ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಶಾಲೆಯ ಗೌರವ ಶಿಕ್ಷಕರ ಸಂಭಾವನೆಗೆ ಚೆಕ್ ಹಸ್ತಾಂತರ-Times of karkala





ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಶಾಲೆಯ ಗೌರವ ಶಿಕ್ಷಕರ ಸಂಭಾವನೆಗೆ ರೂ.10,000/- ಮೊತ್ತದ ಚೆಕ್ ಹಸ್ತಾಂತರ 

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇತ್ತೀಚೆಗೆ ಬಹಳಷ್ಟು ಕಡಿಮೆಯಾಗುತ್ತಿದೆ ನಮ್ಮ ನೆರೆಯ ಕೆಲವು ಶಾಲೆಗಳು ಈಗಗಲೇ ಮುಚ್ಚಲ್ಪಟ್ಟಿವೆ.

ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ 65 ಮಕ್ಕಳು ವ್ಯಾಸಂಗ  ಮಾಡುತ್ತಿದ್ದಾರೆ. ಸರಕಾರದ ನಿಯಮದ ಪ್ರಕಾರ ಕೆದಿಂಜೆ ಶಾಲೆಯಲ್ಲಿ ಇಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಕೊರತೆಯನ್ನು ನೀಗಿಸಲು ಮೂವರು ಗೌರವ ಶಿಕ್ಷಕರನ್ನು ನೇಮಿಸಲಾಗಿದೆ. ಅವರಿಗೆ ಗೌರವ ಸಂಭಾವನೆ ನೀಡಬೇಕಾಗಿದೆ. 

ಈ ಬಗ್ಗೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಸ್ಥೆಗೆ ಕೆದಿಂಜೆ ಶಾಲೆಯ ಮುಖ್ಯ ಶಿಕ್ಷಕರು ನೀಡಿರುವ ಮನವಿಯ ಮೇರೆಗೆ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಘದ ಸದಸ್ಯರೆಲ್ಲರೂ ಸೇರಿಕೊಂಡು ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹ ಮಾಡಿ ರೂ.10,000/- ಮೊತ್ತದ ಚೆಕ್ ಅನ್ನು ಶಾಲಾ ಮುಖ್ಯ ಶಿಕ್ಷಕರಾದ ಪೃಥ್ವಿರಾಜ್ ಬಲ್ಲಾಳ್ ರವರಿಗೆ ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅವರು  ಹಸ್ತಾಂತರಿಸಿದರು.

ಸುಮಾರು 86 ವರ್ಷಗಳ ಸುದೀರ್ಘ ಇತಿಹಾಸವಿರುವ ಕೆದಿಂಜೆ ಶಾಲೆಯನ್ನು ನಾವೆಲ್ಲರೂ ಸೇರಿ ಉಳಿಸಲು ಇನ್ನೂ ಮುಂದಿನ ದಿನಗಳಲ್ಲೂ ನಮ್ಮಿಂದಾದ ಸಹಕಾರವನ್ನು ನೀಡುತ್ತೇವೆ ಎಂದು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ಉದಯ ಅಂಚನ್, ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬಿರೋಟ್ಟು ಮತ್ತು ಸತೀಶ್ ಪೂಜಾರಿ ಅಬ್ಬನಡ್ಕ, ಉಪಾಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಕೋಶಾಧಿಕಾರಿ ವೀಣಾ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷರಾದ ಸುಲೋಚನ ಕೋಟ್ಯಾನ್, ಸದಸ್ಯರಾದ ಪದ್ಮಶ್ರೀ ಪೂಜಾರಿ ಅಬ್ಬನಡ್ಕ ಮೊದಲಾದವರಿದ್ದರು.

ಜಾಹೀರಾತು 
























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget