ಕಾರ್ಕಳ: ಗಾಂಧಿ ಜಯಂತಿ ಪ್ರಯುಕ್ತ ಸಾಮರಸ್ಯ ನಡಿಗೆ ಕಾರ್ಯಕ್ರಮ-Times of karkala


ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ತತ್ವ ಸಿದ್ದಾಂತ ಸರ್ವಕಾಳಿತವಾಗಿದ್ದು, ಅದನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಸಾಮಾರಸ್ಯ ಸಾಧ್ಯ. ಈ ನಿಟ್ಟಿನಲ್ಲಿ ಸಾಮರಸ್ಯದ ನಡಿಗೆ. ಮಹಾತ್ಮರ ಸಾಧನೆ ಬಿಂಬಿಸುವುದೆ ನಡಿಗೆಯ ಸದ್ದುದ್ದೇಶವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಮಾರ್ಗದರ್ಶನದಲ್ಲಿ, ವಿವಿಧ ಘಟಕಗಳ ಸಹಯೋದೊಂದಿಗೆ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಶನಿವಾರ ಸಂಜೆ ಆಯೋಜಿಸಿದ ಸಾಮರಸ್ಯ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಗಾಂಧಿಜಿ ಕೇವಲ ವ್ಯಕ್ತಿ, ಶಕ್ತಿಯಲ್ಲ ಅವರು ವೇಧ, ಉಪನಿಷತ್ತು ಮೈಗೂಡಿಸಿಕೊಂಡ ಮಹಾಚೇತನ. ಉದಾರ ಚರಿತ್ರೆಯುಳ್ಳವರು.ಪವಿತ್ರ ಭಾರತದ ನೆಲ.ಗಾಳಿ, ಪಂಚಭೂತಗಳಲ್ಲಿ ಗಾಂಧಿ ತತ್ವ ಮಿಳಿತವಾಗಿದೆ. ದೇಶದಲ್ಲಿ ಪ್ರಧಾನಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ದಿನವು ಮಹಾತ್ಮರ ದಿನದಂದೆ ಆಗಿದೆ.ಗಾಂಧಿ ಕನಸಿನ ಗ್ರಾಮ ಸ್ವರಾಜ್ಯಕ್ಕೆ ಪೂರ್ಣ ಅರ್ಥ ಕೊಟ್ಟವ"ರು ಎಂದರು.

ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ ಮಾತನಾಡಿ, ಗಾಂಧಿ "ತತ್ವದ ಭಾಗವೇ ಅಹಿಂಸೆ. ಹಿಂಸೆ ಎಲ್ಲಿ ನಡೆಯುತ್ತಿದೆಯೋ ಅಲ್ಲಿ ಗಾಂಧಿ ತತ್ವವೇ ಮಾಯವಾಗುತ್ತಿರುವುದು ಕಾರಣವಾಗಿದೆ. ಎಳೆಮೆಯಲ್ಲಿ ಗಾಂಧಿ ತತ್ವ ಬೆಳೆಸಿಕೊಂಡಾಗ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಣಲು ಸಾಧ್ಯ" ಎಂದಿದ್ದಾರೆ.

ಗಾಂಧಿ ಮೈದಾನದಿಂದ ವಿಸ್ತೃತ ಬಸ್ ನಿಲ್ದಾದ ವರೆಗೆ ಸಾಮರಸ್ಯ ನಡಿಗೆ ಸಾಗಿಬಂತು. ಬಸ್ ನಿಲ್ದಾಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಕಿ ಸಮಾಜ ಸೇವಕ, ಲೇಖಕ ಹರ್ಷ ಕುಮಾರ್ ಕುಗ್ವೆ, ಸುಶಾಂತ್ ಸುಧಾಕರ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮಹಿಳಾ ಕಾಂಗ್ರೆಸ್ ನ ಮಾಲಿನಿ ರೈ ಸಾಣೂರು, ಯುವ ಕಾಂಗ್ರೆಸ್ ಮುಖಂಡ ದೀಪಕ್ ಕೋಟ್ಯಾನ್, ಯೋಗೀಶ್, ಕೆಪಿಸಿಸಿ ಸದಸ್ಯ ಉದಯಕುಮಾರ್ ಶೆಟ್ಟಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಭಾನುಪ್ರಕಾಶ್, ಪ್ರಮುಖರಾದ ಜಯರಾಮ ಆಚಾರ್ಯ, ಸುಭಿತ್ ಎನ್.ಆರ್, ಆರ್.ವಿವೆಕಾನಂದ ಶೆಣೈ, ಸುಶಾಂತ್ ಸುಧಾಕರ್, ನೀರೆ ಕ್ರಷ್ಣ ಶೆಟ್ಟಿ, ಮೊಹಮ್ಮದ್ ಅಸ್ಲಾಂ, ಅಶ್ಪಕ್ ಅಹಮ್ಮದ್, ಅನಿತಾ ಡಿಸೋಜಾ, ಪ್ರತಿಮಾ ರಾಣೆ, ಕಾಂತಿ,ಶೆಟ್ಟಿ, ನಕ್ರೆ ಜಾರ್ಜ್ ಕ್ಯಾಸ್ತಲಿನ್. ಜಯರಾಮ ಆಚಾರ್ಯ, ಲೊರೊ ಮೆಂಡನ್ಸ್, ಪ್ರಾನ್ಸಿಸ್ ಡಿಸೋಜ ಬೆಳ್ಮಣ್ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ತಾಲೂಕು ಘಟಕದ ವಕ್ತಾರ ಶುಭದರಾವ್ ನಿರೂಪಿಸಿದರು

ಜಾಹೀರಾತು  
   

  


 
        
 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget