ಬಜಗೋಳಿ:ವಿಪರೀತ ಮದ್ಯಪಾನ,ಮಾರ್ಕೆಟ್ ವಠಾರದಲ್ಲಿ ಬಿದ್ದು ಸಾವು-Times of karkala





ಕಾರ್ಕಳ:ಬಜಗೋಳಿ:ವಿಪರೀತ ಮದ್ಯಪಾನ,ಮಾರ್ಕೆಟ್ ವಠಾರದಲ್ಲಿ ಬಿದ್ದು ಸಾವು 

ವಿಪರೀತ ಕುಡಿತದ ಚಟ ಹೊಂದಿದ ವ್ಯಕ್ತಿಯೋರ್ವರು ಮಾರುಕಟ್ಟೆ ವಠಾರದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲು, ನೀರಪಾದೆ ನಿವಾಸಿ ಜಯ ಪೂಜಾರಿ (50) ಮೃತಪಟ್ಟವರು.

ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವರಾದ ಇವರು ಈ ಹಿಂದೆ 2-3 ಸಲ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ, ಮದ್ಯಪಾನ ಮಾಡುವುದನ್ನು ನಿಲ್ಲಿಸಲಿಲ್ಲ.

ಇಂದು ಬೆಳಗ್ಗೆ 9:00 ಗಂಟೆಗೆ 11:30 ಗಂಟೆಯ ಮಧ್ಯೆ ವಿಪರೀತ ಮದ್ಯಪಾನ ಮಾಡಿದ ಪರಿಣಾಮ ಬಜಗೋಳಿ ಪೇಟೆಯಲ್ಲಿರುವ ಮಾರ್ಕೆಟ್ ವಠಾರದಲ್ಲಿ ಮೃತಪಟ್ಟಿದ್ದಾರೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 





















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget