಹಾರ್ದ ಬಾಂಧವ್ಯ ಬೆಳೆಯಬೇಕು. ಅದಕ್ಕಾಗಿ ನಮ್ಮ ಸಭೆಸಮಾರಂಭಕ್ಕೆ ಅನ್ಯ ಧರ್ಮೀಯರನ್ನು ನಾವು ಕರೆಸಬೇಕು ಆಗ ನಮ್ನ ಸಂಕುಚಿತ ಭಾವನೆ ದೂರ ವಾಗುತ್ತದೆ. ಸೌಹಾರ್ದಕ್ಕೆ ಸಮನ್ವಯತೆಯ ಕ್ರಾಂತಿಯನ್ನು ಮೂಡಿಸಿ ಮಿಯ್ಯಾರಿನ ಜೆರಾಲ್ಡ್ ಡಿ ಸಿಲ್ವ ಸಾಮಾಜಿಕ ಜಾಗೃತಿಯನ್ನು ಮಾಡಿದ್ದಾರೆ ಎಂದು ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಹೇಳಿದರು.

ಅವರು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ನಡೆದ ಅಖಿಲ ಭಾರತ ರಂಗೋತ್ಸವದ ಸಂಪನ್ನ ಸಂಭ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಕಲೆಯ ಊರು ಅಂದರೆ ನಾಟ್ಕದೂರು ಮುದ್ರಾಡಿ. ನಾಟ್ಕದೂರಿನಿಂದ ಹಿಂದೆ ಸರಿಯುತ್ತಿರುವ ನಾಟಕರಂಗ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಾ ಪೋಷಕರಾದ ರಂಗನಟ ಕಾರ್ಕಳ ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್ ಜೆ. ಡಿಸಿಲ್ವ ಮಾತನಾಡಿ   ಮುದ್ರಾಡಿಯಲ್ಲಿ ನಡೆಯುವ ಅನ್ನದಾನ ಧರ್ಮದಾನದ ಜೊತೆಗೆ ನಡೆಯುವ ಕಲಾ ಸೇವೆ ಅಪೂರ್ವವಾದುದು, ಕಲಾ ಸೇವೆಗೆ ನೀಡಿದ ಗೌರವವನ್ನು ಕಲಾ ಮಾತೆ ಮತ್ತು ಕಲಾವಿದರಿಗೆ ಸಮರ್ಪಿಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ರಂಗ ಕಲಾವಿದ ಕಾರ್ಕಳದ ಸಂದೇಶ್ ಕೋಟ್ಯಾನ್ ಅವರಿಗೆ  ಸಿಜಿಕೆ ರಂಗ ಪ್ರಶಸ್ತಿಯನ್ನು ನೀಡಲಾಯಿತು.

ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ಪ್ರಸಂಗಕರ್ತ ಪವನ್ ಕಿರಣ್ ಕೆರೆ, ಕಾರ್ಕಳ ಪುರಸಭಾ ಸದಸ್ಯೆ  ಮಮತಾ ಪೂಜಾರಿ, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ರಂಗ ನಿರ್ದೇಶಕ ಸುಕುಮಾರ್ ಮೋಹನ್, ಸಂಚಾಲಕಿ ಕಮಲಮ್ಮ‌ ಮೋಹನ್, ನಮ ತುಳುವೆರ್ ಕಲಾ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಪಿ.ವಿ.ಆನಂದ್ ಸಾಲಿಗ್ರಾಮ ನಿರೂಪಿಸಿದರು.


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget