ಕಾರ್ಕಳ:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪೆರ್ವಾಜೆಯ ಕೆ.ನರೇಂದ್ರ ಕಾಮತ್ ಆಯ್ಕೆ -Times of karkala

ಉಡುಪಿ : ರಾಜ್ಯೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2021 ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ಮೂರು ಸಂಘಸಂಸ್ಥೆ ಸೇರಿದಂತೆ ಒಟ್ಟು 35 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಯೋಗ ವಿಭಾಗದಲ್ಲಿ  ಕಾರ್ಕಳ ಪೆರ್ವಾಜೆಯ ಕೆ.ನರೇಂದ್ರ ಕಾಮತ್ ರವರು   2021 ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಹೀಗಿದೆ.
ಕಡೆಕಾರಿನ ಗಂಗಾಧರ ಜೆ.ಕಡೆಕಾರು (ಕ್ರೀಡೆ), ಶಿರ್ವದ ಗಣೇಶ ಪಂಜೆಮಾರು (ಅಂಗವಿಕಲ ಚಿತ್ರಕಲೆ), ಸಾಲಿಗ್ರಾಮದ ಡಾ.ಪಾರಂಪಳ್ಳಿ ಚಂದ್ರಶೇಖರ ಸುಧಾಕರ (ವೈದ್ಯಕೀಯ), ಡಾ.ಶಶಿಕಿರಣ ಉಮಾಕಾಂತ್ (ವೈದ್ಯಕೀಯ), ಗುರುಚರಣ ಪೊಲಿಪು (ಜಾನಪದ), ನಿಟ್ಟೂರು ಮಹಾಬಲ ಶೆಟ್ಟಿ (ಜಾನಪದ), ಬೈಲೂರಿನ ಅಕ್ಷತಾ ದೇವಾಡಿಗ (ಕಲೆ), ಕಾರ್ಕಳ ಅತ್ತೂರಿನ ಮಹಾಬಲ ಸುವರ್ಣ (ದೈವಾರಾಧನೆ), ಕಾಪು ಪಾದೆಬೆಟ್ಟು ಪೂವಪ್ಪ ಪೂಜಾರಿ (ದೈವಾರಾಧನೆ), ತೆಂಕ ಗ್ರಾಮದ ಎರ್ಮಾಳು ಶೇಖರ (ದೈವಾರಾಧನೆ).

ಸುಭಾಶ್‌ಚಂದ್ರ ವಾಗ್ಳೆ (ಮಾದ್ಯಮ), ಕಾರ್ಕಳ ಪೆರ್ವಾಜೆ ಕೆ.ನರೇಂದ್ರ ಕಾಮತ್ (ಯೋಗ), ಕುಷ್ಟ ಕೊರಗ (ಕಲೆ), ಪಡುವರಿ ಬಿ.ರಾಮ ಟೈಲರ್ (ರಂಗಭೂಮಿ), ವಂದನಾ ರೈ (ರಂಗಭೂಮಿ), ಸುಜಿತ್ ಕೋಟ್ಯಾನ್ ನಿಟ್ಟೆ (ರಂಗಭೂಮಿ), ಹರಿಪ್ರಸಾದ್ ನಂದಳಿಕೆ (ರಂಗಭೂಮಿ), ಬಳ್ಕೂರು ಕೆ. ತಿಲಕ್‌ರಾಜ್ (ರಂಗಭೂಮಿ ಹಾಸ್ಯ), ಎಸ್.ಸಂಜೀವ ಪಾಟೀಲ್ (ಸಂಕೀರ್ಣ), ಪ್ರೊ.ಡಾ.ದಿನೇಶ್ ಶೆಟ್ಟಿ (ಸಂಕೀರ್ಣ), ಸೂರ್ಯ ಪುರೋಹಿತ ಆಚಾರ್ಯ (ಸಂಕೀರ್ಣ).

ಉಡುಪಿಯ ನಾಗಾರ್ಜುನ ಡಿ.ಪೂಜಾರಿ (ಸಮಾಜ ಸೇವೆ), ಕಾಪು ಎಲ್ಲೂರು ಶರಾವತಿ ಯು.ಆರ್.(ಸಮಾಜ ಸೇವೆ), ಗೋಪಾಲ ಸಿ.ಬಂಗೇರ (ಸಮಾಜ ಸೇವೆ), ಕೋಟತಟ್ಟು ನಾಗರಾಜ ಪುತ್ರನ್ (ಸಮಾಜ ಸೇವೆ), ಸಾಯಿನಾಥ್ ಶೇಟ್ ಕುಂದಾಪುರ (ಸಮಾಜ ಸೇವೆ), ಶಿವಾನಂದ ತಲ್ಲೂರು ಕುಂದಾಪುರ (ಸಮಾಜ ಸೇವೆ), ಬೈಂದೂರು ಎನ್.ರಮಾನಂದ ಪ್ರಭು (ಸಮಾಜ ಸೇವೆ), ಕಾಪು ಕಳತ್ತೂರು ಮೊಹಮ್ಮದ್ ಫಾರೂಕ್ ಚಂದ್ರನಗರ (ಸಮಾಜ ಸೇವೆ), ಬಾಲಕೃಷ್ಣ ಎಂ.ಮದ್ದೋಡಿ (ಸಾಮಾಜಿಕ ಕ್ಷೇತ್ರ).

ಕುಂದಾಪುರದ ಡಾ.ಪಾರ್ವತಿ ಜಿ.ಐತಾಳ್ (ಸಾಹಿತ್ಯ). ಕುಂದಾಪುರ ಸಳ್ವಾಡಿ ಆರಾದ್ಯ ಎಸ್.ಶೆಟ್ಟಿ (ಕಲೆ), ಸೌತ್‌ಕೆನರಾ ಫೋಟೊಗ್ರಾಫರ್ಸ್‌ ಅಸೋಸಿಯೇಷನ್ ಉಡುಪಿ ವಲಯ (ಸಂಘ ಸಂಸ್ಥೆ), ಶಾಂತಿನಿಕೇತನ ಯುವ ವೃಂದ ಕುಡಿಬೈಲು ಕುಚ್ಚೂರು ಹೆಬ್ರಿ (ಸಂಘ ಸಂಸ್ಥೆ), ಮೇಕ್‌ಸಮ್ 1 ಸ್ಮೈಲ್ (ಸಂಘಸಂಸ್ಥೆ). 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget