ಕಾರ್ಕಳದಾದ್ಯಂತ ಭಾರೀ ಮಳೆ:ತೋಡಿಗೆ ಬಿದ್ದು ವ್ಯಕ್ತಿ ಸಾವು-Times of karkala


ಕಾರ್ಕಳದಾದ್ಯಂತ ಭಾರೀ ಮಳೆ:ತೊಡಿಗೆ ಬಿದ್ದು ವ್ಯಕ್ತಿ ಸಾವು 

ಕಾರ್ಕಳ: ಚಂಡಮಾರುತದ ಪ್ರಭಾವದಿಂದಾಗಿ ಕಾರ್ಕಳದಲ್ಲಿ ಭಾರಿ ಮಳೆಯಾಗುತ್ತಿದ್ದು ಸಂಜೆ ವೇಳೆಗೆ ಜನರು ಮಳೆಗೆ ಪರದಾಡುವಂತೆ ಆಗಿದೆ. ಮಳೆಯಿಂದಾಗಿ ಹಲವೆಡೆ ವಿದ್ಯುತ್ ವ್ಯತಯ ಕಂಡು ಬಂದಿದೆ.

ತೊಡಿಗೆಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಂಜೂರಿನಲ್ಲಿ ಸಂಭವಿಸಿದೆ.ನಿಂಜೂರು ನಿವಾಸಿ ಸಂಜೀವ (59) ಮೃತಪಟ್ಟವರು.

ನಿಂಜೂರು ಗ್ರಾಮದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಗ್ರಾಣಿಯಾಗಿ  ಕೆಲಸ ಮಾಡಿಕೊಂಡಿದ್ದು, ಪ್ರತಿದಿನ ಸೈಕಲ್‌ನಲ್ಲಿ ಕೆಲಸಕ್ಕೆ  ಹೋಗಿ ಬರುತ್ತಿದ್ದರು.

ದಿನಾಂಕ 12/10/2021 ರಂದು ಮಳೆ ಇದ್ದ ಕಾರಣ ಬಸ್ಸಿನಲ್ಲಿ ಕೆಲಸಕ್ಕೆ ಹೋಗಿದ್ದರು ಸಂಜೆ 7 ಗಂಟೆಯಾದರೂ ಮನೆಗೆ ವಾಪಾಸು ಬಾರದ ಕಾರಣ ಶ್ರೀಮತಿ ಬೇಬಿ ರವರು ಮತ್ತು ಇತರರೊಂದಿಗೆ ಸೇರಿ  ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿರಲಿಲ್ಲ.

ದಿನಾಂಕ 13/10/2021 ರಂದು ಬೆಳಿಗ್ಗೆ ಮನೆ ಬಳಿ ಹುಡುಕಾಡುತ್ತಿರುವಾಗ ನಿಂಜೂರಿನ ಸ್ಟೀವನ್ ಎಂಬವರು ನಿಂಜೂರು ಕೊಡಮಣಿತ್ತಾಯ ದೈವಸ್ಥಾನದ ದ್ವಾರದ ಬಳಿ ರಸ್ತೆ ಬದಿಯ ತೋಡಿನಲ್ಲಿ ಸಂಜೀವವರವರು ಕವುಚಿ ಬಿದ್ದ ಸ್ಥಿತಿಯಲ್ಲಿದ್ದುದಾಗಿ ಮನೆಯವರ ಬಳಿ ತಿಳಿಸಿದ್ದು  ಸ್ಥಳಕ್ಕೆ ಹೋಗಿ ನೋಡಿದಾಗ ಸಂಜೀವ ಹಾಂಡರವರು ರಸ್ತೆ ಬದಿಯ ತೋಡಿನಲ್ಲಿ ಕವುಚಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ.

ಪಕ್ಕದಲ್ಲಿ ಅವರ ಛತ್ರಿ ಮತ್ತು ತರಕಾರಿಯ ಪ್ಲಾಸ್ಟಿಕ್ ಕವರ್ ಇದ್ದು ಒಂದು ಚಪ್ಪಲ್  ಮೊಣಕಾಲಿನ ಬಳಿ ಸಿಕ್ಕಿ ಹಾಕಿಕೊಂಡಿದ್ದು ಇನ್ನೊಂದು ಚಪ್ಪಲ್ ಸ್ವಲ್ಪ ದೂರ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿತ್ತು. ಸಂಜೀವ ಹಾಂಡರವರು ಕೊಡಮಣಿತ್ತಾಯ ದೈವಸ್ಥಾನದ ಬಳಿ ನೀರಿನ ತೋಡಿಗೆಬಿದ್ದು  ನೀರಿನ ರಭಸಕ್ಕೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ :

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget