ಕಾರ್ಕಳ: ಗ್ಯಾರೇಜ್ ನಲ್ಲಿ ರಿಪೇರಿಗೆಂದು ಟಿಪ್ಪರ್ ಗಳ ಬ್ಯಾಟರಿ ಕಳವು-Times of karkala




ಕಾರ್ಕಳ: ಗ್ಯಾರೇಜ್ ನಲ್ಲಿ ರಿಪೇರಿಗೆಂದು ಟಿಪ್ಪರ್ ಗಳ  ಬ್ಯಾಟರಿ ಕಳವು 

ರಿಪೇರಿಗೆಂದು  ಗ್ಯಾರೇಜಿನಲ್ಲಿ ನಿಲ್ಲಿಸಿದ ಟಿಪ್ಪರ್ ನಿಂದಲೇ ಬ್ಯಾಟರಿ ಕಳವುಗೈದ ಘಟನೆ ನಡೆದಿದೆ.

ದೂರುದಾರ ಕೆ ಶಶಿಕಾಂತ್ ಹೆಬ್ಬಾರ್ ರವರ ಮಾಲೀಕತ್ವದ ಕಾರ್ಕಳ ಆನೆಕೆರೆ ಭವಾನಿ ಮಿಲ್‌ ಬಳಿ ಬಾಟಾ ಶೋ ರೂಂ ಮುಂಭಾಗದ K B T  ಟ್ರಕ್  ಸರ್ವಿಸ್ ಎಂಬ ಗ್ಯಾರೇಜಿನಲ್ಲಿ  ಅ.13 ರಂದು  ರಾತ್ರಿ 9:00 ಗಂಟೆಗೆ ಗ್ಯಾರೇಜ್‌ಗೆ ಬಾಗಿಲು ಹಾಕಿ ಮನೆಗೆ ಹೋಗಿದ್ದು ಮರುದಿನ ಬೆಳಿಗ್ಗೆ 8:30 ಗಂಟೆಗೆ ಗ್ಯಾರೇಜ್‌ಗೆ ಬಂದಿದ್ದು ಬಳಿಕ ಗ್ಯಾರೇಜ್‌ನ ಮುಂಭಾಗದ ಸ್ಥಳದಲ್ಲಿ ರಿಪೇರಿಗೆ ನಿಲ್ಲಿಸಿದ್ದ 2 ಟಿಪ್ಪರ್ ಲಾರಿಗಳನ್ನು ಪರಿಶೀಲಿಸಿದಾಗ  KA 19 AC 617 ಮತ್ತು  KA 21 A 50 ನಂಬ್ರದ ಟಿಪ್ಪರ್ ಲಾರಿಗಳಿಗೆ ಅಳವಡಿಸಿದ ಒಟ್ಟು ರೂ. 20,000/- ಮೌಲ್ಯದ ಬ್ಯಾಟರಿ ಕಳವಾಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಶಶಿಕಾಂತ್ ಹೆಬ್ಬಾರ್ ರವರು ಟಿಪ್ಪರ್ ಲಾರಿ ಮಾಲಕರಾದ ಗಣೇಶ್ ಶೆಟ್ಟಿಯವರಿಗೆ  ಮಾಹಿತಿ ತಿಳಿಸಿದ್ದು. ಬಳಿಕ ಇಬ್ಬರೂ ಕಳವಾದ ಬ್ಯಾಟರಿಯನ್ನು  ಹುಡುಕಾಡಿದರೂ ಬ್ಯಾಟರಿ ಪತ್ತೆಯಾಗಿಲ್ಲ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget