ಕಾರ್ಕಳ :ಯುವ ನಟ, ನಿರ್ದೇಶಕ ನಿರ್ಮಾಪಕ ಗಣಿ ದೇವ್ ಕಾರ್ಕಳ ಇವರಿಗೆ ನಾಡಪ್ರಭು ಶ್ರೀ ಕೆಂಪೇ ಗೌಡ ಪ್ರಶಸ್ತಿ-Times of karkala

  





ಕಾರ್ಕಳ :ಯುವ ನಟ, ನಿರ್ದೇಶಕ ನಿರ್ಮಾಪಕ ಗಣಿ ದೇವ್ ಕಾರ್ಕಳ ಇವರಿಗೆ  ನಾಡಪ್ರಭು ಶ್ರೀ ಕೆಂಪೇ ಗೌಡ ಪ್ರಶಸ್ತಿ

ಶುಭ ಗುರು ಟ್ರಸ್ಟ್ ವತಿಯಿಂದ ನಾಡಿನ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿಯಾದ ನಾಡಪ್ರಭು ಶ್ರೀ ಕೆಂಪೇ ಗೌಡ ಪ್ರಶಸ್ತಿ ಈ ಬಾರಿ ಕನ್ನಡದ ಯುವ ನಟ, ನಿರ್ದೇಶಕ ನಿರ್ಮಾಪಕ ಗಣಿ ದೇವ್ ಕಾರ್ಕಳ ಇವರಿಗೆ ಲಭಿಸಿದೆ. ಪ್ರತಿ ವರ್ಷ ವಿವಿಧ ರಂಗದ ಸಾಧಕರಿಗೆ ಕೊಡಮಾಡುವ ಈ ಪ್ರಶಸ್ತಿಯು ಈ ಬಾರಿ ಕಾರ್ಕಳದ ಪ್ರತಿಭೆಗೆ ಒಲಿದಿದೆ.ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ನಾಡಪ್ರಭು ಕೆಂಪೇ ಗೌಡ ಪ್ರಶಸ್ತಿ ಲಭಿಸಿದೆ.

ಗಣಿ ದೇವ್ ಕಾರ್ಕಳ ಅವರು ನಿಲುಕದ ನಕ್ಷತ್ರ ಹಾಗು ಜಿಷ್ಣು ಚಿತ್ರ ನಿರ್ದೇಶನ ಮಾಡಿದ್ದು ಹಾಗು ಇವರ ನಿರ್ಮಾಣದ ಕಪೋ ಕಲ್ಪಿತಂ ಚಿತ್ರ ಸೆನ್ಸಾರ್ ಹಂತದಲ್ಲಿದೆ. ಇದುವರೆಗೆ ನಾಲ್ಕು ಚಿತ್ರಗಳಿಗೆ ಸಾಹಿತ್ಯ ಬರೆದಿದ್ದು, ಮೂರು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.  ಮೂರು ಚಿತ್ರಗಳಿ ಸಂಗೀತ ನಿರ್ದೇಶನ ನೀಡಿರುವ ಇವರು ಒಂದು ಚಿತ್ರ ನಿರ್ಮಾಣವನ್ನೂ ಮಾಡಿದ್ದು, ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. 

ಕ್ಯಾಮರಾಮನ್ ಆಗಿ ಕೂಡ ಅನೇಕ ಆಲ್ಬಮ್ ಹಾಡುಗಳನ್ನು ನಿರ್ವಹಿಸಿದ ಇವರು ಹಾಡುಗಾರರಾಗಿಯೂ ಕೂಡ ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ಒಟ್ಟಾರೆ ಚಿತ್ರದ ಹನ್ನೊಂದಕ್ಕಿಂತ ಹೆಚ್ಚು ವಿಭಾಗದಲ್ಲಿ ಕೆಲಸಮಾಡುವ ಚಾಕಚಕ್ಯತೆ ಹೊಂದಿದ್ದಾರೆ.

ಜಾಹೀರಾತು 































 
   

  


 
        




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget