ಕುಕ್ಕುಂದೂರು:ಮನೆಯಂಗಳಕ್ಕೆ ಬಂದು ಮಹಿಳೆಯರ ಮೇಲೆ ಹಲ್ಲೆ,ಸ್ಥಳಕ್ಕೆ ಹಿಂಜಾವೇ ಪ್ರಮುಖರ ಭೇಟಿ-Times of karkala

ಕುಕ್ಕುಂದೂರು:ಮನೆಯಂಗಳಕ್ಕೆ ಬಂದು  ಮಹಿಳೆಯರ  ಮೇಲೆ ಹಲ್ಲೆ,ಸ್ಥಳಕ್ಕೆ ಹಿಂಜಾವೇ ಪ್ರಮುಖರ ಭೇಟಿ


ಮನೆಯಂಗಳಕ್ಕೆ ಬಂದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕುಕ್ಕುಂದೂರು ಗ್ರಾಮದ  ಪಿಲಿಚಂಡಿಸ್ಥಾನ ಬಳಿ ವರದಿಯಾಗಿದೆ.ಹುಸೇನ್ ಎಂಬಾತ ಹಲ್ಲೆ ನಡೆಸಿದಾತ.



ದಿನಾಂಕ  ಅ.27 ರಂದು ರಾತ್ರಿ ಕುಕ್ಕುಂದೂರು ಗ್ರಾಮದ  ಪಿಲಿಚಂಡಿಸ್ಥಾನ ಬಳಿ ನಿವಾಸಿಯಾದ  ಜ್ಯೋತಿ ಎಂಬುವವರು ತನ್ನ ತಾಯಿ ನಲ್ಲಮ್ಮರೊಂದಿಗೆ ತಮ್ಮ ಮನೆಯ ಪಕ್ಕದಲ್ಲಿರುವ ಗಂಡನ ಅಣ್ಣನ ಹೆಂಡತಿ ದುರ್ಗಾ ಎಂಬುವವರ ಮನೆಯಲ್ಲಿ ಟಿ ವಿ ನೋಡುತ್ತಿರುವ ಸಮಯ ಹುಸೇನ್ ಎಂಬಾತನು ತನ್ನ ಮನೆಯಲ್ಲಿ ನಿಂತುಕೊಂಡು ದುರ್ಗಾಳನ್ನು ಉದ್ದೇಶಿಸಿ ಫ್ಯಾಕ್ಟರಿಗೆ ಹೋಗಿ ತಡವಾಗಿ ಬರುತ್ತೀಯ ಎಂದು ಕೇಳಿದ್ದಾನೆ.

ಆಗ ದುರ್ಗಾಳು ಹೊರಗೆ ಬಂದು ನಿನಗೆ ನನ್ನ ವಿಚಾರ ಯಾಕೆ ಎಂದು ಕೇಳಿದಾಗ ಹುಸೇನ್ ಕತ್ತಿಯನ್ನು ಹಿಡಿದುಕೊಂಡು ದುರ್ಗಾಳ ಮನೆಯ ಅಂಗಳಕ್ಕೆ ಬಂದು ಕತ್ತಿಯಿಂದ ದುರ್ಗಾಳಿಗೆ ಕಡಿಯಲು ಬಂದಾಗ ಜ್ಯೋತಿ ರವರು  ತಡೆದಿದ್ದು  ಬಲಕೈಗೆ ಗಾಯವಾಗಿದೆ.

ಹುಸೇನ್ ಪುನಃ ದುರ್ಗಾಳಿಗೆ ಕತ್ತಿಯಿಂದ ಹೊಡೆದು ತಲೆಗೆ ಗಾಯಗೊಳಿಸಿದ್ದಲ್ಲದೇ ,ತಾಯಿ ನಲ್ಲಮ್ಮರವರ ಕಾಲಿಗೆ ಕಲ್ಲನ್ನು ಎಸೆದು ಗಾಯಗೊಳಿಸಿದ್ದಾನೆ. ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೇ ಎಂದು  ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

ಘಟನಾ ಸ್ಥಳಕ್ಕೆ ಕಾರ್ಕಳ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಭೇಟಿ ನೀಡಿ ಮನೆಯವರಿಗೆ ಧೈರ್ಯತುಂಬಿದ್ದಾರೆ.









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget