ಇನ್ನಾ ಗ್ರಾಮ ಪಂಚಾಯತ್:ಡಿಜಿಟಲ್ ಗ್ರಂಥಾಲಯ ಉದ್ಘಾಟನೆ-Times of karkala

 





ಕಾರ್ಕಳ :




ಇನ್ನಾ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ 

ಇನ್ನಾ ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ೧೫೩ನೇ  ಜನ್ಮದಿನಾಚರಣೆ ,ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, ಜಲಜೀವನ್ ಮಿಷನ್ ವಿಶೇಷ ಗ್ರಾಮ ಸಭೆ, ಬೃಹತ್ ಸ್ವಚ್ಛತಾ  ಆಂದೋಲನಕ್ಕೆ ಚಾಲನೆ, ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಕುಶ ಆರ್ ಮೂಲ್ಯ ಅಧ್ಯಕ್ಷತೆಯಲ್ಲಿ  ಜರುಗಿತು.  

“ನಮ್ಮ ಗ್ರಾಮ ಸ್ವಚ್ಛಗ್ರಾಮ” ಪರಿಕಲ್ಪನೆಯೊಂದಿಗೆ  ಸಂಘ  ಸಂಸ್ಥೆಗಳು ಹಾಗೂ ಸಾರ್ವಜನಿಕರು  ೨೦ ಸ್ವಛ್ಛತಾ  ತಂಡಗಳಾಗಿ  ಗ್ರಾಮದ  ವಿವಿಧ ಜನವಸತಿ ಪ್ರದೇಶ , ಗ್ರಾಮೀಣ ರಸ್ತೆ, ಶಾಲೆ, ಅಂಗನವಾಡಿ, ಆಸ್ಪತ್ರೆ, ದೇವಸ್ಥಾನ, ದೈವಸ್ಥಾನಗಳ ವಠಾರಗಳನ್ನು ಸ್ವಚ್ಛಗೊಳಿಸಲಾಯಿತು. 
ಈ ಕಾರ್ಯಕ್ರವiದಲ್ಲಿ  ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸರಿತ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ದೀಪಕ್ ಕೋಟ್ಯಾನ್ , ಶ್ರೀಮತಿ ಕಸ್ತೂರಿ, ಶ್ರೀಮತಿ ಶರ್ಮಿಳಾ, ಚಂದ್ರಹಾಸ ಶೆಟ್ಟಿ , ಶ್ರೀಮತಿ ವಿಮಲ,  ಶ್ರೀ ಪ್ರೇಮ್ ಕುಲಾಲ್ , ಕು| ಸಮೀಕ್ಷಾ ಶೆಟ್ಟಿ  ಗ್ರಾಮಸ್ಥರಾದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೇ ಶ್ರೀಮತಿ ಸುಲೋಚನಾ ಕೋಟ್ಯಾನ್ , ಶಿಕ್ಷಕರಾದ  ಪಿ. ಎ. ರವೀಂದ್ರನ್ , ನಿವೃತ್ತ ಶಿಕ್ಷರಾದ  ಸುಬ್ರಮಣ್ಯ ತಂತ್ರಿ , ಉದ್ಯಮಿ ಉಕ್ಕುಡ ಲಿಂಗಪ್ಪ ಶೆಟ್ಟಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಅಧ್ಯಕ್ಷರು  ಶ್ರೀಮತಿ ಸುಜಾತ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, , ಸಂಘ ಸಂಸ್ಥೆಯ ಅಧ್ಯಕ್ಷರು/ಸದಸ್ಯರು, ಶಕ್ತಿ ಸಂಜೀವಿನಿ ಒಕ್ಕೂಟದ  ಸದಸ್ಯರು,  ಉಪಸ್ಥಿತರಿದ್ದರು.  ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಪರವ ಕಾರ್ಯಕ್ರಮ ನಿರೂಪಿಸಿದರು. 

ಜಾಹೀರಾತು 

























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget